ಬಾಲಿವುಡ್ನ ಮೋಸ್ಟ್ ಗ್ಲಾಮರಸ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌ನ ಟಾಪ್ ಬ್ಯೂಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪ್ರಿಯಾಂಕಾ, ನಿಕ್ ಜೋನಸ್ ಜೊತೆ ಮದುವೆಯಾದ ಬಳಿಕ ಅಮೆರಿಕದಲ್ಲಿ ಸೆಟ್ಲ್ ಆಗಿದ್ದು, ಇದೀಗ ಸೋನಾ ಹೋಮ್ ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಆರಂಭಿಸಿರುವುದರ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಸೋನಾ ಹೋಮ್ ಲಾಂಚ್ ಮಾಡಿದ 'ದೇಸಿ ಹುಡುಗಿ' ಪ್ರಿಯಾಂಕಾ ಚೋಪ್ರಾ - ಹೋಮ್‍ವೇರ್ ಲೈನ್ ಬ್ಯಾಂಡ್
ಬಾಲಿವುಡ್ ಹಾಗೂ ಹಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಕೇವಲ ನಟಿ ಮಾತ್ರವಲ್ಲ,ಉದ್ಯಮಿ ಕೂಡ ಹೌದು. ಇದೀಗ ಸೋನಾ ಹೋಮ್ (Sona Homes) ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಲಾಂಚ್ ಮಾಡಿದ್ದಾರೆ.
ಪ್ರಿಯಾಂಕಾ ಕೇವಲ ನಟಿ ಮಾತ್ರವಲ್ಲ, ಸಿನಿಮಾ ಜೊತೆಗೆ ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಠೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಉದ್ಯಮಿ ಕೂಡ ಹೌದು. ಕಳೆದ ವರ್ಷವಷ್ಟೆ ಯುಎಸ್‍ನಲ್ಲಿ 'ಸೋನಾ' ಎಂಬ ರೆಸ್ಟೊರೆಂಟ್ ಆರಂಭಿಸಿದ್ದರು. ಇದೀಗ ಸೋನಾ ಹೋಮ್ ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಆರಂಭಿಸಿರುವುದರ ಬಗ್ಗೆ ವಿಡಿಯೋವೊಂದನ್ನ ಶೇರ್ ಮಾಡಿ, ಅದರಲ್ಲಿ ಸೋನಾ ಹೋಮ್ ಬ್ರಾಂಡ್‍ನ ಕೆಲವು ವಸ್ತುಗಳನ್ನು ತೋರಿಸಿದ್ದಾರೆ. ಅಭಿಮಾನಿಗಳು ಸಹ ನಟಿಗೆ ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರೂಪದರ್ಶಿಯಾದ ಪಿಗ್ಗಿ; ಗ್ಲಾಮರ್ ಲುಕ್ಗೆ ಫಿದಾ ಆದ ನೆಟಿಜನ್ಸ್