ಕರ್ನಾಟಕ

karnataka

ETV Bharat / entertainment

'ಶಾಕುಂತಲಂ' 25 ವರ್ಷದ ವೃತ್ತಿ ಬದುಕಿಗೆ ದೊಡ್ಡ ಹೊಡೆತ: ನಿರ್ಮಾಪಕ ದಿಲ್​ ರಾಜು - etv bharat kannada

'ಶಾಕುಂತಲಂ' ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಬಹು ದೊಡ್ಡ ಹಿನ್ನೆಡೆ ಎಂದು ನಿರ್ಮಾಪಕ ದಿಲ್​ ರಾಜು ಹೇಳಿದ್ದಾರೆ.

shakuntalam
ಶಾಕುಂತಲಂ

By

Published : Apr 30, 2023, 10:17 AM IST

ನಟಿ ಸಮಂತಾ ರುತ್​ ಪ್ರಭು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಇತ್ತೀಚಿನ ಚಿತ್ರ 'ಶಾಕುಂತಲಂ'. ಗುಣಶೇಖರ್​ ನಿರ್ದೇಶನದ ಈ ಪೌರಾಣಿಕ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ನೀಲಿಮಾ ಗುಣ (ಗುಣಶೇಖರ್​ ಮಗಳು) ಮತ್ತು ದಿಲ್​ ರಾಜು ನಿರ್ಮಿಸಿದ 'ಶಾಕುಂತಲಂ' ನಿರೀಕ್ಷಿತ ಮಟ್ಟ ತಲುಪುವಲ್ಲಿ ಹಿನ್ನೆಡೆಯಾಯಿತು. ಇದೀಗ ಚಿತ್ರ ಫ್ಲಾಪ್​ ಆದ ಬಗ್ಗೆ ದಿಲ್​ ರಾಜು ಪ್ರತಿಕ್ರಿಯಿಸಿದ್ದಾರೆ. ಶಾಕುಂತಲಂ ಫಲಿತಾಂಶವು ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಬಹು ದೊಡ್ಡ ಹಿನ್ನೆಡೆ ಆಗಿದೆ ಎಂದು ಇತ್ತೀಚೆಗೆ ಅವರು ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

"ಶಾಕುಂತಲಂ ನನ್ನ 25 ವರ್ಷಗಳ ಸಿನಿಮಾ ವೃತ್ತಿ ಬದುಕಿಗೆ ದೊಡ್ಡ ಹೊಡೆತವನ್ನು ನೀಡಿದೆ. ಪ್ರೇಕ್ಷಕರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ನಾನು ಈ ಸಿನಿಮಾದಲ್ಲಿ ನಂಬಿಕೆ ಇಟ್ಟಿದ್ದೆ. ಪ್ರೇಕ್ಷಕರು ಇದನ್ನು ಇಷ್ಟಪಟ್ಟಿದ್ದರೆ ಬೆಂಬಲಿಸುತ್ತಾರೆ. ಅವರು ಇಷ್ಟಪಡದಿದ್ದರೆ, ನನ್ನ ತೀರ್ಪು ತಪ್ಪು ಎಂದು ನಾನು ಭಾವಿಸುತ್ತೇನೆ. ಆ ತಪ್ಪು ಹೇಗೆ ಮತ್ತು ಎಲ್ಲಿ ನಡೆದಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ ಮುಂದೆ ಸಾಗುತ್ತೇನೆ. 'ಶಾಕುಂತಲಂ' ಚಿತ್ರದಲ್ಲಿ ನನ್ನ ತೀರ್ಪು ತಪ್ಪಾಗಿದೆ. ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದೇನೆ. ಅವುಗಳಲ್ಲಿ ನಾಲ್ಕೈದು ಮಾತ್ರ ಸೋಲು ಕಂಡಿವೆ. ಆ ಸಾಲಿಗೆ ಶಾಕುಂತಲಂ ಸಿನಿಮಾ ಕೂಡ ಸೇರಿದೆ" ಎಂದರು.

"‘ಶತಮಾನಂಭವತಿ’ ಸಿನಿಮಾದ ಸಮಯದಲ್ಲಿ ನಾವು ಒಂದು ದಿನ ಮೊದಲು ಯುಎಸ್​ನಲ್ಲಿ ಪ್ರೀಮಿಯರ್ ಮಾಡಿದ್ದೆವು. ಅಲ್ಲಿ ಎಲ್ಲರಿಗೂ ಇಷ್ಟವಾಯಿತು. ನಾಲ್ಕು ದಿನಗಳ ಹಿಂದೆ 'ಶಾಕುಂತಲಂ' ತೋರಿಸಲಾಗಿತ್ತು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಹೀಗಾಗಿ ಕೆಲವೊಂದು ಮಾತುಗಳನ್ನು ಕೇಳಬೇಕಾಗುತ್ತದೆ. ಹೆಚ್ಚಿನವರಿಗೆ ಆ ಚಿತ್ರ ಇಷ್ಟವಾಗದಿದ್ದರೆ ಅದು ಫ್ಲಾಪ್ ಆಗಿದೆ ಎಂದರ್ಥ. ಶುಕ್ರವಾರ ಮುಗಿದರೆ ಆ ಸಿನಿಮಾದ ಫಲಿತಾಂಶದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೇನೆ. ಶನಿವಾರದಿಂದ ಹೊಸ ಸಿನಿಮಾಗಳತ್ತ ಗಮನ ಹರಿಸುತ್ತೇನೆ. ತಪ್ಪುಗಳು ಮರುಕಳಿಸದಂತೆ ಮುಂದಿನ ಪ್ರಾಜೆಕ್ಟ್‌ಗಳನ್ನು ಎರಡು ಬಾರಿ ಪರಿಶೀಲಿಸುತ್ತೇನೆ'' ಎಂದು ಹೇಳಿದರು.

ತಮಿಳಿನ ಹಿಟ್​ ಸಿನಿಮಾ 96 ತೆಲುಗು ರಿಮೇಕ್​ನಲ್ಲೂ ತಮ್ಮ ಭವಿಷ್ಯ ತಪ್ಪಾಗಿದೆ ಎಂದು ನಿರ್ಮಾಪಕ ದಿಲ್​ ರಾಜು ನೆನಪಿಸಿಕೊಂಡರು. "ಆ ಸಿನಿಮಾವನ್ನು ಅಲ್ಲು ಅರ್ಜುನ್, ನಾನಿ ಸೇರಿದಂತೆ ಇನ್ನೂ ಕೆಲವರಿಗೆ ತೋರಿಸಿದರೆ ತುಂಬಾ ಒಳ್ಳೆಯದು ಎಂದಿದ್ದಾರೆ. ಆದರೆ ಆ ಸಮಯದಲ್ಲಿ, ಕೊರೊನಾದಿಂದಾಗಿ ಚಿತ್ರವನ್ನು ಹೆಚ್ಚು ಜನರು OTT ನಲ್ಲಿ ವೀಕ್ಷಿಸಿದರು. ಆ ನಂತರ ‘ಜಾನು’ ಬಿಡುಗಡೆಯಾಯಿತು. ಆದರೆ ‘96’ ಸಿನಿಮಾ ನೋಡಿದ ಫೀಲ್ ಅನ್ನು ಪ್ರೇಕ್ಷಕರಿಗೆ ಈ ಸಿನಿಮಾದಿಂದ ಎಂಜಾಯ್ ಮಾಡಲಾಗಲಿಲ್ಲ. 'ಜಾನು' ಮತ್ತು 'ಜೆರ್ಸಿ' ಸಿನಿಮಾಗಳ ಬಗ್ಗೆ ನಾನು ಅರ್ಥಮಾಡಿಕೊಂಡಿದ್ದು ಹೀಗೆ" ಎಂದರು.

ಮುಂದುವರೆದು, "ಒಟಿಟಿಯಲ್ಲಿ ಬಿಡುಗಡೆಯಾದ ನಂತರ ಯಾವುದೇ ಚಿತ್ರವನ್ನು ರಿಮೇಕ್ ಮಾಡಬಾರದು. ಆದರೆ ಈ ಎರಡು ಚಿತ್ರಗಳ ಬಗ್ಗೆ ನಾವು ಮೊದಲೇ ನಿರ್ಧರಿಸಿದ್ದರಿಂದ ಹಿಂತಿರುಗಲು ಸಾಧ್ಯವಾಗಲಿಲ್ಲ. ಸದ್ಯ ರಾಮ್ ಚರಣ್ ಜೊತೆ 'ಗೇಮ್ ಚೇಂಜರ್' ಮಾಡುತ್ತಿದ್ದೇನೆ. ಇದಾದ ನಂತರ ಎನ್ ಟಿಆರ್ ಮತ್ತು ಪ್ರಭಾಸ್ ಜೊತೆ ಸಿನಿಮಾ ಮಾಡುತ್ತೇನೆ. ಆದರೆ ಅವರಿಗೆ ಈಗಿರುವ ಸಿನಿಮಾಗಳ ಶೂಟಿಂಗ್​ ಮುಗಿದ ನಂತರವೇ ಚಿತ್ರ ನಮ್ಮ ಬ್ಯಾನರ್​ನಲ್ಲಿ ಬರಲಿದೆ" ಎಂದು ದಿಲ್​ ರಾಜು ತಿಳಿಸಿದರು.

ಇದನ್ನೂ ಓದಿ:ಜೀವನದ 'ಸಿಹಿ-ಕಹಿ' ಮೆಲುಕು ಹಾಕಿದ ಚಂದ್ರು: ನೂರು ರೂಪಾಯಿಯಲ್ಲಿ ಕರ್ನಾಟಕ ಸುತ್ತಿದ ಸಾಧಕ

ABOUT THE AUTHOR

...view details