ಹೈದರಾಬಾದ್: ಬಾಲಿವುಡ್‌ನ ಪರಮ ಸುಂದರಿ ಕೃತಿ ಸನನ್ ಅವರು ನಟಿಸಿದ ಭೇಡಿಯಾ ಸಿನಿಮಾ ಬಿಡುಗಡೆಗೊಂಡ ಬಳಿಕ ಅವರ ಬಗ್ಗೆ ಮತ್ತಷ್ಟು ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ. ಭೇಡಿಯಾ ಚಿತ್ರದಲ್ಲಿ ನಟ ವರುಣ್ ಧವನ್ ಜತೆಗೆ ಕೃತಿ ಸನನ್ ನಟಿಸಿದ್ದು, ನವೆಂಬರ್ 25 ರಂದು ಸಿನಿಮಾ ಬಿಡುಗಡೆಗೊಂಡಿದೆ. ಆದರೆ, ಈ ಸಿನಿಮಾದ ಆರಂಭಿಕ ಕಲೆಕ್ಷನ್ 3 ಕೋಟಿಕ್ಕಿಂತ ಹೆಚ್ಚಾಗಿದೆ ಅಂತೆ. ಆದರೆ, ಇವುಗಳ ನಡುವೆಯೂ ಕೃತಿ ಸನನ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ದೊಡ್ಡ ಸುದ್ದಿ ವೈರಲ್ ಆಗುತ್ತಿದೆ.
ಕೃತಿ ಸೆನೆನ್ ಅವರು ಪ್ರಸ್ತುತ ಮೆಗಾಬಜೆಟ್ ಪ್ಯಾನ್ ಇಂಡಿಯಾ 'ಆದಿಪುರುಷ'ದಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದೊಂದಿಗೆ ಕೃತಿ-ಪ್ರಭಾಸ್ ಡೇಟಿಂಗ್ ಮಾಡುವ ಸುದ್ದಿ ಎಲ್ಲಡೆ ಹರಡಿದೆ. ಇದೀಗ ಕೃತಿ ಸಹ ನಟ ಪ್ರಭಾಸ್ ಜತೆಗೆ 'ಮದುವೆ' ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಜೋರು:ಮಾಧ್ಯಮ ವರದಿ ಪ್ರಕಾರ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಕೃತಿ ಮತ್ತು ಪ್ರಭಾಸ್ ಜೋಡಿ ಮತ್ತೊಮ್ಮೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಕೃತಿ ಇತ್ತೀಚಿನ ದಿನಗಳಲ್ಲಿ 'ಭೇಡಿಯಾ' ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೃತಿ ಮುಂದಿನ ಚಿತ್ರ 'ಆದಿಪುರುಷ' ಸಹನಟ ಪ್ರಭಾಸ್‌ನ ಪ್ರಸ್ತಾಪ ಮಾಡಿರುವುದು. ಕೃತಿಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವಕಾಶ ಸಿಕ್ಕರೆ ಪ್ರಭಾಸ್ ಜತೆ ಮದುವೆಯಾಗುವುದಾಗಿ ಎಂದು ಹೇಳಿದ್ದು ಅಭಿಮಾನಿಗಳನ್ನು ನಿಬ್ಬೇರಗಾಗಿಸಿದೆ.