ಕರ್ನಾಟಕ

karnataka

ETV Bharat / entertainment

'ಭಾರತದ ಮೈಕಲ್ ಜಾಕ್ಸನ್' ಪ್ರಭು ದೇವ ಕನ್ನಡ ಹೇಗಿದೆ? ಇಂದು ಸಂಜೆ ವೀಕೆಂಡ್‌ ವಿತ್ ರಮೇಶ್ ಶೋ ನೋಡಿ! - Prabhu Deva achievements

'ವೀಕೆಂಡ್​ ವಿತ್​ ರಮೇಶ್ ಶೋ'ನಲ್ಲಿ ಪ್ರಭು ದೇವ ಭಾಗಿಯಾಗಿದ್ದಾರೆ. ಇಂದು ಸಂಜೆ ಮತ್ತೊಂದು ಎಪಿಸೋಡ್​​ ಪ್ರಸಾರವಾಗಲಿದ್ದು ಪ್ರೇಕ್ಷಕರು ಕಾತರರಾಗಿದ್ದಾರೆ.

Prabhu Deva in weekend with Ramesh
ಪ್ರಭು ದೇವ

By

Published : Apr 2, 2023, 1:16 PM IST

ನಟ ರಮೇಶ್​ ಅರವಿಂದ್​ ನಡೆಸಿಕೊಡುವ ಕನ್ನಡದ ಜನಪ್ರಿಯ 'ವೀಕೆಂಡ್​ ವಿತ್​ ರಮೇಶ್ ಶೋ'ನ ಎರಡನೇ ಅತಿಥಿಯಾಗಿ ಪ್ರಭು ದೇವ ಆಗಮಿಸಿ ಪ್ರೇಕ್ಷಕರ ಮನೆಮನ ತಲುಪಿದ್ದಾರೆ. ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಸಂಪಾದಿಸಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನಿರ್ದೇಶಕ, ನಟ, ನೃತ್ಯ ನಿರ್ದೇಶಕ, ನಿರ್ಮಾಪಕರೂ ಆಗಿರುವ ಪ್ರಭು ದೇವ, ತಮ್ಮ ಬಾಲ್ಯ, ಕುಟುಂಬ, ಶಿಕ್ಷಣ, ಸ್ನೇಹಿತರು, ನೃತ್ಯದ ಮೇಲಿನ ಒಲವು, ಸಿನಿಮಾ ವೃತ್ತಿಜೀವನ.. ಹೀಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಈ ಶೋದ ಮೊದಲ ಅತಿಥಿಯಾಗಿ ಆಗಮಿಸಿದ್ದರು. ಕನ್ನಡದ ಖ್ಯಾತ ನಟಿಯ ಆಗಮನದ ಮೂಲಕ ಮೊದಲ ಎಪಿಸೋಡ್​ ಅನ್ನು ಅದ್ಧೂರಿಯಾಗಿ ಆರಂಭಿಸಲಾಗಿತ್ತು. ಆ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದರೂ, ಅತಿಯಾಗಿ ಇಂಗ್ಲಿಷ್‌ ಬಳಸಿದ ಹಿನ್ನೆಲೆಯಲ್ಲಿ ನಟಿ ಟ್ರೋಲ್‌ ಕೂಡ ಆಗಿದ್ದರು. ಎರಡನೇ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ 'ಭಾರತದ ಮೈಕಲ್ ಜಾಕ್ಸನ್' ಪ್ರಭು ದೇವ ಅವರು ಕನ್ನಡದಲ್ಲೇ ಮಾತನಾಡಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಮೈಸೂರಿನವರೇ ಆದ ಪ್ರಭು ದೇವ ಸದ್ಯ ಬಹು ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಕೇವಲ ಒಂದು ಭಾಷೆಗೆ ಸೀಮಿತವಾಗಿರದೇ, ಬಹುಭಾಷೆಗಳಲ್ಲಿ ತಮ್ಮ ವೃತ್ತಿ ಜೀವನವನ್ನು ವಿಸ್ತರಿಸಿದ್ದಾರೆ. ಆದ್ರೆ 'ವೀಕೆಂಡ್​ ವಿತ್​ ರಮೇಶ್ ಶೋ'ನಲ್ಲಿ ಓರ್ವ ಸಾಮಾನ್ಯ ಮನುಷ್ಯನಂತೆ ತಮ್ಮ ಜೀವನದ ಅಮೂಲ್ಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಎಪಿಸೋಡ್​ನಲ್ಲಿ ರಮ್ಯಾ ಅವರ ಸಾಧನೆಯ ಕಥೆ ಬಹುತೇಕರಿಗೆ ಸ್ಫೂರ್ತಿ ಆಗಿತ್ತಾದರೂ, ಅವರ ಭಾಷೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಾಲಿವುಡ್​ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಪ್ರಭು ದೇವ ಅವರು ಬರುತ್ತಾರೆಂದಾಗ ಸಹಜವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಭಾಷೆ ವಿಚಾರವಾಗಿ ಪ್ರಶ್ನೆ ಎದ್ದಿತ್ತು. ಇಂಗ್ಲಿಷ್​, ಹಿಂದಿ ಹೆಚ್ಚು ಬಳಸುತ್ತಾರೆಂದು ಹೆಚ್ಚಿನವರು ಅಂದಾಜಿಸಿದ್ದರು. ಆದ್ರೆ ನಿನ್ನೆ ರಾತ್ರಿ ಪ್ರಸಾರವಾದ ಅವರ ಮೊದಲ ಎಪಿಸೋಡ್​ನಲ್ಲಿ ಪ್ರಭು ದೇವ ಕನ್ನಡವನ್ನೇ ಬಳಸಿದ್ದು, ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಕೊಂಚ ಏರುಪೇರಾದರೂ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫುಲ್​ ಮಾರ್ಕ್ ಕೊಟ್ಟಿದ್ದಾರೆ. ಪ್ರಭು ದೇವ ಕುಟುಂಬಸ್ಥರೂ ಕೂಡ ಕನ್ನಡದಲ್ಲೇ ಮಾತನಾಡಿದರು.

ಇದನ್ನೂ ಓದಿ:ಸುದೀಪ್ ಮುಂದಿನ ಸಿನಿಮಾ ಯಾವುದು?: ಕಿಚ್ಚನ ಸ್ಪಷ್ಟೀಕರಣ ಹೀಗಿದೆ..

ಇಂದು ಸಂಜೆ ಪ್ರಸಾರವಾಗಲಿರುವ ಎಪಿಸೋಡ್​ನಲ್ಲಿ ಪ್ರಭು ದೇವ ಡ್ಯಾನ್ಸ್​ ಮೇಲಿನ ಒಲವನ್ನು ವ್ಯಕ್ತಪಡಿಸಲಿದ್ದಾರೆ. ಮೈಕೆಲ್​ ಜಾಕ್ಸೆನ್​ ನನಗೆ ಸ್ಫೂರ್ತಿ ಎಂದು ಕೂಡ ತಿಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಟೆಪ್​ ಹಾಕಿ ಪ್ರೇಕ್ಷಕರಿಗೆ ಮನರಂಜನೆ ಕೊಡಲಿದ್ದಾರೆ. ತಾನು ಹಪ್ಪಳ (ತಿನಿಸು) ಪ್ರೇಮಿ ಎಂದು ಕೂಡ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರ 50ನೇ ಹುಟ್ಟುಹಬ್ಬವನ್ನು (ಏಪ್ರಿಲ್​ 3 ಅವರ ಜನ್ಮದಿನ) ಅದ್ಧೂರಿಯಾಗಿ ಆಚರಿಸಲಾಗಿದೆ. ಇದರ ಪ್ರೋಮೋ ರಿಲೀಸ್​ ಆಗಿದ್ದು, ಇಂದಿನ ಸಂಚಿಕೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ:ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ

ABOUT THE AUTHOR

...view details