ಚಿತ್ರರಂಗದಲ್ಲಿ ಮಹಿಳೆಯರು ಮಾತ್ರ ಫಿಟ್ ಆಗಿರಬೇಕು. ಪುರುಷರಿಗೆ ಯಾಕೆ ಇದು ಅನ್ವಯಿಸಲ್ಲ ಎಂದು ಟೀಕಿಸಿದ್ದ ನಟಿ ರಮ್ಯಾ ಹೇಳಿಕೆಗೆ ನಟಿ ಪ್ರಿಯಾಂಕಾ ಉಪೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ನಟಿಯರನ್ನು ಅಳೆಯುವುದು ಹೆಚ್ಚು. ಇದು ಒತ್ತಡಕ್ಕೆ ಕಾರಣವಾಗುತ್ತದೆ ಎಂಬುದನ್ನು ಪ್ರಿಯಾಂಕಾ ಹೇಳಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಅರ್ಧಾಂಗಿ ಧಾರಾವಾಹಿ ಕುರಿತಾಗಿ ನಡೆದ ಕಾರ್ಯಕ್ರಮದಲ್ಲಿ ನಟಿ ಚೇತನಾ ಸಾವಿನ ಬಗ್ಗೆ ಮಾತನಾಡಿದ ಪ್ರಿಯಾಂಕಾ ಅವರು, ಚೇತನಾರಾಜ್ ಸಾವಿನ ಬಗ್ಗೆ ತುಂಬಾ ಬೇಜಾರು ಆಯಿತು. ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನಗೂ ಕೂಡ ತುಂಬಾ ಜನ ದಪ್ಪ ಆಗಿದಿರಾ ಅಂತಾ ಕಾಮೆಂಟ್ ಮಾಡಿದರು. ತಾರೆಯರಿಗೆ ಇದು ಹೆಚ್ಚು ಒತ್ತಡ ಉಂಟು ಮಾಡುತ್ತದೆ ಎಂದರು.
ರಮ್ಯಾ ಹೇಳಿಕೆಗೆ ಪ್ರಿಯಾಂಕಾ ಉಪೇಂದ್ರ ಬೆಂಬಲ ಇಂತಹ ಒತ್ತಡದಲ್ಲಿ ಚೇತನಾರಾಜ್ ಕೂಡ ಇದ್ದರು ಅನಿಸುತ್ತೆ. ಯಾಕೆಂದರೆ ನಾನು ಇನ್ನೂ ಚೆನ್ನಾಗಿ ಕಾಣಿಸಿದ್ರೆ ಕೆಲಸ ಜಾಸ್ತಿ ಸಿಗಬಹುದು ಅಂತಾ ಅವರು ಈ ರೀತಿ ಮಾಡಿಕೊಂಡಿದ್ದಾರೆ. ನಾನು ಸಿನಿಮಾಗೆ ಬಂದಾಗ ಸಾಕಷ್ಟು ಕಾಮೆಂಟ್ ಮಾಡಿದ್ದರು. ನಿಮ್ಮ ಎತ್ತರ ಚಿಕ್ಕದು, ನಿಮ್ಮ ಕಣ್ಣು ಸಣ್ಣ ಅಂತೆಲ್ಲ ಮಾತನಾಡಿದ್ದರು. ಆದ್ರೆ ಆ ಕಾಮೆಂಟ್ಗಳನ್ನ ಎದುರಿಸಿ ಈವರೆಗೆ ಬಂದಿದ್ದೇನೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ರಮ್ಯಾ ಮಾಡಿದ ಟ್ಟೀಟ್ ವಿಚಾರವಾಗಿ ಮಾತನಾಡಿ, ರಮ್ಯಾ ಹೇಳಿರೋದು ಸತ್ಯವಿದೆ. ಯಾಕೆಂದರೆ ನಟಿಯರಿಗೆ ಮದುವೆ ಆದ ಮೇಲೆ ಅವಕಾಶಗಳು ಕಡಿಮೆ ಆಗುತ್ತವೆ. ಮಕ್ಕಳು ಆದ ಮೇಲೆ ಬ್ಯೂಟಿ ಇರಲ್ಲ, ದಪ್ಪ ಆಗಿದ್ದಾರೆ ಎಂಬ ಕಾರಣಕ್ಕೆ ಹೀರೋ ಅಕ್ಕನ ಪಾತ್ರ ಅಥವಾ ತಂಗಿ ಪಾತ್ರಗಳು ಸಿಗುತ್ತವೆ. ಆದರೆ, ಹೀರೋಗಳಿಗೆ ಈ ಮಾನದಂಡ ಇಲ್ಲ. ವಯಸ್ಸು 65 ಆದರೂ ತಲೆಗೆ ವಿಗ್ ಹಾಕ್ಕೊಂಡು ನಟಿಸುತ್ತಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಓದಿ:ಸಿನಿಮಾ ರಂಗದಲ್ಲಿ ಯುವ ನಟಿಯರ ಸರಣಿ ಸಾವುಗಳು: ತೆರೆಮರೆಗೆ ಸರಿದ ಮತ್ತೊಬ್ಬ ಯುವ ನಟಿ