ಕರ್ನಾಟಕ

karnataka

By

Published : Dec 21, 2022, 12:13 PM IST

ETV Bharat / entertainment

ನನ್ನ‌ ಆನಂದದ ಜರ್ನಿಯೇ ವೇದ ಎಂದ ಶಿವಣ್ಣ

ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ವೇದ ಸಿನಿಮಾದ ಪ್ರೀ ರಿಲೀಸ್ ಈವೆಂಟ್​ ಆಯೋಜಿಸಲಾಗಿತ್ತು.

Pre release event of Veda movie
ವೇದ ಸಿನಿಮಾದ ಪ್ರೀ ರಿಲೀಸ್ ಈವೆಂಟ್

ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ವೇದ ಸಿನಿಮಾದ ಪ್ರೀ ರಿಲೀಸ್ ಈವೆಂಟ್​ ಆಯೋಜಿಸಲಾಗಿತ್ತು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ವರ್ಷದ ಹೈ ವೋಲ್ಟೇಜ್ ಚಿತ್ರ ವೇದ. ಭಜರಂಗಿ 2 ಸಿನಿಮಾ ನಂತರ ಪ್ರೇಕ್ಷಕರ ಮುಂದೆ ಬರ್ತಾ ಇರೋ, ವಿಭಿನ್ನ ಕಥೆಯ ವೇದ ಸಿನಿಮಾ, ಸಹಜವಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜ್ ಹುಟ್ಟಿಸಿದೆ. ಈಗಾಗಲೇ ಗಿಲ್ಲಕ್ಕೋ ಶಿವ ಗಿಲ್ಲಕ್ಕೊ ಹಾಡು ಬಿಡುಗಡೆಯಾಗಿ ಸೆನ್ಸೇಶನ್​ ಕ್ರಿಯೇಟ್ ಮಾಡಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಲ್ಲಕ್ಕೊ ಶಿವನಾಗಿ ಕಾಣಿಸಿಕೊಂಡಿರೋದು ಸಹಜವಾಗಿ ದೊಡ್ಮನೆಯ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ‌. ಇದೇ 23ಕ್ಕೆ ಬಹು ಭಾಷೆಯಲ್ಲಿ ತೆರೆ ಕಾಣುತ್ತಿರುವ ವೇದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ಮಾಡಲಾಯಿತು.

ಸೆಂಚುರಿ ಸ್ಟಾರ್ ತಮ್ಮ ಸ್ವಂತ ಬ್ಯಾನರ್​‌ ಗೀತ ಪಿಕ್ಚರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದ್ದು, ಈ ಪ್ರಿ ರಿಲೀಸ್ ಇವೆಂಟ್​ಗೆ ಶಿವರಾಜ್ ಕುಮಾರ್, ಗೀತಾ ಶಿವರಾಜ್, ನಟಿಯರಾದ ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ, ನಿರ್ದೇಶಕ ಎ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಅದಿತಿ ಸಾಗರ್, ಲಾಸ್ಯ ನಾಗರಾಜ್ ಸೇರಿದಂತೆ ಇಡೀ ವೇದ ಚಿತ್ರತಂಡ ಉಪಸ್ಥಿತಿ ಇತ್ತು.

ಶಿವರಾಜ್​ ಕುಮಾರ್​ಗೆ 100ನೇ ಸಿನಿಮಾ ಮಾಡುವ ಆಸೆ ಇತ್ತು:ಮೊದಲಿಗೆ ಮಾತನಾಡಿದ‌‌ ನಿರ್ಮಾಪಕಿ ಗೀತಾ ಶಿವರಾಜ್, ನಾವು ಶಿವರಾಜ್​ ಕುಮಾರ್​ ಅವರ 100ನೇ ಸಿನಿಮಾ ಮಾಡಬೇಕಿತ್ತು. ಆದರೆ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ನಾವೇ ಮಾಡಬೇಕು ಅಂತ ಕೇಳಿದ್ದಕ್ಕೆ ಬಿಟ್ಟು ಕೊಟ್ಟೆ. ಈಗ 125 ಸಿನಿಮಾ‌ ಮಾಡಿರೋದು ಖುಷಿ ಇದೆ. ವೇದ ಸಿನಿಮಾದಿಂದ‌ ನನಗೆ ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ನಿರ್ದೇಶಕ ಹರ್ಷ ಸಿನಿಮಾ ಶೂಟಿಂಗ್ ಹಾಗೂ ಪ್ರೊಡಕ್ಷನ್ ಬಗ್ಗೆ ಎಲ್ಲಾ ಕಲಿಸಿಕೊಟ್ಟರು. ಶ್ವೇತಾ ಚಂಗಪ್ಪ ಒಂದು ಫೈಯರ್ ಸೀನ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ನನ್ನ ಚಿಕ್ಕಮಗಳು ನನಗೆ ತುಂಬಾ ಚೆನ್ನಾಗಿ ಸಪೋರ್ಟ್ ಮಾಡಿದಳು. ಅರ್ಜುನ್ ಜನ್ಯ ಇಷ್ಟು ಚೆನ್ನಾಗಿರೋ ಹಾಡು ಕೊಟ್ಟಿದ್ದಾರೆ ಎಂದರು.

ನಿರ್ದೇಶಕ ಎ ಹರ್ಷ ಮಾತನಾಡಿ, ಭಜರಂಗಿ 2 ಸಿನಿಮಾ ಮಾಡುವಾಗ ಶಿವಣ್ಣ ಅವರೇ ನನಗೆ ಮತ್ತೊಂದು ಸಿನಿಮಾ ಮಾಡು ಅಂದ್ರು. ಆಗ ಹುಟ್ಟಿದ ಕಥೆ ವೇದ. ಶಿವಣ್ಣ ಲೆಜೆಂಡರಿ ಸ್ಟಾರ್, ಅವರ 125 ನೇ ಸಿನಿಮಾ ಮಾಡಿದ್ದು ನಿಜಕ್ಕೂ ಖುಷಿ ಆಯಿತು ಎಂದು ಹೇಳಿದರು.

ನಟಿ ಗಾನವಿ ಲಕ್ಷ್ಮಣ್ ಮಾತನಾಡಿ, ವೇದ ಸಿನಿಮಾದ ಜರ್ನಿ ತುಂಬಾ ನೆನಪುಗಳನ್ನ‌ ಕೊಟ್ಟಿದೆ. ಮುಂದೆ ಹೋಗೋ ಧೈರ್ಯವನ್ನು ವೇದ ಸಿನಿಮಾದ ಪುಷ್ಪ ಕೊಟ್ಟಿದ್ದಾಳೆ. ಹಾಗೇ ಶ್ವೇತ ಚಂಗಪ್ಪ ಮಾತನಾಡಿ ನಾನು‌ ಶಿವಣ್ಣನ ಸಿನಿಮಾ ಮಾಡಿ ತುಂಬಾ ವರ್ಷಗಳಾಗಿತ್ತು. ವೇದ ಸಿನಿಮಾದ ನನ್ನ ಪಾತ್ರದ ಬಗ್ಗೆ ನಿರ್ದೇಶಕ ಹರ್ಷ ಅವರು ಹೇಳಿದಾಗ ಮೈ ಜುಮ್ ಎನಿಸಿತು. ಈ ಸಿನಿಮಾದಿಂದ ತುಂಬಾ ಕಲಿತಿದ್ದೇನೆ. ದೊಡ್ಡಮನೆ ದೊಡ್ಡ ಗುಣ ಎಲ್ಲರಿಗೂ ಗೊತ್ತು. ನಮ್ಮ ಸಿನಿಮಾದಲ್ಲಿ ನಟಿಸುತ್ತಿರೋದಕ್ಕೆ ಧನ್ಯವಾದ ಅಂತ ಸಿನಿಮಾ ಶುರುವಾಗೋ ಮೊದಲೇ ಶಿವಣ್ಣ ಹೇಳಿದ್ರು. ನನ್ನ ಪಾತ್ರದ ಶೂಟಿಂಗ್ ಮಾಡುವಾಗ ಗೀತಾ ಮೇಡಂ ನನಗಿಂತ ಜಾಸ್ತಿ ಹೆದರಿಕೊಂಡು ಕೂತಿದ್ರು. ಗೀತಾ ಶಿವರಾಜ್ ಕುಮಾರ್ ವೇದ ಸಿನಿಮಾ ಸೆಟ್​ಗೆ ಕೇಕ್ ಮಾಡಿ ಕಳುಹಿಸಿದ್ದನ್ನು ಮರೆಯೋದಿಕ್ಕೆ ಆಗೋಲ್ಲ ಎಂದು ನೆನಪಿಸಿಕೊಂಡರು.

125 ಇರೋದು ಸಾವಿರ ಆಗಲಿ:ಕೊನೆಯದಾಗಿ ಶಿವರಾಜ್ ಕುಮಾರ್ ಮಾತನಾಡಿ, ನಾನು ಸಿನಿಮಾ ಇಂಡಸ್ಟ್ರಿಗೆ ಬಂದು‌ 37 ವರ್ಷ ಆಗಿತ್ತು. ನನ್ನ ಮೊದಲ ಸಿನಿಮಾ ಆನಂದ್​ನಿಂದ‌‌ ಹಿಡಿದು ಭಜರಂಗಿ 2 ಸಿನಿಮಾವರೆಗೂ ನನ್ನ ಸರಿ ತಪ್ಪುಗಳನ್ನ‌ ತಿದ್ದಿದ್ದಾರೆ. ನನಗೆ ತಾಯಿ ಮತ್ತು ನನ್ನ‌ ಹೆಂಡತಿ ಎರಡು ಕಣ್ಣು ಇದ್ದಂತೆ. ನನ್ನ ಜರ್ನಿ ಒಂದು ಆನಂದ ವೇದ ಆಗಿದೆ. ನಾನು ಯಾವಾಗ್ಲು ಹೀಗೆ ಏನೇ ಇದ್ರು ನೇರವಾಗಿ ಹೇಳ್ತೇನೆ. ಮೊದಲ ಬಾರಿಗೆ ವೇದ ಸಿನಿಮಾಕ್ಕಾಗಿ ತಮಿಳು ಭಾಷೆಯಲ್ಲಿ ಹಾಡು ಹಾಗು ಡಬ್ಬಿಂಗ್ ಮಾಡಿದ್ದೇನೆ. ಗೀತಾರನ್ನ ನನಗಿಂತ ಜಾಸ್ತಿ ವೇದ ಸಿನಿಮಾ ತಂಡ ಇಷ್ಟ ಪಡುತ್ತಾರೆ. ಉಮಾಶ್ರೀ ಮೇಡಂ ಅದ್ಭುತವಾಗಿ ನಟಿಸಿದ್ದಾರೆ. ವೇದ ಶಿವಣ್ಣನ ಸಿನಿಮಾ ಮಾತ್ರ ಅಲ್ಲ ಎಲ್ಲರ ಸಿನಿಮಾ ಆಗುತ್ತೆ. 125 ಇರೋದು ಸಾವಿರ ಸಿನಿಮಾ ಆಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾಗೊಸ್ಕರ ಒಮ್ಮೊಮ್ಮೆ ನನ್ನ ನೋಡೇ ಗೀತಾ ಅಂತ ಅಂಜನಿಪುತ್ರ ಸಿನಿಮಾದ ಹಾಡು ಹಾಡಿದರು. ವೇದ ನಾಲ್ಕು ತರದ ಗ್ರಂಥ ಇದೆ. ಈ ಸಿನಿಮಾ ವೇದ ಕೂಡ ಒಂದು ಗ್ರಂಥದ ತರ ಇರುತ್ತೆ. ಫ್ಲವರ್ ಇದ್ರೇನೆ ಫೈಯರ್ ಬರೋದು. ನನ್ನ ಪಾತ್ರದಲ್ಲಿ ಫ್ಲವರ್ ಇದೆ ಫೈಯರ್ ಇದೆ. ನಾರ್ಮಲ್ ಹ್ಯೂಮನ್‌ ಬೀಯಿಂಗ್ ಪಾತ್ರ ನನ್ನದು ಎಂದು ಹೇಳಿದರು.

ವೇದ ಸಿನಿಮಾ 1960ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಶಿವರಾಜ್ ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಹಾಗು ಅನುಪಮ, ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಚಿತ್ರವನ್ನು ಝೀ ಸ್ಟುಡಿಯೋಸ್​ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಇದೇ 23ಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ವೇದ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಹೆದರೋದೂ ಇಲ್ಲ.. ಕ್ಷಮಿಸೋದು ಇಲ್ಲ: ಶಿವಣ್ಣನ 'ವೇದ' ಟ್ರೈಲರ್​ಗೆ ಫ್ಯಾನ್ಸ್​ ಫಿದಾ

ABOUT THE AUTHOR

...view details