ಹಿಂದಿ ಬಿಗ್ ಬಾಸ್ 15 ಖ್ಯಾತಿಯ ಪ್ರತೀಕ್ ಸೆಹಜ್‌ಪಾಲ್, ಏಕ್ತಾ ಕಪೂರ್ ಅವರ 'ನಾಗಿನ್ 6'ನಲ್ಲಿ ಭಾಗವಹಿಸಲಿದ್ದಾರೆ. ಈ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರತೀಕ್ ಸೆಹಜ್‌ಪಾಲ್ ಅವರು ಏಕ್ತಾ ಕಪೂರ್ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಜನಪ್ರಿಯ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿರುವುದಕ್ಕೆ ನಟ ಪ್ರತೀಕ್ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ರುದ್ರ ಪಾತ್ರದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ತ್ರಿಶೂಲದ ಇಮೋಜಿಯೊಂದಿಗೆ ''ರುದ್ರ, ನನ್ನ ಕನಸನ್ನು ನನಸಾಗಿಸಿದಕ್ಕಾಗಿ ಏಕ್ತಾ ಕಪೂರ್ ಅವರಿಗೆ ಧನ್ಯವಾದ, ನಾನು, ನನ್ನ ತಾಯಿ ಮತ್ತು ನನ್ನ ಇಡೀ ಕುಟುಂಬ ನಿಮಗೆ ಕೃತಜ್ಞರಾಗಿದ್ದೇವೆ'' ಎಂದು ಬರೆದಿದ್ದಾರೆ.
'ಬಿಗ್ ಬಾಸ್ 15' ಮತ್ತು 'ಬಿಗ್ ಬಾಸ್ OTT' ಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಬಂದ ನಂತರ ಟಿವಿ ಶೋನಲ್ಲಿ ಅವಕಾಶ ಪಡೆದಿರುವುದು ನನಗೆ ಅನೇಕ ಮಾರ್ಗಗಳನ್ನು ತೆರೆದಿದೆ ಮತ್ತು ಅದಕ್ಕಾಗಿ ಕೃತಜ್ಞನಾಗಿದ್ದೇನೆಂದು ತಿಳಿಸಿದರು. ಯಾವುದೇ ಉದ್ಯಮದ ಹಿನ್ನೆಲೆಯಿಲ್ಲದೇ ಹೊರಗಿನವನಾಗಿದ್ದು, ಇದು ನನ್ನ ಮೊದಲ ದೂರದರ್ಶನ ಕಾರ್ಯಕ್ರಮವಾಗಿದೆ. ನಾನು ನಿಮಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ. ದೇವರು ನಿಮ್ಮನ್ನು ಹೆಚ್ಚು...ಹೆಚ್ಚು, ಹೆಚ್ಚು, ಹೆಚ್ಚು....ಹೆಚ್ಚು ಆಶೀರ್ವದಿಸುತ್ತಾನೆ. ಎಲ್ಲದಕ್ಕೂ ಧನ್ಯವಾದಗಳು ಎಂದು ಪ್ರತೀಕ್ ಸೆಹಜ್‌ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ನಾಳೆ ತನಿಖೆಗೆ ಹಾಜರಾಗಲಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗಾಗಿ ದೊಡ್ಡ ಪ್ರಶ್ನೆ ಪಟ್ಟಿ ಸಿದ್ಧ
ಅಲ್ಲದೇ ಸದಾ ಸರ್ವ ಕಾರ್ಯದಲ್ಲೂ ಬೆಂಬಲ ಕೊಡುವ ತಾಯಿ ಮತ್ತು ಸಹೋದರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸಿದ್ದಾರೆ. ನಂಬಿಕೆಯಿದ್ದರೆ ಕನಸು ನನಸಾಗುವುದು ಎಂದು ಎಲ್ಲರಿಗೂ ಕಿವಿಮಾತೊಂದನ್ನು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಪ್ರತೀಕ್ ಸೆಹಜ್‌ಪಾಲ್ ಪೋಸ್ಟ್ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತೀಕ್ ಸೆಹಜ್‌ಪಾಲ್ ಅವರಿಗೆ ಶುಭಾಶಯ ತಿಳಿಸಲಾಗುತ್ತಿದೆ.