ಹಿಂದಿ ಸಿನಿಮಾಗಳಲ್ಲಿ ವೃತ್ತಿ ಜೀವನ ಆರಂಭಿಸಿ ಗ್ಲೋಬಲ್ ಐಕಾನ್ ಆಗಿ ಹೊರಹೊಮ್ಮಿರುವ ಪ್ರಿಯಾಂಕಾ ಚೋಪ್ರಾ ಪ್ರತಿಭಾನ್ವಿತ ನಟಿ ಮಾತ್ರವಲ್ಲದೇ, ತಾಯ್ತನದ ಕರ್ತವ್ಯವನ್ನೂ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆಗಾಗ್ಗೆ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಅವರು ಪುತ್ರಿ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಗಳು ಮಾಲ್ತಿ ಮತ್ತು ತಾಯಿ ಚೋಪ್ರಾ ಮೇಕಪ್ ಬ್ರಷ್‌ನೊಂದಿಗೆ ಆಡುತ್ತಿರುವುದನ್ನು ಕಾಣಬಹುದು.
ಈ ಫೋಟೋ ಲಂಡನ್ನಿಂದ ಬಂದಿದೆ. ಫೋಟೋಗೆ 'ಗ್ಲಾಮ್ ವಿತ್ ಮಮ್ಮಾ , ಎಂಎಂ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಮೆಚ್ಚಿನ ನಟಿ ಪ್ರಿಯಾಂಕಾ ಮತ್ತು ಮಾಲ್ತಿ ಮೇಲೆ ಅಭಿಮಾನಿಗಳು ಇನ್‌ಸ್ಟಾಗ್ರಾಮ್ ಕಾಮೆಂಟ್ ಸೆಕ್ಷನ್ನಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಅಗಿ ಸದ್ದು ಮಾಡುತ್ತಿದೆ.
ಪ್ರಿಯಾಂಕಾ ಅವರು ಕೆಲ ದಿನಗಳ ಹಿಂದೆ ಮಗಳೊಂದಿಗಿನ ಫೋಟೋವನ್ನು 'ಬೆಡ್ ಟೈಮ್ ಸ್ಟೋರಿ' ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಮಾಲ್ತಿ ಹಾಸಿಗೆಯ ಮೇಲೆ ಆರಾಮವಾಗಿ ಮತ್ತು ಮುದ್ದಾಗಿ ಮಲಗಿರುವ ಫೋಟೋ ಇದಾಗಿತ್ತು. ಈ ಫೋಟೋ ಕೂಡ ವೈರಲ್ ಆಗಿತ್ತು.
ಪ್ರಿಯಾಂಕಾ ಅವರು ಕೆಲ ದಿನಗಳವರೆಗೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಫೋಟೋಗಳನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲ ಫೋಟೋ ಹಂಚಿಕೊಂಡರಾದರೂ ಮಗಳ ಫೋಟೋವನ್ನು ಸಂಪೂರ್ಣವಾಗಿ ತೋರಿಸಿರಲಿಲ್ಲ. ಆದ್ರೆ ಜನವರಿ 30ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ದಿ ಜೋನಸ್ ಬ್ರದರ್ಸ್ ಅವರನ್ನು ಗೌರವಿಸುವ ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ ಸಮಾರಂಭದಲ್ಲಿ ಮಾಲ್ತಿ ಕಂಡುಬಂದಿದ್ದು, ಅಂದು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಅದವು. ಜೋನಾಸ್ ಸಹೋದರರು ಸಮಾರಂಭದ ಸ್ಟೇಜ್ನಲ್ಲಿ ಇದ್ದ ವೇಳೆ ಪ್ರಿಯಾಂಕಾ ತಮ್ಮ ಮಗಳೊಂದಿಗೆ ಮೊದಲ ಸಾಲಿನಲ್ಲಿ ಕುಳಿತು ಅವರನ್ನು ಹುರಿದುಂಬಿಸಿದ್ದರು.