ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ನಟನೆಯ ಬಹು ನಿರೀಕ್ಷಿತ ಸರಣಿ 'ಸಿಟಾಡೆಲ್'ನ ಮೊದಲ ಲುಕ್ ಬಿಡುಗಡೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಚೋಪ್ರಾ 'ಸಿಟಾಡೆಲ್'ನ ಈ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಸಿಟಾಡೆಲ್ ಫಸ್ಟ್ ಲುಕ್‌ನಲ್ಲಿ ಬಾಲಿವುಡ್ ತಾರೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
'ಸಿಟಾಡೆಲ್' ಸೀರಿಸ್ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪತ್ತೇದಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಹಂಚಿಕೊಂಡ ಫಸ್ಟ್ ಲಕ್ನಲ್ಲಿ ನಟಿಯ ನೋಟ ಅದ್ಭುತವಾಗಿದೆ. ಪ್ರಿಯಾಂಕಾ ಚೋಪ್ರಾ ಫಸ್ಟ್ ಲುಕ್ ಶೇರ್ ಮಾಡಿಕೊಳ್ಳುತ್ತಿದ್ದಂತೆ, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಕಾಮೆಂಟ್ ವಿಭಾಗ ತುಂಬಲು ಶುರು ಮಾಡಿದ್ದಾರೆ. ಸೆಲೆಬ್ರಿಟಿಗಳು ಹೆಚ್ಚಾಗಿ ಹೃದಯ ಮತ್ತು ಬೆಂಕಿಯ ಎಮೋಜಿಗಳೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
'ಸಿಟಾಡೆಲ್' ಫಸ್ಟ್ ಲುಕ್‌ನಲ್ಲಿ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೋ ಬಂದೂಕನ್ನು ಗುರಿಯಾಗಿಸಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಪ್ರಿಯಾಂಕಾ ಮತ್ತು ರಿಚರ್ಡ್ ಮಾಡೆನ್ (Richard Madden) ಅವರ ಆ್ಯಕ್ಷನ್ ಸನ್ನಿವೇಶವಿದೆ.
'ಸಿಟಾಡೆಲ್'ನ ನಾಡಿಯಾ ಸಿನ್ಹ್ (Nadia Sinh) ಆಗಿ ಪ್ರಿಯಾಂಕಾ ಅವರ ಮೊದಲ ನೋಟಕ್ಕೆ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡಿದ್ದಾರೆ. ನಟಿ ಸಮಂತಾ ರುತ್ ಪ್ರಭು Yassss ಎಂದು ಬರೆದು ಬೆಂಕಿಯ ಎಮೋಜಿ ಹಾಕಿದ್ದಾರೆ. ರಾಜ್‌ಕುಮಾರ್ ರಾವ್, ದಿಯಾ ಮಿರ್ಜಾ, ಇಶಾ ಗುಪ್ತಾ, ಗುನೀತ್ ಮೊಂಗಾ ಮತ್ತು ಇತರೆ ಸೆಲೆಬ್ರಿಟಿಗಳು ಸಹ ಸಿಟಾಡೆಲ್ ಫಸ್ಟ್ ಲುಕ್ ಅನ್ನು ಇಷ್ಟಪಟ್ಟಿದ್ದಾರೆ.
ಪ್ರಿಯಾಂಕಾ ಪತಿ ನಿಕ್ ಹೀಗಂದ್ರು:ಪ್ರಿಯಾಂಕಾ ಚೋಪ್ರಾ ಪತಿ, ಗಾಯಕ ನಿಕ್ ಕೂಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ 'ಸಿಟಾಡೆಲ್' ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಫಸ್ಟ್ ಲುಕ್ ಹಂಚಿಕೊಂಡಿರುವ ನಿಕ್, ತಮ್ಮ ಪತ್ನಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ರೆಡಿಯಾಗಿ, ಅದ್ಭುತ ಪ್ರದರ್ಶನ ("next level show'') ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.