ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ತಂದೆಯ ಪುಣ್ಯತಿಥಿಯ ಸಲುವಾಗಿ ಮನೆಯಲ್ಲಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಿಸಿದ್ದರು. ಈ ಸಂದರ್ಭದಲ್ಲಿ ತೆಗೆದ ಮಗಳು ಮಾಲ್ತಿ ಮೇರಿ ಜೋನಾಸ್ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಪುಟಾಣಿ ಭಾರತೀಯ ಉಡುಗೆಯನ್ನು ಧರಿಸಿರುವುದನ್ನು ಕಾಣಬಹುದು. ಪ್ರಿಯಾಂಕಾ ಲಿಟಲ್ ಪ್ರಿನ್ಸೆಸ್ ಲೆಹೆಂಗಾ ಧರಿಸಿದ್ದು ಇದೇ ಮೊದಲು.
ಸಿಟಾಡೆಲ್ ಬೆಡಗಿ ತಂದೆ ದಿವಂಗತ ಡಾ. ಅಶೋಕ್ ಚೋಪ್ರಾ ಅವರ ಪ್ರೀತಿಯ ಮಗಳಾಗಿ ಬೆಳೆದಿದ್ದರು. ವಿಶೇಷವಾಗಿ ಅವರಿಗೆ ಬಹಳಷ್ಟು ಹತ್ತಿರವಾಗಿದ್ದರು. ತನ್ನ ತಂದೆ ತನ್ನನ್ನು ಸ್ವತಂತ್ರ ಮಹಿಳೆಯಾಗಿರಲು ಹೆಚ್ಚು ಪ್ರೋತ್ಸಾಹಿಸುತ್ತಿದ್ದರು ಮತ್ತು ಎಲ್ಲ ಕನಸುಗಳನ್ನು ಬೆಂಬಲಿಸುತ್ತಿದ್ದರು ಎಂದು ನಟಿ ಯಾವಾಗಲೂ ಹೇಳುತ್ತಿರುತ್ತಾರೆ. ಆದಾಗ್ಯೂ, ಕ್ಯಾನ್ಸರ್ ಎಂಬ ಮಾರಣಾಂತಿಕ ರೋಗದ ಜೊತೆ ಸುದೀರ್ಘ ಹೋರಾಟ ನಡೆಸಿ ಡಾ. ಅಶೋಕ್ ಚೋಪ್ರಾ 2013ರಲ್ಲಿ ನಿಧನರಾದರು.
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ಅಶೋಕ್ ಚೋಪ್ರಾ ಅವರ 10ನೇ ಪುಣ್ಯತಿಥಿಯ ಸಲುವಾಗಿ ಅವರ ಮನೆಯಲ್ಲಿ ಪೂಜೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ತಮ್ಮ ತಂದೆಯ ನೆನೆದು ಭಾವುಕರಾದರು. ಪ್ರಿಯಾಂಕಾ ಅವರು ಪೂಜೆಯ ಕೆಲವು ಸುಂದರ ನೋಟಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Big B- Rajini reunited: ಹೊಸ ಸಾಹಸಕ್ಕಿಳಿದ ಲೈಕಾ ಪ್ರೊಡಕ್ಷನ್: 32 ವರ್ಷಗಳ ಬಳಿಕ ಮತ್ತೆ ಒಂದಾದ್ರು ರಜಿನಿ- ಬಚ್ಚನ್
ಮಗಳು ಮಾಲ್ತಿ ಮೇರಿ ತಾತನ ಜೊತೆಗಿನ ವಿಶೇಷ ಕ್ಷಣವನ್ನು ಸ್ಟೋರಿ ಹಾಕಿದ್ದಾರೆ. ಮೊದಲ ಫೋಟೋದಲ್ಲಿ ಮುದ್ದಾದ ಮಗು ಪಿಂಕ್ ಲೆಹಂಗಾವನ್ನು ಧರಿಸಿ ನೆಲದ ಮೇಲೆ ಪೂಜಾ ಸ್ಟೇಷನರಿಗಳೊಂದಿಗೆ ಆಟವಾಡುತ್ತಿರುವುದು ಕಾಣುತ್ತದೆ. ಈ ಚಿತ್ರಕ್ಕೆ ನಟಿ, "ಇದು ಪೂಜೆಯ ಸಮಯ. ಮಿಸ್ ಯು ಅಪ್ಪ" ಎಂದು ಕ್ಯಾಪ್ಶನ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಾಲ್ತಿ ಮೇರಿ ತನ್ನ ಪ್ರೀತಿಯ ಅಜ್ಜನ ಭಾವಚಿತ್ರದ ಮುಂದೆ ಕುಳಿತಿದ್ದಾಳೆ. ಇದಕ್ಕೆ 'ಮಿಸ್ ಯು ಡ್ಯಾಡ್' ಎಂದು ನಟಿ ಶೀರ್ಷಿಕೆ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ, ಹಾಲಿವುಡ್ ಗಾಯಕ ನಿಕ್ ಜೋನಾಸ್ ಆದರ್ಶ ದಂಪತಿಗಳೆಂದರೇ ತಪ್ಪಾಗಲಾರದು. ಈ ಜೋಡಿ 2018ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾದರು. ಕಳೆದ ವರ್ಷ ಜನವರಿ 5, 2022 ರಂದು ಸರೋಗಸಿ ಮೂಲಕ ಮಾಲ್ತಿ ಮೇರಿ ಪೋಷಕರಾದರು. ತಮ್ಮ ಮೊದಲ ಮಗುವಿನ ಆಗಮನ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಮಗಳ ಲಾಲನೆ- ಪಾಲನೆ ಕುರಿತದಾದ ಫೋಟೋಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಆಗಿಂದಾಗ ಹಂಚಿಕೊಳ್ಳುವ ಮೂಲಕ ಮಗಳ ಕುರಿತು ಅಪ್ಡೇಟ್ಗಳನ್ನು ಅಭಿಮಾನಿಗಳಿಗೆ ನೀಡುತ್ತಿರುತ್ತಾರೆ.
ಇದನ್ನೂ ಓದಿ:Gana first look: ಪ್ರಜ್ವಲ್ ದೇವರಾಜ್ ಅಭಿನಯದ 'ಗಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆ; ವೀರಂ ಬಳಿಕ ಭಾರಿ ನಿರೀಕ್ಷೆ