ಲಾಸ್ ಏಂಜಲೀಸ್:ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಪ್ರಪಂಚದ ಐಕಾನಿಕ್ ಜೋಡಿಗಳ ಪೈಕಿ ಪ್ರಮುಖರಾದ ಇವರ ಪ್ರತೀ ವಿಷಯವೂ ಕ್ಷಣಮಾತ್ರದಲ್ಲಿ ವೈರಲ್ ಆಗಿ ದೊಡ್ಡ ಸುದ್ದಿಯಾಗುತ್ತದೆ. ಈ ದಂಪತಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಹ ಸಾಕಷ್ಟು ಕುತೂಹಲದಲ್ಲಿರುತ್ತಾರೆ. ನಿಕ್ ಅವರ ಹೊಂದಾಣಿಕೆಯ ಟ್ಯಾಟೂ ಬಗ್ಗೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಟ್ಯಾಟೂ:ಇತ್ತೀಚಿನ ಸಂದರ್ಶನವೊಂದರಲ್ಲಿ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ತಮ್ಮ ಹಚ್ಚೆಗಳ (tattoos) ಬಗ್ಗೆ ಮಾತನಾಡಿದ್ದಾರೆ. ತಾನು ಮತ್ತು ಪತಿ ನಿಕ್ ಹೊಂದಾಣಿಕೆಯ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ದಿವಂಗತ ತಂದೆಯ ಕೈಬರಹ, ಪ್ರಪಂಚದ ನಕ್ಷೆ ಮತ್ತು ಮೂರು ಹೆಜ್ಜೆಗಳ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.
ಪತಿಯ ಟ್ಯಾಟೂಗೆ ಹೊಂದಿಕೆಯಾಗುವ ಹಚ್ಚೆ: ಪ್ರಿಯಾಂಕಾ ಚೋಪ್ರಾ ತಮ್ಮ ಕಿವಿಯ ಹಿಂದಿನ ಟ್ಯಾಟೂ ಬಗೆಗಿನ ವಿಶೇಷ ಅರ್ಥವನ್ನು ವಿವರಿಸಿದರು. ಈ ಟ್ಯಾಟೂ ತನ್ನ ಪತಿ ನಿಕ್ ಅವರ ದೇಹದ ಮೇಲೂ ಇದೆ ಎಂದು ತಿಳಿಸಿದ ನಟಿ, ನನ್ನ ಕಿವಿಯ ಹಿಂದೆ ಒಂದು ಚೆಕ್ ಮತ್ತು ಬಾಕ್ಸ್ ಇದೆ. ನನ್ನ ಪತಿ ಅವರ ತೋಳುಗಳಲ್ಲಿ ಅದೇ ರೀತಿಯ ಹಚ್ಚೆಗಳನ್ನು ಹೊಂದಿದ್ದಾರೆಂದು ತಿಳಿಸಿದರು. ನನಗೆ ಪ್ರಪೋಸ್ ಮಾಡಿದ್ದ ವೇಳೆ, ನಾನು ಅವರ ಎಲ್ಲಾ ಬಾಕ್ಸ್ಗಳನ್ನು ಚೆಕ್ ಮಾಡಿದ್ದರ ಬಗ್ಗೆ ನನ್ನಲ್ಲಿ ಕೇಳಿದ್ದರು, ಮತ್ತೊಂದು ಬಾಕ್ಸ್ ಚೆಕ್ ಮಾಡಲೇ ಎಂಂದು ಕೇಳಿದ್ದೆ. ಆ ನೆನಪಿನ ಸಲುವಾಗಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:'ಇನ್ಮುಂದೆ ನಾವು ಮಿಸ್ಟರ್ & ಮಿಸೆಸ್ ಸಿಂಹ' ಎಂದ ನಟಿ ಹರಿಪ್ರಿಯಾ