ಹೈದರಾಬಾದ್: ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಂಜನಾ ಗಲ್ರಾನಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆ. ಕೃತಜ್ಞತೆಯ ಭಾವನೆಯಿಂದ ಸರ್ವಶಕ್ತ ದೇವರಿಗೆ ತಮ್ಮ ಕೂದಲನ್ನು ಅರ್ಪಿಸಿದ್ದಾರೆ. ಕೇಶಮುಂಡನ ಮಾಡಿಕೊಂಡ ಫೋಟೋ ಸಮೇತವಾಗಿ ಸಂಜನಾ ಗಲ್ರಾನಿ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.
'ಸೌಂದರ್ಯವು ನೋಡುಗರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ದೇವರಲ್ಲಿ ಮಾನತ್ (ಪ್ರಾರ್ಥನೆ) ಪೂರೈಸಲು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ' ಎಂದು ನಟಿ ಬರೆದುಕೊಂಡಿದ್ದಾರೆ.
ಅಲ್ಲದೇ, 'ಹಲವು ಕಷ್ಟಗಳನ್ನು ಮೆಟ್ಟಿ ನಿಂತ ನಂತರ ಜೀವನವು ಮತ್ತೊಮ್ಮೆ ಸುಂದರವಾಗಿದೆ. ನನ್ನ ಜೀವನದ ಈ ಹಂತಕ್ಕಾಗಿ ದೇವರಿಗೆ ಧನ್ಯವಾದ ಹೇಳಿದರೆ ಸಾಲುವುದಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿದೆ. ನನ್ನ ಕೃತಜ್ಞತೆ ಮತ್ತು ಧನ್ಯವಾದವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದಿದ್ದಾರೆ. ಕೊನೆಗೆ 'ಜೈ ಶ್ರೀಕೃಷ್ಣ , ಅಹಂ ಬ್ರಹ್ಮಾಷ್ಟಮಿ' ಎಂದು ಸಂಜನಾ ಗಲ್ರಾನಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಹೈದರಾಬಾದ್ ಪಬ್ ಮೇಲೆ ಪೊಲೀಸ್ ದಾಳಿ: ತೆಲುಗು ಬಿಗ್‌ಬಾಸ್ ವಿಜೇತ ಸೇರಿ ಹಲವರು ವಶಕ್ಕೆ