ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ಪತಿ, ಅಮೆರಿಕನ್ ಗಾಯಕ ನಿಕ್ ಜೋನಾಸ್ ದಂಪತಿ ಲಂಡನ್‌ನಲ್ಲಿ 'ಸಿಟಾಡೆಲ್' ಸ್ಪೆಷಲ್ ಶೋನಲ್ಲಿ ಭಾಗವಹಿಸಿ ಜಗತ್ತಿನ ಗಮನ ಸೆಳೆದಿದ್ದರು. ಶನಿವಾರದಂದು ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆಗೆ ಸಂಪೂರ್ಣ ಸಮಯ ಕಳೆದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮಗಳ ಜೊತೆಗಿನ ಒಂದೆರಡು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ರೀಯುನೈಟೆಡ್" ಎಂದು ಕ್ಯಾಪ್ಷನ್ ಕೂಡ ಕೊಟ್ಟು ಪ್ರೀತಿಯ ಎಮೋಜಿಗಳನ್ನು ಬಳಸಿದ್ದಾರೆ. ಚಿತ್ರದಲ್ಲಿ, ಪ್ರಿಯಾಂಕಾ ಚೋಪ್ರಾ ತಮ್ಮ ಮಗಳೊಂದಿಗೆ ಬಿಳಿ ಆಟಿಕೆ ವಿಮಾನದೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ನಿಕ್ ಜೋನಾಸ್ ಕೂಡ ಜೊತೆಗಿದ್ದು, ಫ್ಯಾಮಿಲಿ ಫೋಟೋ ಅಭಿಮಾನಿಗಳನ್ನು ಸೆಳೆದಿದೆ.
ಕೆಲಸದ ವಿಚಾರ ಗಮನಿಸುವುದಾದರೆ, ಎಜಿಬಿಒ ಸ್ಪೈ ಸೀರಿಸ್ 'ಸಿಟಾಡೆಲ್' ವಿಚಾರವಾಗಿ ನಟಿ ಪ್ರಿಯಾಂಕಾ ಚೋಪ್ರಾ ಸುದ್ದಿಯಲ್ಲಿದ್ದಾರೆ. ಚೊಚ್ಚಲ ವೆಬ್ ಸೀರಿಸ್ ಪ್ರಚಾರಕ್ಕೂ ಮುನ್ನ ಪ್ರಿಯಾಂಕಾ ಅವರು ಮತ್ತೊಂದು ಹಾಲಿವುಡ್ ಪ್ರಾಜೆಕ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ 'ಹೆಡ್ಸ್ ಆಫ್ ಸ್ಟೇಟ್'ನಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇದಲ್ಲದೇ ಜೇಮ್ಸ್ ಸಿ ಸ್ಟ್ರೌಸ್ ಅವರ ರೊಮ್ಯಾಂಟಿಕ್ ಸಿನಿಮಾ 'ಲವ್ ಎಗೈನ್'ನಲ್ಲಿಯೂ ಪ್ರಿಯಾಂಕಾ ನಟಿಸಲಿದ್ದಾರೆ. ಹಾಲಿವುಡ್ನಲ್ಲಿ ಬ್ಯುಸಿಯಾಗಿರುವ ಚೋಪ್ರಾ ಶೀಘ್ರದಲ್ಲೇ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೆ ಝರಾ'ದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸದ್ಯ ಪ್ರಿಯಾಂಕಾ ಚೋಪ್ರಾ ದಿ ರುಸ್ಸೋ ಬ್ರದರ್ಸ್ ಅವರ ಹೊಸ ವೆಬ್ ಸರಣಿಯ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಗ್ಲೋಬಲ್ ಸ್ಪೈ ಏಜೆನ್ಸಿ 'ಸಿಟಾಡೆಲ್'ನ ಇಬ್ಬರು ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ (ಪ್ರಿಯಾಂಕಾ) ಅವರ ಸುತ್ತ ಕಥೆ ಸುತ್ತುತ್ತದೆ.