ಕರ್ನಾಟಕ

karnataka

ETV Bharat / entertainment

ಕಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಲವ್ ಗುರು ಸಿನಿಮಾ ಡೈರೆಕ್ಟರ್ - Prashanth Raj Kollywood Movie

ಕನ್ನಡದ ಪ್ರಶಾಂತ್ ರಾಜ್ ನಿರ್ದೇಶನ ಮಾಡುತ್ತಿರುವ ತಮಿಳಿನ ಕಿಕ್ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಕಾಲಿವುಡ್​​ನ ಖ್ಯಾತ ಹಾಸ್ಯನಟ ಸಂತಾನಂ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

Love Guru Movie Director Prashanth Raj Entry To Tamil Cinema
ಪ್ರಶಾಂತ್ ರಾಜ್

By

Published : Sep 1, 2022, 1:59 PM IST

ಕನ್ನಡ ಚಿತ್ರರಂಗದಲ್ಲಿ 'ಲವ್ ಗುರು', 'ದಳಪತಿ', 'ಜೂಮ್' ಹಾಗೂ 'ಆರೆಂಜ್' ಸಿನಿಮಾಗಳನ್ನು ನಿರ್ದೇಶನ ಮಾಡಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಪ್ರಶಾಂತ್ ರಾಜ್, ಇದೀಗ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಕಾಲಿವುಡ್​​ನ ಖ್ಯಾತ ಹಾಸ್ಯನಟ ಕಂ ನಾಯಕ ಸಂತಾನಂ ಜೊತೆಗೂಡಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೆ ತೆರೆ ಕಾಣಲಿದೆ.

ಕಿಕ್​ ಚಿತ್ರದ ಪೋಸ್ಟರ್​

ಪ್ರತಿ ಸಿನಿಮಾದಲ್ಲೂ ಆಕರ್ಷಕ ಶೀರ್ಷಿಕೆ ಇಡುವ ಪ್ರಶಾಂತ್, ಈ ಬಾರಿ ಕೂಡ ತಮ್ಮ ಚೊಚ್ಚಲ ತಮಿಳು ಚಿತ್ರಕ್ಕೆ 'ಕಿಕ್' ಎಂಬ ಕ್ಯಾಚಿ ಟೈಟಲ್ ಇಟ್ಟಿರುವುದು ಗಮನಾರ್ಹ. ಗಣೇಶ್ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಜೊತೆಗೆ ಫಸ್ಟ್ ಲುಕ್ ಕೂಡ ಅನಾವರಣಗೊಂಡಿದೆ.

ಪ್ರಶಾಂತ್ ರಾಜ್

ವಿಭಿನ್ನವಾಗಿ ಮೂಡಿಬಂದಿರುವ ಪೋಸ್ಟರ್​ನಲ್ಲಿ ಸಂತಾನಂಗೆ ಎಂಟು ಕೈಗಳಿದ್ದು, ಒಂದೊಂದು ಕೈಯಲ್ಲಿ ಒಂದೊಂದು ವಸ್ತುಗಳನ್ನು ಹಿಡಿದುಕೊಂಡಿದ್ದಾರೆ. ಇಂಪ್ರೆಸಿವ್ ಆಗಿ ಮೂಡಿಬಂದಿರುವ ಈ ಪೋಸ್ಟರ್, ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ರೋಮ್ಯಾಂಟಿಕ್ ಕಂ ಕಾಮಿಡಿ ಕಥಾಹಂದರ ಹೊಂದಿರುವ ಕಿಕ್ ಸಿನಿಮಾದಲ್ಲಿ ಸಂತಾನಂಗೆ ಜೋಡಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ನಟಿಸಿದ್ದಾರೆ. ಉಳಿದಂತೆ ರಾಗಿಣಿ, ಸಾಧು ಕೋಕಿಲಾ ಸೇರಿದಂತೆ ಹಲವು ಪ್ರತಿಭಾನ್ವಿತರ ಕಲಾದಂಡು ಚಿತ್ರದಲ್ಲಿದೆ.

ನಟ ಸಂತಾನಂ

ಫಾರ್ಚ್ಯೂನ್ ಫಿಲ್ಮ್​ ಪ್ರೊಡಕ್ಷನ್ ಅಡಿ ನವೀನ್ ರಾಜ್ ಬಹುಕೋಟಿ ಬಜೆಟ್​​ನಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಹಿಂದೆ ಪ್ರಶಾಂತ್ ರಾಜ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ಹಾಡುಗಳು ಮೋಡಿ ಮಾಡಿದ್ದವು. ಇದೀಗ ಅದೇ ನಿರೀಕ್ಷೆ ಸಕಲ ಚಿತ್ರ ರಸಿಕರಲ್ಲಿದೆ.

ಕಿಕ್​ ಚಿತ್ರದ ಪೋಸ್ಟರ್​

ಬೆಂಗಳೂರು, ಚೆನ್ನೈ, ಬ್ಯಾಂಕಾಕ್, ಪಟಾಯ್ ಸೇರಿದಮತೆ ಹಲವೆಡೆ ಚಿತ್ರೀಕರಣ ಮಾಡಲಾಗಿದ್ದು, ಸುಧಾಕರ್ ಕ್ಯಾಮರಾ, ನಾಗೂರನ್ ರಾಮಚಂದ್ರ ಸಂಕಲನ ಸಿನಿಮಾಗಿದೆ. ಸದ್ಯ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರಶಾಂತ್ ರಾಜ್ ಬಳಗ ಶೀಘ್ರದಲ್ಲಿಯೇ ಚಿತ್ರ ಪ್ರೇಮಿಗಳಿಗೆ 'ಕಿಕ್' ಕೊಡಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ:ಮಲಯಾಳಂ ಸೂಪರ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಕನ್ನಡದ ಕ್ರಿಯೇಟಿವ್​ ನಿರ್ದೇಶಕ ನಂದ ಕಿಶೋರ್

ABOUT THE AUTHOR

...view details