ಬೆಂಗಳೂರು: ಜಾಗತಿಕ ಐಕಾನ್ ಆಗಿರುವ ಪ್ರಿಯಾಂಕಾ ಚೋಪ್ರಾ ಇದೀಗ ಮಾಲ್ತಿ ಮೇರಿ ತಾಯಿ ಕೂಡ. ಕಳೆದ ವರ್ಷ ಅಮ್ಮನಾಗಿ ಬಡ್ತಿ ಪಡೆದಿರುವ ಪ್ರಿಯಾಂಕಾ ಮಗಳ ಜನ್ಮದ ವೇಳೆ ಉಂಟಾಗಿರುವ ಒತ್ತಡದ ಕ್ಷಣಗಳ ಬಗ್ಗೆ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ಅವಧಿ ಪೂರ್ವವಾಗಿ ಜನಿಸಿದ ಮಾಲ್ತಿ ಮೇರಿ ಉಳಿಸಿಕೊಳ್ಳಲು ನಡೆಸಿದ ಹೋರಾಟ ಕುರಿತು ತಿಳಿಸಿದ್ದಾರೆ. ಮಗು ಜನಿಸಿದಾಗ ಅವಳ ಉಳಿವಿಗೆ 100 ದಿನಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟದ ವೇಳೆ ಗಂಡ ನಿಕ್ ಜೋನಸ್ ಬೆಂಬಲ ಕುರಿತು ಹಂಚಿಕೊಂಡಿದ್ದಾರೆ.
ಟಿವಿ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಪ್ರಿಯಾಂಕಾ, ಮಾಲ್ತಿ ಮೇರಿ ಹುಟ್ಟಿದಾಗ ಅವಳ ಪಕ್ಕದಲ್ಲಿ ನಾನು ಅಥವಾ ನಿಕ್ ಅನ್ನು ಸಮೀಪದಲ್ಲೇ ಇರುತ್ತಿದ್ದೆವು. ಮಗು ಹುಟ್ಟಿ ಮನೆಗೆ ಬಂದಾಗ ಕೆಲವು ದಿನಗಳ ಸಮಯದಲ್ಲಿ ಬಹುತೇಕ ರಾತ್ರಿಗಳಲ್ಲಿ ನಾನು ಸರಿಯಾಗಿ ನಿದ್ದೆಯನ್ನೇ ಮಾಡಲಿಲ್ಲ. ಪದೇ ಪದೆ ಹೋಗಿ ಮಗುವಿನ ಹೃದಯ ಬಡಿತ ಪರೀಕ್ಷಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಮಗು ಹುಟ್ಟಿದ ಸಮಯಲ್ಲಿ ಗಂಡ ನಿಕ್ ಜೋನಸ್ ಬೆಂಬಲದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಪ್ರಿಯಾಂಕಾ, ಮಗು ಜನನದ ವೇಳೆ ಆತ ವರ್ತಿಸಿದ ರೀತಿ ಗಂಡನ ಶಕ್ತಿಗೆ ಒಂದು ಉದಾಹರಣೆಯಾಗಿದೆ ಎಂದು ಬಣ್ಣಿಸಿದ್ದಾರೆ. ಮಗಳು ಹುಟ್ಟಿದಳು ಎಂದು ಕೇಳಿದಾಗ ಹೇಗೆ ನಾವು ಪ್ರತಿಕ್ರಿಯಿಸಬಹುದು ಎಂಬುದು ನನಗೆ ಗೊತ್ತಿರಲಿಲ್ಲ. ನನಗೆ ಅದರ ಬಗ್ಗೆ ಏನು ಐಡಿಯಾ ಇಲ್ಲದೇ ಹೋದಾಗ ಏನು ಮಾಡಲಿ ನೀವೇ ಹೇಳಿ ಎಂದರು. ಈ ವೇಳೆ ಇಬ್ಬರೂ ನಾವು ಆಸ್ಪತ್ರೆಗೆ ಕಾರು ಚಲಾಯಿಸಿಕೊಂಡು ಮುನ್ನಡೆದವು. ಆಕೆ ಹುಟ್ಟಿದಾಗಿನಿಂದ ನಮ್ಮಿಬ್ಬರಲ್ಲಿ ಯಾರನ್ನಾದರೂ ಒಬ್ಬರನ್ನು ಆಕೆ ನೋಡುತ್ತಲೇ ಇದ್ದಾಳೆ. ಯಾವಾಗಲೂ ನೋಡುತ್ತಲೇ ಇರುತ್ತಾಳೆ ಎಂದರು.