ಹೈದರಾಬಾದ್:ಸಿನಿ ಪ್ರೇಮಿಗಳೆಲ್ಲ ಕಾತರದಿಂದ ಕಾಯುತ್ತಿದ್ದ ಸಲಾರ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಪ್ರೇಕ್ಷಕರ ಮುಂದೆ ಬಂದಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆ ವೀಕ್ಷಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಪ್ರಭಾಸ್ ಆ್ಯಕ್ಷನ್ ಬಗ್ಗೆ ಪ್ರಶಾಂತ್ ನೀಲ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕರು ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನಾನು 15 ವರ್ಷಗಳ ಹಿಂದೆ "ಸಲಾರ್" ಕಥೆಯನ್ನು ಯೋಚಿಸಿದ್ದೆ. ಆದರೆ, ನನ್ನ ಮೊದಲ ಸಿನಿಮಾ ‘ಉಗ್ರಂ’ ಮಾಡಿದ ನಂತರ ‘ಕೆಜಿಎಫ್’ ಪ್ರಾಜೆಕ್ಟ್ ಶುರು ಮಾಡಿದೆ. ಎರಡೂ ಭಾಗಗಳನ್ನು ಪೂರ್ಣಗೊಳಿಸಲು 8 ವರ್ಷಗಳನ್ನು ತೆಗೆದುಕೊಂಡಿತು. ಆ ನಂತರ ‘ಸಲಾರ್’ ಕೆಲಸ ಶುರು ಮಾಡಿದೆವು. ಬಹುತೇಕ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮುಗಿದಿದೆ. ಸಿಂಗರೇಣಿ ಗಣಿ, ದಕ್ಷಿಣ ಬಂದರು ಮತ್ತು ವೈಜಾಗ್ ಬಂದರುಗಳಲ್ಲಿ ನಾವು ಕೆಲವು ಚಿತ್ರೀಕರಣವನ್ನು ನಡೆಸಿದ್ದೇವೆ. ಯುರೋಪ್ನಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. 114 ದಿನಗಳಲ್ಲಿ ಇಡೀ ಚಿತ್ರವನ್ನು ಮುಗಿಸಿದ್ದೇವೆ ಎಂದರು. ಸದ್ಯದಲ್ಲೇ ‘ಸಲಾರ್’ ಎರಡನೇ ಭಾಗದ ಕೆಲಸವೂ ಆರಂಭವಾಗಲಿದೆ ಎಂದು ಪ್ರಶಾಂತ್ ನೀಲ್ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.