ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್ನಲ್ಲಿ ನಡೆಯುತ್ತಿರುವ SAG AFTRA ಮುಷ್ಕರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ಹೆಡ್ಸ್ ಆಫ್ ಸ್ಟೇಟ್ ಶೂಟಿಂಗ್ಗೂ ತಡೆ ಇದ್ದು, ಈ ಮಧ್ಯೆ ಪ್ರಿಯಾಂಕಾ SAF - AFTRA (Screen Actors Guild-American Federation of Radio and Television Artists) ಮುಷ್ಕರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಪ್ರಪಂಚದ ಕೆಲ ಭಾಗಗಳಲ್ಲಿ 'ರಾಜಕೀಯ ನಿಲುವುಗಳ ಹಿನ್ನೆಲೆ ನಟರನ್ನು ಶಿಕ್ಷಿಸುವುದಿಲ್ಲ' ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಿಲುವೇನು?ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ''ನಾನು ನನ್ನ ಒಕ್ಕೂಟ ಮತ್ತು ಸಹುದ್ಯೋಗಿಗಳೊಂದಿಗೆ ನಿಲ್ಲುತ್ತೇನೆ. ಒಗ್ಗಟ್ಟಿನಿಂದ ನಾವು ಉತ್ತಮ ನಾಳೆಯನ್ನು ನಿರ್ಮಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ. ಈ ಮುಷ್ಕರದಿಂದಾಗಿ ನಟಿಯ ಮುಂಬರುವ ಹಾಲಿವುಡ್ ಪ್ರಾಜೆಕ್ಟ್ ಹೆಡ್ಸ್ ಆಫ್ ಸ್ಟೇಟ್‌ನ ಚಿತ್ರೀಕರಣವೂ ಕೂಡ ಅದ್ಯಕ್ಕೆ ಸ್ಥಗಿತಗೊಳ್ಳುತ್ತದೆ ಅಥವಾ ಮುಂದೂಡಲ್ಪಡುತ್ತದೆ ಎಂದು ಹಲವು ವರದಿಗಳು ಹೇಳಿವೆ.
ಪ್ರಿಯಾಂಕಾ ಈ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. "ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ರಾಣಿ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ "ಉತ್ತಮ" ಎಂದು ಬರೆದಿದ್ದಾರೆ. ಸ್ವರಾ ಭಾಸ್ಕರ್ ಕೂಡ ಹಿಂದೆ ಸರಿದಿಲ್ಲ.
ರಾಜಕೀಯ ನಿಲುವು ನಟರ ಮೇಲೆ ಪರಿಣಾಮ ಬೀರಲ್ಲ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಈ ಮುಷ್ಕರಕ್ಕೆ ಹಾಲಿವುಡ್ ನಟರು ಬೆಂಬಲ ನೀಡುವುದರ ಕುರಿತಾಗಿರುವ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ. ಈ ವರದಿಯನ್ನು ಹಂಚಿಕೊಂಡ ಸ್ವರಾ, ವಿದೇಶದಲ್ಲಿ ರಾಜಕೀಯ ಚಟುವಟಿಕೆಗಳ ಹಿನ್ನೆಲೆ ಕಲಾವಿದರು ಯಾವುದೇ ಪರಿಣಾಮಗಳನ್ನು (ದಂಡ, ಶಿಕ್ಷೆ, ಟೀಕೆ) ಎದುರಿಸುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಸ್ವರಾ ಭಾಸ್ಕರ್ ಅವರು ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಆಗಾಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಈ ಹಿನ್ನೆಲೆ ಕೆಲವೊಮ್ಮೆ ಟ್ರೋಲ್ಗೊಳಗಾಗುತ್ತಾರೆ. ಸದ್ಯ ಹಾಲಿವುಡ್ ವಿಚಾರ ತೆಗೆದುಕೊಂಡು, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅಲ್ಲಿನವರಿಗೆ ಪರೋಕ್ಷವಾಗಿ ತಮ್ಮ ಮೆಚ್ಚುಗೆ ಕೊಟ್ಟಿದ್ದಾರೆ. ಜೊತೆಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.