ಕರ್ನಾಟಕ

karnataka

ETV Bharat / entertainment

'ರಣಹದ್ದು' ಫಸ್ಟ್ ಲುಕ್ ರಿಲೀಸ್​ ಮಾಡಿದ ಜಂಭದ ಹುಡುಗಿ ಪ್ರಿಯಾ ಹಾಸನ್ - etv bharat kannada

ಹೊಸಬರೇ ಸೇರಿಕೊಂಡು ಮಾಡಿರುವ ರಣಹದ್ದು ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ ಅನ್ನು ನಟಿ ಪ್ರಿಯಾ ಹಾಸನ್​ ಮತ್ತು ನಿರ್ಮಾಪಕ ಟೇಶಿ ವೆಂಕಟೇಶ್​ ಅವರು ಬಿಡುಗಡೆ ಮಾಡಿದ್ದಾರೆ.

priya-hassan-unveils-rana-haddu-kannada-movie-first-look-poster
'ರಣಹದ್ದು' ಫಸ್ಟ್ ಲುಕ್ ರಿಲೀಸ್​ ಮಾಡಿದ ಜಂಭದ ಹುಡುಗಿ ಪ್ರಿಯಾ ಹಾಸನ್

By ETV Bharat Karnataka Team

Published : Sep 13, 2023, 4:22 PM IST

ಹೊಸ ಪ್ರತಿಭೆಗಳು ಒಳ್ಳೆ ಕಂಟೆಂಟ್​​​ನೊಂದಿಗೆ ಸ್ಯಾಂಡಲ್ ವುಡ್​ಗೆ ಬರೋದು ಹೆಚ್ಚಾಗುತ್ತಿದೆ. ಇದೀಗ ರಣಹದ್ದು ಅಂತಾ ಟೈಟಲ್ ನೊಂದಿಗೆ ಹೊಸ ಪ್ರತಿಭೆಗಳ ಚಿತ್ರತಂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ತಮಿಳು ನಿರ್ದೇಶಕ ಮಾಣಿಕ್ಯ ಜೈ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ ಇದಾಗಿದ್ದು, ಹೊಸಬರೆ ನಟಿಸಿದ್ದಾರೆ. ಮಾಣಿಕ್ಯ ನಿರ್ದೇಶನದ ಜೊತೆಗೆ ರಣಹದ್ದು ಸಿನಿಮಾದಲ್ಲಿ ನಟಿಸಿದ್ದಾರೆ.

ಹೊಸಬರೇ ಸೇರಿಕೊಂಡು ಮಾಡಿರುವ ರಣಹದ್ದು ಸಿನಿಮಾ

ಮಾಣಿಕ್ಯ ಜೈ ಈಗಾಗಲೇ ತಮಿಳಿನಲ್ಲಿ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಣಹದ್ದು ಕನ್ನಡದ ಮೊದಲ ಸಿನಿಮಾವಾಗಿದೆ. ಇದೀಗ ರಣಹದ್ದು ಚಿತ್ರದ ಫಸ್ಟ್ ಲುಕ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅಂದಹಾಗೆ, ಹೊಸಬರ ಈ ಚಿತ್ರದ ಫಸ್ಟ್ ಲುಕ್ ಅನ್ನು ಸ್ಯಾಂಡಲ್ ವುಡ್ ನಟಿ ಜಂಭದ ಹುಡುಗಿ ಖ್ಯಾತಿಯ ಪ್ರಿಯಾ ಹಾಸನ್ ಹಾಗೂ ನಿರ್ಮಾಪಕ ಟೇಶಿ ವೆಂಕಟೇಶ್ ರಿಲೀಸ್ ಮಾಡಿದ್ದಾರೆ. ಇಬ್ಬರೂ ರಣಹದ್ದು ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ರಣಹದ್ದು ಫಸ್ಟ್ ಲುಕ್ ಪೋಸ್ಟರ್​ ರಿಲೀಸ್​

ರಣಹದ್ದು ಮೊಬೈಲ್ ಫೋನ್ ನಿಂದ ಆಗುವ ಮೋಸ, ವಂಚನೆ ಬಗ್ಗೆ ಇರುವ ಸಿನಿಮಾವಾಗಿದೆ. ನೈಜ ಘಟನೆಗಳನ್ನು ಆಧಾರಿಸಿ ಈ ಸಿನಿಮಾ ಮಾಡಲಾಗಿದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿದೆ. ಇನ್ನು ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮಾಣಿಕ್ಯ ಜೈ ಜೊತೆಗೆ ರಂಜಿತ್, ಯತೀಶ್ ಮತ್ತು ನಾಯಕಿಯಾಗಿ ಸೌಮ್ಯ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಸರಸ್ವತಿ ಹಾಗೂ ಜೈ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು, ತಾಜ್ ಸಿನಿಮಾಗೆ ಸಂಗೀತ ನೀಡಿದ್ದು, ಜೀವನ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಸದ್ಯ ಫಸ್ಟ್ ಲುಕ್ ನಿಂದ ಸದ್ದು ಮಾಡುತ್ತಿರೋ ರಣಹದ್ದು, ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ:'ಸಲಾರ್'​ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಂಬಾಳೆ ಫಿಲಂಸ್ ಪೋಸ್ಟ್‌ ಸ್ಪಷ್ಟನೆ ಹೀಗಿದೆ..

ಪ್ರೇಕ್ಷಕರ ಮುಂದೆ ಬರಲಿದೆ 'ಕಾಗೆ' ಕುರಿತಾದ ಚಿತ್ರ:ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಮೇಕಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಉತ್ತಮ ಕಂಟೆಂಟ್ ಇರುವ ಚಿತ್ರಗಳು ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಇದೀಗ ಇಲ್ಲೊಂದು ಚಿತ್ರತಂಡ 'ರಾವೆನ್' ಅಂತ ಶೀರ್ಷಿಕೆ ಇಟ್ಟುಕೊಂಡು ಕಾಗೆ ಬಗೆಗಿನ ಕಥೆ ಹೇಳೋದಕ್ಕೆ ಸಜ್ಜಾಗಿದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ವೇದ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಾಸಕ ಗೋಪಾಲಯ್ಯ 'ರಾವೆನ್' ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ದೇಶಕ ಎಂ ಡಿಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ನಿರ್ದೇಶಕ ವೇದ್ ಮಾತನಾಡಿ​, "ರಾವೆನ್' ಎಂಬುದು ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ನಮ್ಮನ್ನು ತಾಕಿದರೆ ಸ್ನಾನ ಮಾಡಬೇಕು. ಅದು ವಾಹನಗಳ ಮೇಲೆ ಕೂರಬಾರದು. ಹೀಗೆ ಮುಂತಾದ ಮೂಢನಂಬಿಕೆಗಳು ರೂಡಿಯಲ್ಲಿವೆ. ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಈ ಚಿತ್ರದಿಂದ ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ" ಎಂದು ತಿಳಿಸಿದರು.

ABOUT THE AUTHOR

...view details