ಸ್ಯಾಂಡಲ್ವುಡ್ನಲ್ಲಿ ಹಲವು ಚಿತ್ರಗಳ ಮೂಲಕ ಹೆಸರು ಮಾಡಿರುವ ನಟ ಪ್ರಜ್ವಲ್ ದೇವರಾಜ್. ಮಾಫಿಯಾ ಸಿನಿಮಾ ಮಧ್ಯೆ ಪ್ರಜ್ವಲ್ ದೇವರಾಜ್ 'ಗಣ' ಎಂಬ ಹೆಸರಿನ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ ಶಿವಕುಮಾರ್ ಅವರು ಪ್ರಜ್ವಲ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇವರ ಜೊತೆ ವಿಶಾಲ್ ಹೆಗ್ಡೆ, ವೇದಿಕಾ ಕುಮಾರ್, ಶಿವರಾಜ್ ಕೆ.ಆರ್ ಪೇಟೆ, ಕ್ರಿಷಿ ತಾಪಂಡ, ಸಂಪತ್ ರಾಜ್, ರವಿ ಕಾಳೆ, ರಮೇಶ್ ಭಟ್, ಉಮೇಶ್, ಸಿದ್ಲಿಂಗು ಶ್ರೀಧರ್, ಬಾಬು ಹಿರಣ್ಣಯ್ಯ ಹಾಗೂ ಮಾಸ್ಟರ್ ರಘುನಂದನ್ ಅಭಿನಯಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ 80 ದಿನಗಳ ಕಾಲ ಗಣ ಚಿತ್ರೀಕರಣ ನಡೆದಿದೆ. ಡಿಸೆಂಬರ್ 10ರಿಂದ ಚಿತ್ರೀಕರಣ ನಂತರದ ಚಟುವಟಿಕೆಗಳು ಆರಂಭವಾಗಲಿದೆ.