ಕರ್ನಾಟಕ

karnataka

ETV Bharat / entertainment

ಪ್ರಮೋದ್​ ಶೆಟ್ಟಿ ನಟನೆಯ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರದ ಫಸ್ಟ್​ ಲುಕ್​ ರಿಲೀಸ್​ - ಈಟಿವಿ ಭಾರತ ಕನ್ನಡ

Pramod Shetty next movie first look released: ಪ್ರಮೋದ್​ ಶೆಟ್ಟಿ ನಟನೆಯ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

karikaanu guddada melondu adhika prasanga
'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ'

By ETV Bharat Karnataka Team

Published : Sep 1, 2023, 12:58 PM IST

ಪಾತ್ರ ಯಾವುದೇ ಆಗಿರಲಿ, ಇವರಿಗೆ ಅದು ಕಠಿಣವಲ್ಲ. ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡು ಸ್ಯಾಂಡಲ್​ವುಡ್​ನ ಭರವಸೆಯ ಕಲಾವಿದರಾಗಿ ಗುರುತಿಸಿಕೊಂಡವರು ಪ್ರಮೋದ್​ ಶೆಟ್ಟಿ. ಉಳಿದವರು ಕಂಡಂತೆ, ಕಿರಿಕ್​ ಪಾರ್ಟಿ, ರಿಕ್ಕಿ, ಬೆಲ್​ ಬಾಟಂ, ಅವನೇ ಶ್ರೀಮನ್ನಾರಾಯಣ, ತೂತುಮಡಿಕೆ, ಕಾಂತಾರ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ಅಮೋಘ ಮತ್ತು ಅತ್ಯದ್ಭುತ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರತಂಡ

'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ': ಪ್ರಮೋದ್​ ಶೆಟ್ಟಿ ಅವರು ರಿಷಬ್​ ಶೆಟ್ಟಿ ನಿರ್ಮಾಣದ 'ಲಾಫಿಂಗ್​ ಬುದ್ಧ' ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ 'ಜಲಪಾತ' ಚಿತ್ರದಲ್ಲಿ ಪ್ರತಿಭಾವಂತ ನಟ ಒಂದು ಪರಿಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಎಂದು ಶೀರ್ಷಿಕೆ ಇಡಲಾಗಿದೆ. ನಿನ್ನೆ ಪ್ರಮೋದ್​ ಶೆಟ್ಟಿ ಅವರ ಹುಟ್ಟುಹಬ್ಬವಿತ್ತು. ಅವರ ಜನ್ಮದಿನದ ಅಂಗವಾಗಿ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

ಇದನ್ನೂ ಓದಿ:ಪ್ರಮೋದ್​ ಶೆಟ್ಟಿ- ಯುವ ಪ್ರತಿಭೆ ರೋಹಿತ್​ ನಟನೆಯ 'ರಕ್ತಾಕ್ಷ' ಸಿನಿಮಾದ ಮಾಸ್​ ಟೀಸರ್​ ರಿಲೀಸ್​

ಚಿತ್ರಕಥೆ: 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಚಿತ್ರವು ಒಂದು ಊರಿನಲ್ಲಿ ನಡೆದ ಅಪಾರ್ಥವೂ ಅನಾಹುತವಾಗಿ, ಆ ಅನಾಹುತವು ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ವಡ್ಡಾರಾಧಕ ಹಾಗೂ ಶಬರಿ ಎಂಬ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್​ ಶರ್ಮ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ರಾಘು ಶಿವಮೊಗ್ಗ, ಕಿರಣ್​ ನಾಯಕ್​, ಮಂಜುನಾಥ್​ ಹೆಗಡೆ, ಕೆಜಿ ಕೃಷ್ಣಮೂರ್ತಿ, ಚಂದ್ರಕಲಾ ಚಿತ್ರದ ಭಾಗವಾಗಿದ್ದಾರೆ.

ಇಡೀ ಊರನ್ನೇ ಸಿನಿಮಾ ಸೆಟ್ಟನಾಗಿಸಿಕೊಂಡ ಚಿತ್ರತಂಡ: ಶಿವಮೊಗ್ಗ ಜಿಲ್ಲೆಯ ಇಡುವಾಣಿ ಎನ್ನುವ ಒಂದು ಹಳ್ಳಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇಡೀ ಊರಿಗೆ ಊರನ್ನೇ ಸಿನಿಮಾ ಸೆಟ್ಟನಾಗಿಸಿಕೊಂಡು ಊರಿನ ಜನರನ್ನೇ ಉಪಯೋಗಿಸಿಕೊಂಡು ಶೂಟಿಂಗ್​ ಮಾಡಲಾಗಿದೆ. ಚಿತ್ರಕ್ಕೆ ಸುಮತ್​ ಶರ್ಮಾ ಛಾಯಾಗ್ರಹಣ, ಸಂಜೀವ್​ ಜಾಗೀರ್ದಾರ್​ ಸಂಕಲನ, ಚೇತನ್​ ಕುಮಾರ್​ ಸಂಗೀತವಿದೆ. ಗನ್ನಿ ಬ್ಯಾಗ್​ ಸ್ಟುಡಿಯೋ ಪ್ರೊಡಕ್ಷನ್ಸ್​ ಅಡಿ ಚಿತ್ತರಂಜನ್​ ಕಶ್ಯಪ್​, ವಲ್ಲಭ್​ ಸೂರಿ, ಸುನಿತ್​ ಹಲಗೇರಿ ನಿರ್ಮಾಣ ಮಾಡಿದ್ದು, ಊರ್​ ಮನೆ ಪ್ರೊಡಕ್ಷನ್ಸ್​ ನಿರ್ಮಾಣದಲ್ಲಿ ಸಾಥ್​ ಕೊಟ್ಟಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ:Jalapatha Movie: 'ಪ್ರಮೋದ್ ಶೆಟ್ಟಿ' ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ABOUT THE AUTHOR

...view details