ಕರ್ನಾಟಕ

karnataka

ETV Bharat / entertainment

ರೆಡ್​ ಮಾರ್ಕೆಟ್​ 'ಮಾಫಿಯಾ' ಟೀಸರ್​ ಬಿಡುಗಡೆ - ಟೀಸರ್​ ರಿಲೀಸ್

Mafia teaser released: ನಟ​ ಪ್ರಜ್ವಲ್​ ದೇವರಾಜ್​ ಅವರಿಗೆ ನಿರ್ದೇಶಕ ಎಚ್.ಲೋಹಿತ್​ ಆ್ಯಕ್ಷನ್​ ಕಟ್​ ಹೇಳಿರುವ 'ಮಾಫಿಯಾ' ಸಿನಿಮಾದ ಟೀಸರ್​ ರಿಲೀಸ್​ ಆಗಿದೆ.

Mafia Movie team
ಮಾಫಿಯಾ ಸಿನಿಮಾ ತಂಡ

By ETV Bharat Karnataka Team

Published : Dec 4, 2023, 2:06 PM IST

ಡೈನಾಮಿಕ್​ ಪ್ರಿನ್ಸ್ ಜನಪ್ರಿಯತೆಯ​ ನಟ ಪ್ರಜ್ವಲ್​ ದೇವರಾಜ್​ ಹಾಗೂ ನಿರ್ದೇಶಕ ಎಚ್.ಲೋಹಿತ್​ ಅವರು ಜೊತೆಯಾಗಿ 'ಮಾಫಿಯಾ' ಸಿನಿಮಾ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್​ಗೆ ಸಜ್ಜಾಗಿರುವ ತಂಡ ಇದೀಗ ಚಿತ್ರದ ಟೀಸರ್​ ರಿಲೀಸ್​ ಮಾಡಿದೆ. ಬಿಗ್​ಬಾಸ್​ ಖ್ಯಾತಿಯ ಪ್ರಶಾಂತ್​ ಸಂಬರಗಿ ಟೀಸರ್​ ರಿಲೀಸ್​ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾಫಿಯಾ ಕುರಿತು ಮಾತನಾಡಿದರು.

ರೌಡಿಸಂ ಜಗತ್ತು, ಮಕ್ಕಳ ಮಾರಾಟ, ಭಿಕ್ಷೆ ಬೇಡುವುದು, ಡ್ರಗ್ಸ್​ ದಂಧೆಗಳನ್ನು ನಾವು ಮಾಫಿಯಾ ಎಂದರೆ, ನಿರ್ದೇಶಕ ಲೋಹಿತ್​ ಅವರು ಈವರೆಗೂ ಯಾರೂ ತೋರಿಸಿರದ ಮಾಫಿಯಾ ಜಗತ್ತನ್ನು ಈ ಚಿತ್ರದಲ್ಲಿ ತೋರಿಸಿದ್ದಾರಂತೆ. ಪ್ರಾರಂಭದಲ್ಲಿ ಮಾತನಾಡಿದ ನಿರ್ದೇಶಕ ಎಚ್.ಲೋಹಿತ್, "ಈವರೆಗೂ ಯಾರು ತೋರಿಸಿರದ 'ಮಾಫಿಯಾ' ಈ ಚಿತ್ರದಲ್ಲಿ ತೋರಿಸಿದ್ದೇವೆ. ಬೇರೆ ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತೀರಾ.‌ ಆದರೆ ಇದೇ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಅನ್ನು ಚಿತ್ರದಲ್ಲಿ ಪರಿಚಯಿಸಲಾಗಿದೆ. ಅದು ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು" ಎಂದರು.

ಅದಿತಿ ಪ್ರಭುದೇವ್​ ಹಾಗೂ ಪ್ರಜ್ವಲ್​ ದೇವರಾಜ್​

ಪ್ರಜ್ವಲ್ ದೇವರಾಜ್ ಮಾತನಾಡಿ, "ಸಿಕ್ಸರ್ ಚಿತ್ರದಿಂದ ನನ್ನ ಸಿನಿಜರ್ನಿ ಸಾಗಿಬಂದಿದೆ. ಮೂವತ್ತೈದು ಚಿತ್ರಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. 'ಮಾಫಿಯಾ' ಬಗ್ಗೆ ಹೇಳಬೇಕಾದರೆ, ಕುಮಾರ್ ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ" ಎಂದು ತಿಳಿಸಿದರು.

ನಿರ್ಮಾಪಕ ಕುಮಾರ್ ಬಿ.ಮಾತನಾಡಿ, "ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರವನ್ನು ನಾನು ನಿರ್ಮಾಣ ಮಾಡುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ 'ಮಾಫಿಯಾ' ಚೆನ್ನಾಗಿ ಮೂಡಿಬಂದಿದೆ" ಎಂದರು.

ಮಾಫಿಯಾ ಸಿನಿಮಾ ತಂಡ

ಪ್ರಜ್ವಲ್ ದೇವರಾಜ್ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ನಟ ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪಾಂಡಿಕುಮಾರ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಜಾಲಿ ಬಾಸ್ಟಿನ್‌ ಸಾಹಸ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಎರಡೇ ದಿನದಲ್ಲಿ 230 ಕೋಟಿ ಕಲೆಕ್ಷನ್​ ಮಾಡಿದ ಅನಿಮಲ್​: ಸ್ಯಾಮ್​ ಬಹದ್ದೂರ್​​ಗೆ ಪಾಸಿಟಿವ್​ ರೆಸ್ಪಾನ್ಸ್

ABOUT THE AUTHOR

...view details