ಕರ್ನಾಟಕ

karnataka

ETV Bharat / entertainment

ರಾಮ - ಸೀತೆಯಾಗಿ ರಾಲಿಯಾ, ರಾವಣನ ಪಾತ್ರಕ್ಕೆ ಯಶ್​: ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ?! - yash as ravana

ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಯುತ್ತಿದ್ದು, ರಾವಣನ ಪಾತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

movie based on Ramayana
ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ

By

Published : Jun 8, 2023, 11:31 AM IST

Updated : Jun 8, 2023, 11:51 AM IST

ರಾಮಾಯಣ ಆಧಾರಿತ 'ಆದಿಪುರುಷ್'​ ಸಿನಿಮಾ ತೆರೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ, ಬಾಲಿವುಡ್​ನಲ್ಲಿ ರಾಮ ಮತ್ತು ಸೀತೆಯ ಪಾತ್ರಗಳ ಮೇಲೆ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ದಂಗಲ್ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಈ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ರಾವಣನ ಪಾತ್ರಕ್ಕೆ ಕೆಜಿಎಫ್ ಸ್ಟಾರ್ ಯಶ್... ಇತ್ತೀಚೆಗೆ, ನಿರ್ದೇಶಕರು ತಮ್ಮ ಮುಂಬರುವ ಚಿತ್ರ 'ಬವಾಲ್' ಅನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ರಾಮಾಯಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ವರ್ಷದ ದೀಪಾವಳಿ ಸಂದರ್ಭ ಈ ಸಿನಿಮಾವನ್ನು ಘೋಷಿಸಬಹುದು. ಚಿತ್ರದ ಅಧಿಕೃತ ಘೋಷಣೆಗೂ ಮುನ್ನವೇ ಅದಕ್ಕೆ ಸಂಬಂಧಿಸಿದ ದೊಡ್ಡ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ನಿಜ ಜೀವನದ ಜೋಡಿ ರಣ್​​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ರಾಮ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಂಕೇಶ್​​ ರಾವಣನ ಪಾತ್ರಕ್ಕೆ ಕೆಜಿಎಫ್ ಸ್ಟಾರ್ ಯಶ್ ಹೆಸರು ಕೇಳಿ ಬರುತ್ತಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಷ್ಟೇ.

ಸುದ್ದಿಗಳನ್ನು ನಂಬುವುದಾದರೆ, ರಾವಣನಾಗಿ ನಟ ಯಶ್ ಅವರನ್ನು ರಣ್​​​ಬೀರ್ ಕಪೂರ್ ಎದುರು ನಟಿಸಲು ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ರಾಕಿಂಗ್​ ಸ್ಟಾರ್ ಅನ್ನು ಅಪ್ರೋಚ್​ ಕೂಡ ಮಾಡಲಾಗಿದೆಯಂತೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಅಧಿಕೃತ ಮಾಹಿತಿ ಕೊಡುವಂತೆ ನೆಟ್ಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಡುತ್ತಿದ್ದಾರೆ.

ಯಶ್​ ಪಾತ್ರದ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ರಾಮ ಮತ್ತು ಸೀತೆಯ ಪಾತ್ರದಲ್ಲಿ ರಣ್​​​ಬೀರ್ ಮತ್ತು ಆಲಿಯಾ ಖಂಡಿತವಾಗಿಯೂ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ನಿತೇಶ್ ತಿವಾರಿ ಅವರ ಮುಂದಿನ ಈ ಚಿತ್ರ ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ 2024ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಶ್ರೀರಾಮನ ಪಾತ್ರಕ್ಕಾಗಿ ರಣ್​ಬೀರ್ ಕಪೂರ್ ಅವರ ಲುಕ್ ಟೆಸ್ಟ್ ನಡೆಯುತ್ತಿದೆ. ಚಿತ್ರಕ್ಕೆ ಅವರು ಫೈನಲ್ ಆಗುವ ವಿಚಾರ ಮುಂದಿನ 15 ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ:'ಕಾಂತಾರ' ಕಾಡುಬೆಟ್ಟು ಶಿವನ ಚೆಲುವೆ ಲೀಲಾಗೆ ಹುಟ್ಟುಹಬ್ಬದ ಸಂಭ್ರಮ..ಯುವ 'ಸಿರಿ' ಪೋಸ್ಟರ್ ರಿಲೀಸ್​

ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಮತ್ತು ಮಧು ಮಂಟೇನಾ ಈ ರಾಮಾಯಣ ಚಿತ್ರದ ನಿರ್ಮಾಪಕರು. ನಿತೇಶ್ ತಿವಾರಿ ಮತ್ತು ರವಿ ಉದ್ಯಾವರ್ ಒಟ್ಟಿಗೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇನ್ನು ರಣ್​ಬೀರ್​​ ಕಪೂರ್ ಅವರ ಮುಂದಿನ ಸಿನಿಮಾ ಗಮನಿಸುವುದಾದರೆ, ಈ ವರ್ಷ ಆಗಸ್ಟ್ 11 ರಂದು ತೆರೆಕಾಣಲಿರುವ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕ ನಟಿ. 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಆಲಿಯಾ ಭಟ್​ ಅವರ ಮುಂದಿನ ಚಿತ್ರ. ಕೆಜಿಎಫ್​ 2 ತೆರೆಕಂಡು ವರ್ಷ ಕಳೆದರೂ ರಾಕಿಂಗ್​ ಸ್ಟಾರ್​ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವಿಲ್ಲ.

ಇದನ್ನೂ ಓದಿ:10,000 ಜನರಿಗೆ 'ಆದಿಪುರುಷ್'​​ ಉಚಿತ ಟಿಕೆಟ್​: ಯಾರಿಗೆಲ್ಲ ಲಭ್ಯ?!

Last Updated : Jun 8, 2023, 11:51 AM IST

ABOUT THE AUTHOR

...view details