ಮುಂಬೈ:ರೆಡ್ ಕಾರ್ಪೆಟ್ ವಿಚಾರಕ್ಕೆ ಬಂದರೆ ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂಬೈನಲ್ಲಿ ನಡೆದ ಅವರ ಅಂತಾರಾಷ್ಟ್ರೀಯ ವೆಬ್ ಸರಣಿ 'ಸಿಟಾಡೆಲ್' ನ ಏಷ್ಯಾ ಪೆಸಿಫಿಕ್ ಪ್ರೀಮಿಯರ್‌ನಲ್ಲಿ ಪ್ರಿಯಾಂಕಾ ವೈಡೂರ್ಯದ ನೀಲಿ ಬಣ್ಣದ ಹೈ-ಸ್ಲಿಟ್ ಗೌನ್‌ನಲ್ಲಿ ಮಿರ ಮಿರ ಮಿಂಚಿದರು. ಈ ಮೂಲಕ ತಮ್ಮ ಅಭಿಮಾನಿಗಳ ದಿಲ್ಬಡಿತ ಹೆಚ್ಚಾಗುವಂತೆ ಮಾಡಿದರು.
ನಟ ಜಿಮ್ ಸರ್ಭ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇತ್ತೀಚೆಗೆ ಸ್ಟ್ರೀಮಿಂಗ್ ಶೋ 'ರಾಕೆಟ್ ಬಾಯ್ಸ್'ನ ಎರಡನೇ ಸೀಸನ್‌ನಲ್ಲಿ ಜಿಮ್ ಕಾಣಿಸಿಕೊಂಡಿದ್ದರು. ಕಡಿಮೆ ಮೇಕಪ್ ಮೂಲಕ ಪ್ರಿಯಾಂಕಾ ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಅವರ ಕಣ್ಣುಗಳು ಕಾರ್ಯಕ್ರಮದ ಆಕರ್ಷಣೆ ಆಗಿದ್ದವು. ಪ್ರಿಯಾಂಕಾ 'ಸಿಟಾಡೆಲ್' ನ ಸಹನಟ ರಿಚರ್ಡ್ ಮ್ಯಾಡೆನ್ ಅವರೊಂದಿಗೆ ಪ್ರೀಮಿಯರ್ ನೈಟ್‌ನಲ್ಲಿ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ಇದನ್ನು ಓದಿ:'ರೈನ್ಬೋ' ಸಮಂತಾ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ.. ಶಾಕುಂತಲಂ ತಾರೆಯ ಅಭಿಮಾನಿಗಳ ಅಸಮಾಧಾನ
ರಿಚರ್ಡ್ ಚಾರ್ಕೋಲ್ ಗ್ರೇ ಸೂಟ್‌ನಲ್ಲಿ ಸಖತ್ ಆಗೇ ಕಂಡು ಬಂದರು. ಮತ್ತೊಂದೆಡೆ ಈ ಸಂದರ್ಭಕ್ಕಾಗಿ ಜಿಮ್‌ನ ಸಾರ್ಟೋರಿಯಲ್ ಆಯ್ಕೆಯು ಎಲ್ಲರ ಗಮನ ಸೆಳೆಯಿತು. ಸಮುದ್ರ ಹಸಿರು ಮತ್ತು ಕಡುಗೆಂಪು ಬಣ್ಣದೊಂದಿಗೆ ಅವರು ಆಕರ್ಷಕವಾಗಿ ಕಂಡು ಬಂದರು. ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಸಲಾದ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿ ಗಮನ ಸೆಳೆದರು. ಫ್ಲೋರಲ್-ಸ್ಕಲ್ ಪ್ರಿಂಟ್ ಬ್ಲೇಜರ್‌ನೊಂದಿಗೆ ಮಿಂಚಿದರು.