ಮುಂಬೈ:ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದು ಹೋಗಿ ಬಹಳ ದಿನಗಳೇ ಕಳೆದಿವೆ. ಅವರು ತಮ್ಮ ಸೋದರ ಸಂಬಂಧಿ ಪರಿಣಿತಿ ಚೋಪ್ರಾ ಮದುವೆಗೂ ಹಾಜರಾಗಿರಲಿಲ್ಲ. ಆದರೆ ಈಗ ಪ್ರಿಯಾಂಕಾ ಸ್ವದೇಶಕ್ಕೆ ಬರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಕಾಯಲು ಸಾಧ್ಯವಿಲ್ಲ. ಇತ್ತೀಚೆಗೆ, ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಾಸ್‌ಪೋರ್ಟ್‌ನ ಚಿತ್ರವನ್ನು ಹಂಚಿಕೊಂಡು, 'ಇನ್ನು ಕಾಯಲು ಸಾಧ್ಯವಿಲ್ಲ' ಎಂದು ಪೋಸ್ಟ್ ಹಾಕಿದ್ದಾರೆ. ಇದೇ ವೇಳೆ ’ಏಕ್ ಮಿನಿಟ್ ಹೋಗಯಾ ಮುಂಬೈ‘‘ ಎಂದೂ ಬರೆದುಕೊಂಡಿದ್ದಾರೆ
ಪ್ರಿಯಾಂಕಾ ಚೋಪ್ರಾ ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ರ ಉತ್ಸವದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ, ಇದು ಅಕ್ಟೋಬರ್ 27 ರಿಂದ ಮುಂಬೈನಲ್ಲಿ ನಡೆಯಲಿದೆ. ಇದಕ್ಕೂ ಮೊದಲು, ಅವರು ಇಂದು ಅಂದರೆ ಅಕ್ಟೋಬರ್ 26 ರಂದು ಭಾರತವನ್ನು ತಲುಪುತ್ತಾರೆ. ಅವರ ಸ್ವದೇಶಕ್ಕೆ ವಾಪಸ್ ಆಗುವ ಖುಷಿಯಲ್ಲಿದ್ದು, ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲು Instagram ಮೊರೆ ಹೋಗಿದ್ದು, ಪಾಸ್ಪೋರ್ಟ್ ಸ್ನಾಪ್ ಹಾಕಿ ಖುಷಿ ಹಂಚಿಕೊಂಡಿದ್ದಾರೆ.