ಕರ್ನಾಟಕ

karnataka

ETV Bharat / entertainment

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ NTR 31: ಆರ್‌ಆರ್‌ಆರ್‌ ಸ್ಟಾರ್​ಗೆ ಜೋಡಿಯಾಗಲಿದ್ದಾರೆ ಪ್ರಿಯಾಂಕಾ ಚೋಪ್ರಾ - devara

ಪ್ರಶಾಂತ್ ನೀಲ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಜೂ. ಎನ್‌ಟಿಆರ್‌ ಜೊತೆ ಬಾಲಿವುಡ್​, ಹಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬ ವರದಿಗಳಿವೆ.

Priyanka chopra to Jr NTR movie
ಜೂ ಎನ್‌ಟಿಆರ್‌ ಜೋಡಿಯಾಗಲಿದ್ದಾರೆ ಪ್ರಿಯಾಂಕಾ ಚೋಪ್ರಾ

By

Published : Jun 7, 2023, 11:36 AM IST

2022ರಲ್ಲಿ ಧೂಳೆಬ್ಬಿಸಿರುವ 'ಆರ್‌ಆರ್‌ಆರ್‌' ಚಿತ್ರದ ದೊಡ್ಡ ಯಶಸ್ಸಿನ ನಂತರ ಯಂಗ್‌ ಟೈಗರ್‌, ಜೂ. ಎನ್‌ಟಿಆರ್‌ ಅವರ ಸಿನಿಮಾ ಲಿಸ್ಟ್ ದೊಡ್ಡದಿದೆ. ಸದ್ಯ ಕೊರಟಾಲ ಶಿವ ನಿರ್ದೇಶನದಲ್ಲಿ 'ದೇವರ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಟಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಇದರ ನಂತರ ಅವರು 'KGF' ಖ್ಯಾತಿಯ ಪ್ರಶಾಂತ್ ನೀಲ್ (ಎನ್‌ಟಿಆರ್ 31 ಚಿತ್ರ) ಜೊತೆ ಬಿಗ್​​ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಸಿನಿಪ್ರೇಮಿಗಳಲ್ಲಿ ಭಾರೀ ನಿರೀಕ್ಷೆಗಳಿವೆ. ಆದರೆ, ಇದೀಗ ಅವರ ಮುಂದಿನ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ಎಂಟ್ರಿ:ಈ ಚಿತ್ರದಲ್ಲಿ ಜೂನಿಯರ್​ ಎನ್​​ಟಿಆರ್​​ ಜೋಡಿಯಾಗಿ ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬ ವರದಿಗಳಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ ದೀಪಿಕಾ ಪಡುಕೋಣೆ ಹಾಗೂ ಮೃಣಾಲ್ ಠಾಕೂರ್ ಹೆಸರು ಕೂಡ ಕೇಳಿ ಬಂದಿತ್ತು. ಈಗ ಪ್ರಿಯಾಂಕಾ ಬಹುತೇಕ ಕನ್ಫರ್ಮ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಲಿದೆ.

ಜೂ. ಎನ್​ಟಿಆರ್​ ಬಾಲಿವುಡ್​ ಚಿತ್ರ:ಆರ್​ಆರ್​ಆರ್​ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಜೂನಿಯರ್​ ಎನ್​​ಟಿಆರ್​ ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಚಿತ್ರ ಅಂತಿಮಗೊಂಡಿದೆ. ಸ್ಟಾರ್ ಹೀರೋ ಹೃತಿಕ್ ರೋಷನ್ ಅಭಿನಯದ 'ವಾರ್ 2' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಹೃತಿಕ್ ಖಚಿತಪಡಿಸಿದ್ದಾರೆ. ಈ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶಿಸಲಿದ್ದಾರೆ.

ನಿರ್ಮಾಪಕರಾಗಲಿರುವ ಜೂ. ಎನ್​ಟಿಆರ್​:ಈಗಾಗಲೇ ಹಲವು ಸ್ಟಾರ್ ಹೀರೋಗಳು ಪ್ರೊಡಕ್ಷನ್ ಹೌಸ್​ಗಳನ್ನು ಹೊಂದಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಆರ್​ಆರ್​ಆರ್​ ಸಹನಟ ರಾಮ್ ಚರಣ್ ಕೂಡ ತಮ್ಮ ಬ್ಯಾನರ್ ಆರಂಭಿಸಿದ್ದಾರೆ. ಸದ್ಯ ಎನ್​ಟಿಆರ್ ಕೂಡ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡುತ್ತಿರುವಂತಿದೆ. ಈ ಪ್ರೊಡಕ್ಷನ್ ಹೌಸ್ ಮೂಲಕ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶ ಹೊಂದಿದ್ದಾರೆ. ಸದ್ಯದಲ್ಲೇ ಈ ಬಗ್ಗೆಯೂ ಅಧಿಕೃತ ಘೋಷಣೆ ಬರಲಿದೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಿರ್ಮಾಪಕರಾಗಿ ಮೊದಲ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ:ಮದುವೆ ಬಗ್ಗೆ ಬಹಿರಂಗಪಡಿಸಿದ ನಟ ಪ್ರಭಾಸ್: ಎಲ್ಲಿ, ಯಾವಾಗ, ವಧು ಯಾರು?

ಇನ್ನೂ 'ದೇವರ' ಸಿನಿಮಾ ಶೂಟಿಂಗ್​ ಶರವೇಗದಲ್ಲಿ ನಡೆಯುತ್ತಿದೆ. ಇದೊಂದು ಆ್ಯಕ್ಷನ್ ಚಿತ್ರವಾಗಿದ್ದು, ಶಕ್ತಿಶಾಲಿ ಪಾತ್ರದಲ್ಲಿ ಜೂ. ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಎನ್​ಟಿಆರ್​ ಆರ್ಟ್ಸ್ ಮತ್ತು ಯುವ ಸುಧಾ ಆರ್ಟ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಜಾನ್ವಿ ಕಪೂರ್ ನಾಯಕ ನಟಿಯಾದರೆ, ಸೈಫ್ ಅಲಿ ಖಾನ್ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರ ಮುಂದಿನ ವರ್ಷ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಆದಿಪುರುಷ್ ಪ್ರೀ ರಿಲೀಸ್​ ಈವೆಂಟ್.. ಫೋಟೋಗಳಲ್ಲಿ​​ ನೋಡಿ

ABOUT THE AUTHOR

...view details