ಕರ್ನಾಟಕ

karnataka

ETV Bharat / entertainment

ರಾಂಪಾ ಆಯ್ತು, ಇನ್ಮುಂದೆ ಜಗ್ಗಣ್ಣ ಹವಾ: ಹಾಸ್ಯನಟ ಪ್ರಕಾಶ್ ತುಮಿನಾಡ್

ಹಾಸ್ಯನಟ ಪ್ರಕಾಶ್ ತುಮಿನಾಡ್ ಅವರು ತಿಮ್ಮಯ್ಯ ಅಂಡ್​ ತಿಮ್ಮಯ್ಯ ಚಿತ್ರದಲ್ಲಿ ಜಗ್ಗಣ್ಣ ಎಂಬ ಅಡುಗೆ ಭಟ್ಟನ ಪಾತ್ರ ಮಾಡಿದ್ದಾರೆ.

actor Prakash Thuminad
ಹಾಸ್ಯನಟ ಪ್ರಕಾಶ್ ತುಮಿನಾಡ್

By

Published : Dec 2, 2022, 5:51 PM IST

ವಿಭಿನ್ನ ಮ್ಯಾನರಿಸಂನಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಕರಾವಳಿ ಪ್ರತಿಭೆ ಪ್ರಕಾಶ್ ತುಮಿನಾಡ್. ಸದ್ಯ ಅನಂತ್ ನಾಗ್ ಹಾಗೂ ದಿಗಂತ್ ಅಭಿನಯದ ತಿಮ್ಮಯ್ಯ ಅಂಡ್​ ತಿಮ್ಮಯ್ಯ ಸಿನಿಮಾದಲ್ಲಿ ಜಗ್ಗಣ್ಣ ಅನ್ನೋ ಪಾತ್ರದಲ್ಲಿ ಅಭಿಯಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಭುಜಂಗ ಹಾಗು ರಾಂಪಾ ಹೀಗೆ ವಿಭಿನ್ನ ಹೆಸರುಗಳಿಂದಲೇ ಪ್ರಖ್ಯಾತಿ ಹೊಂದಿರುವ ಹಾಸ್ಯನಟ ಪ್ರಕಾಶ್ ತುಮಿನಾಡ್ ಅವರು ತಿಮ್ಮಯ್ಯ ಅಂಡ್​​ ತಿಮ್ಮಯ್ಯ ಚಿತ್ರದಲ್ಲಿ ಜಗ್ಗಣ್ಣ ಎಂಬ ಅಡುಗೆ ಭಟ್ಟನ ಪಾತ್ರ ಮಾಡಿದ್ದಾರೆ. ನಾನು ಕಾಂತಾರ ಸಿನಿಮಾ ಮಾಡಬೇಕಾದ್ರೆ 12 ಸಿನಿಮಾಗಳನ್ನು ಬಿಟ್ಟಿದ್ದೆ. ಆ ಟೈಮ್​​ನಲ್ಲಿ ಬಂದ ಕಥೆ ಇದು. ತಿಮ್ಮಯ್ಯ ಅಂಡ್​ ತಿಮ್ಮಯ್ಯ ಚಿತ್ರ ಕಥೆ ಹೊಸತನದಿಂದ ಇದೆ ಎಂಬ ಕಾರಣಕ್ಕೆ ಈ ಸಿನಿಮಾನ್ನು ಒಪ್ಪಿಕೊಂಡೆ ಎಂದರು.

ನಟ ಪ್ರಕಾಶ್ ತುಮಿನಾಡ್

ಅನಂತ್ ನಾಗ್ ಹಾಗೂ ದಿಗಂತ್ ಸರ್ ಜೊತೆ ಸಿನಿಮಾದಲ್ಲಿ ಅಭಿನಯಿಸೋದು ತುಂಬಾನೇ ಮಜಾ ಇರುತ್ತೆ. ಈ ಸಿನಿಮಾ ಶೂಟಿಂಗ್​ಗೆ ಹೋದ ವೇಳೆಯಲ್ಲೆಲ್ಲ ಇಡೀ ಶೂಟಿಂಗ್​ ಸೆಟ್ ಕೂಲ್ ಆಗಿರುತ್ತಿತ್ತು. ಈ ಚಿತ್ರತಂಡ ಕೂಡ ಮೇಕಿಂಗ್ ಬಗ್ಗೆ ಹೆಚ್ಚು ಗಮನ ಕೊಟ್ಟಿದೆ. ಈ ಸಿನಿಮಾ ನನಗೆ ಹೊಸ ಅನುಭವ ನೀಡಿದೆ. ಇನ್ನು ನಿರ್ದೇಶಕ ಸಂಜಯ್ ಸರ್ ಜೊತೆ ಕೆಲಸ ಮಾಡಿದ್ದು ಕೂಡ ಸಖತ್ ಖುಷಿ ಕೊಟ್ಟಿದೆ.

ಇವರು ದುಬೈ ಹಾಗೂ ಮುಂಬೈನಲ್ಲಿ ಪ್ರಖ್ಯಾತ ಜಾಹೀರಾತುಗಳನ್ನು ಮಾಡಿರುವ ಅನುಭವ ಹೊಂದಿದ್ದಾರೆ. ಇನ್ನು ಇವರು ಶೂಟಿಂಗ್ ಮಾಡಿರೋ ಎಲ್ಲ ಲೋಕೇಶನ್​ಗಳನ್ನು ಬಹಳ ಸುಂದರವಾಗಿ ತೋರಿಸಿರೋದು ಈ ಸಿನಿಮಾದಲ್ಲಿ ಕಾಣುತ್ತೆ ಅಂತಾರೆ ಪ್ರಕಾಶ್ ತುಮಿನಾಡ್.

ಇದನ್ನೂ ಓದಿ:ತಾತ ಮೊಮ್ಮಗನ ಪಾತ್ರದಲ್ಲಿ ಅನಂತ್ ನಾಗ್ - ದಿಗಂತ್ ಕಮಾಲ್​​

ನಾನು ಸಖತ್ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಕೆಲಸ ಮಾಡಿದೆ. ನನಗೆ ಸಖತ್ ಖುಷಿ ಕೊಟ್ಟ ಸಿನಿಮಾವಿದು. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಗೆ ತುಂಬಾನೇ ಸ್ಕೋಪ್ ಇದೆ. ನಾನು ಈ ಚಿತ್ರದಲ್ಲಿ ಕೇರ್​ ಟೇಕರ್​​ ಆಗಿ​ ನಟಿಸಿದ್ದೇನೆ. ಈ ಸಿನಿಮಾ ಎಲ್ಲಾ ವರ್ಗದ ಜನರಿಗೆ ಇಷ್ಟ ಆಗುತ್ತೆ ಅಂತಾ ಪ್ರಕಾಶ್ ತುಮಿನಾಡ್ ತಿಳಿಸಿದರು.

ABOUT THE AUTHOR

...view details