ಕರ್ನಾಟಕ

karnataka

ETV Bharat / entertainment

ಪ್ರಿಯಾಂಕಾರ ಪೋನಿಟೇಲ್ ಬಿಚ್ಚಿದ ಪತಿ ನಿಕ್​​ - ಫನ್ನಿ ವಿಡಿಯೋ ನೋಡಿ - ಪ್ರಿಯಾಂಕಾ ನಿಕ್ ವಿಡಿಯೋ

ನಟಿ ಪ್ರಿಯಾಂಕಾ ಚೋಪ್ರಾ ಫನ್ನಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

Priyanka Chopra shared her funny video
ಪ್ರಿಯಾಂಕಾ ಚೋಪ್ರಾ ದಂಪತಿ

By

Published : Jul 16, 2023, 1:38 PM IST

ಗ್ಲೋಬಲ್ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​​ ಗಾಯಕ ನಿಕ್ ಜೋನಾಸ್ ದಂಪತಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ದಂಪತಿಯ ವಯಸ್ಸಿನ ವ್ಯತ್ಯಾಸ ಹಲವರ ಟೀಕೆಗೆ ಗುರಿಯಾದರೆ, ಹಲವರು ಈ ಸ್ಟಾರ್​ ಕಪಲ್​ ಅನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಜೋಡಿ ಬಗ್ಗೆ ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತುರರಾಗಿರುತ್ತಾರೆ. ಸೆಲೆಬ್ರಿಟಿ ಕಪಲ್​ ಶೇರ್ ಮಾಡುವ ಪ್ರತಿ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.

ಬಾಲಿವುಡ್​ ಮೂಲಕ ವೃತ್ತಿಜೀವನ ಆರಂಭಿಸಿ ಇದೀಗ ಜಗತ್ತಿನಾದ್ಯಂತ ಪರಿಯಚವಾಗಿರುವ ಹಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ, ಇನ್​ಸ್ಟಾಗ್ರಾಮ್​ನಲ್ಲಿ ಪತಿಯೊಂದಿಗಿನ ಸಿಹಿ ಕ್ಷಣದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಈ ದಂಪತಿ ವಿಂಬಲ್ಡನ್ ಫೈನಲ್ಸ್​ಗೆ ಒಟ್ಟಿಗೆ ಹಾಜರಾಗಿದ್ದರು. ತಮ್ಮ ಕಾರ್ ರೈಡ್ ಸಮಯದಲ್ಲಿ, ಪ್ರಿಯಾಂಕಾ ಕ್ಯಾಂಡಿಡ್ ವಿಡಿಯೋ ಸೆರೆ ಹಿಡಿದಿದ್ದಾರೆ. ಆ ಕ್ಲಿಪ್‌ನಲ್ಲಿ, ನಿಕ್ ಪ್ರಿಯಾಂಕಾರಾ ಪೋನಿಟೇಲ್ (ಜುಟ್ಟು) ಅನ್ನು ಬಿಚ್ಚಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಪ್ರಿಯಾಂಕಾ ನಗುತ್ತಾ ಆ ಕ್ಷಣವನ್ನು ಎಂಜಾಯ್​ ಮಾಡಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಿಕ್ ಜೋನಾಸ್ ತಮ್ಮ ವಿಂಬಲ್ಡನ್ ಮ್ಯಾಚ್ ಅನುಭವವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿ ದಂಪತಿ ವಿಂಬಲ್ಡನ್ ಟ್ರೋಫಿ ಎದುರು ಪೋಸ್ ನೀಡಿದರು. ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಅವರು ಟ್ಯುನಿಷಿಯಾದ ಓನ್ಸ್ ಜಬೇರ್ ಅವರನ್ನು ಮಣಿಸಿದ್ದು, ಈ ಮ್ಯಾಚ್​​ನ ಗೆಲುವಿನ ಉತ್ಸಾಹವನ್ನು ನಿಕ್​ ವ್ಯಕ್ತಪಡಿಸಿದರು.

ಪ್ರಿಯಾಂಕಾ ಚೋಪ್ರಾ ಕೆಲಸದ ವಿಚಾರ ಗಮನಿಸುವುದಾದರೆ, ಅಮೆಜಾನ್ ಪ್ರೈಮ್‌ನಲ್ಲಿ ಸಿಟಾಡೆಲ್ ವೆಬ್​ ಸೀರಿಸ್​ ಪ್ರಸಾರವಾಗುತ್ತಿದೆ. ರುಸ್ಸೋ ಬ್ರದರ್ಸ್‌ನ ಸ್ಪೈ ವೆಬ್ ಸೀರಿಸ್​ನಲ್ಲಿ ಪ್ರಿಯಾಂಕಾ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಡ್ರಾಮಾ ಲವ್ ಎಗೇನ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರ ಮುಂಬರುವ ಚಿತ್ರ ಹೆಡ್ಸ್ ಆಫ್ ಸ್ಟೇಟ್. ಜಾನ್ ಸೆನಾ ಮತ್ತು ಇಡ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಸದ್ಯ ಹಾಲಿವುಡ್​ನಲ್ಲಿ ಮುಷ್ಕರ ಜೋರಾಗಿರುವ ಹಿನ್ನೆಲೆಯಲ್ಲಿ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ:ಹಾಲಿವುಡ್​ ಪ್ರತಿಭಟನೆಗೆ ಪ್ರಿಯಾಂಕಾ ಸಾಥ್ - ವಿದೇಶದಲ್ಲಿ ರಾಜಕೀಯ ನಿಲುವು ನಟರ ಮೇಲೆ ಪರಿಣಾಮ ಬೀರಲ್ಲ ಎಂದ ಭಾರತೀಯ ನಟಿ

ಹಾಲಿವುಡ್​ನಲ್ಲಿ ಮುಷ್ಕರದ ಕಾವು ಜೋರಾಗಿದೆ. ನ್ಯಾಯಯುತ ವೇತನಕ್ಕಾಗಿ ಕಲಾವಿದರು ಮುಷ್ಕರ ನಡೆಸುತ್ತಿದ್ದಾರೆ. ಬರಹಗಾರರು ಮೇನಿಂದಲೇ ಹೋರಾಟ ಆರಂಭಿಸಿದ್ದು, ಇದೀಗ ನಟರು ಕೂಡ ಸಾಥ್ ನೀಡಿದ್ದಾರೆ. SAG-AFTRA ಸದಸ್ಯರು ಮುಷ್ಕರಕ್ಕಿಳಿದಿದ್ದು, ಅವರ್ಯಾರೂ ಎಲ್ಲಿಯೂ ಚಿತ್ರರಂಗಕ್ಕೆ ಸಂಬಂಧಪಟ್ಟ ಕೆಲಸ ಮಾಡುವಂತಿಲ್ಲ. ನಟಿ ಪ್ರಿಯಾಂಕಾ ಚೋಪ್ರಾ ಸಹ ಈ ಮುಷ್ಕರಕ್ಕೆ ಸಾಥ್ ನೀಡಿದ್ದು, ''ನಾನು ನನ್ನ ಸಹುದ್ಯೋಗಿಗಳೊಂದಿಗೆ ನಿಲ್ಲುತ್ತೇನೆ. ಒಗ್ಗಟ್ಟಿನಿಂದ ಉತ್ತಮ ನಾಳೆಯನ್ನು ನಿರ್ಮಿಸುತ್ತೇವೆ'' ಎಂದು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಡ್ಸ್ ಆಫ್ ಸ್ಟೇಟ್ ಶೂಟಿಂಗ್​ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇದನ್ನೂ ಓದಿ:'ಈ ಸಿನಿಮಾ ಚಿತ್ರೀಕರಣದ ವೇಳೆ ನನಗೆ 22 ವರ್ಷ': ನಟ ಸೂರ್ಯ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಮ್ಯಾ

ABOUT THE AUTHOR

...view details