ಕರ್ನಾಟಕ

karnataka

ETV Bharat / entertainment

ರಾಮಲೀಲಾದಲ್ಲಿ ರಾವಣನನ್ನು ಸಂಹರಿಸಲಿರುವ ಆದಿಪುರುಷ... ರಾಷ್ಟ್ರಪತಿ, ಸಿಎಂ ಭಾಗಿ - Love Kush Ramleela

ಇಂದು ದೆಹಲಿಯಲ್ಲಿ ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ರಾವಣ, ಕುಂಭಕರನ್ ಮತ್ತು ಮೇಘನಾದನ ಪ್ರತಿಕೃತಿಗಳನ್ನು ದಹಿಸಲಿದ್ದಾರೆ.

Prabhas to burn ravana effigies in Delhi
ದೆಹಲಿಯಲ್ಲಿ ರಾವಣನನ್ನು ಸಂಹರಿಸಲಿರುವ ಆದಿಪುರುಷ

By

Published : Oct 5, 2022, 1:42 PM IST

Updated : Oct 5, 2022, 1:58 PM IST

ನವದೆಹಲಿ: ದೆಹಲಿಯ ರೆಡ್ ಫೋರ್ಟ್ ಮೈದಾನದಲ್ಲಿ ನಡೆಯುತ್ತಿರುವ ಪ್ರಸಿದ್ಧ ಮತ್ತು ಐತಿಹಾಸಿಕ 'ಲವ್ ಕುಶ ರಾಮಲೀಲಾ' ದೆಹಲಿ ಜನರ ಆಕರ್ಷಣೆಯ ಕೇಂದ್ರವಾಗಿದೆ. ರಾಮಲೀಲಾದಲ್ಲಿ ಇಂದು ತೆಲುಗು ಸೂಪರ್‌ಸ್ಟಾರ್ ಪ್ರಭಾಸ್ ಭಾಗವಹಿಸಿ ರಾವಣ, ಕುಂಭಕರನ್ ಮತ್ತು ಮೇಘನಾದನ ಪ್ರತಿಕೃತಿಗಳನ್ನು ದಹಿಸಲಿದ್ದಾರೆ. ಇದು ದೆಹಲಿಯ ಜನರಲ್ಲಿನ ಸಂಭ್ರಮ ಇಮ್ಮುಡಿಗೊಳಿಸಿದೆ.

ಪ್ರಭಾಸ್ ಅವರನ್ನು ನೋಡಲು ಮತ್ತು ಭೇಟಿಯಾಗಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆ ಸಂಘಟಕರು ಟಿಕೆಟ್‌ಗಾಗಿ ಪ್ರತಿ ಗಂಟೆಗೆ ಸಾವಿರಾರು ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಈವರೆಗೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು 'ಲವ್ ಕುಶ ರಾಮಲೀಲಾ' ಪಾಸ್​ಗಳನ್ನು ವಿತರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲವ್ ಕುಶ್ ರಾಮಲೀಲಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಜೊತೆಗೆ 15 ವಿವಿಧ ದೇಶಗಳ ರಾಯಭಾರಿಗಳೂ ಭಾಗವಹಿಸಲಿದ್ದಾರೆ.

ಕೋವಿಡ್​​ ಹಿನ್ನೆಲೆ ದಸರಾ ಕಳೆಗುಂದಿತ್ತು. ಈ ಬಾರಿ ದೆಹಲಿಯ 600ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿವಿಧ ರಾಮಲೀಲಾ ಸಮಿತಿಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೊದಲ 3 ದಿನಗಳನ್ನು ಹೊರತುಪಡಿಸಿ, ನಂತರದ ದಿನದಿಂದ ಸಾವಿರಾರು ಜನರು ರಾಮಲೀಲಾವನ್ನು ಆನಂದಿಸಲು ಮತ್ತು ಜಾತ್ರೆಯೊಳಗಿನ ರುಚಿಕರವಾದ ಆಹಾರವನ್ನು ಆನಂದಿಸಲು ಬರುತ್ತಿದ್ದಾರೆ.

ಇದನ್ನೂ ಓದಿ:ದಸರಾ ಜಂಬೂ ಸವಾರಿಯಲ್ಲಿ ಅಪ್ಪು ತೇರು.. ಚಾಮರಾಜನಗರದಿಂದ ಪುನೀತ್ ಸ್ತಬ್ಧಚಿತ್ರ

ಲವ್ ಕುಶ ರಾಮಲೀಲಾ ಸಮಿತಿ ಮತ್ತು ನವ ಶ್ರೀ ಧಾರ್ಮಿಕ ರಾಮಲೀಲಾ ಮಾಹಿತಿಯ ಪ್ರಕಾರ, ರಾಮಲೀಲಾ ವೇದಿಕೆಯ ಎರಡೂ ಸ್ಥಳಗಳಿಗೆ ಬರುವ ಜನರ ಸಂಖ್ಯೆ ಸೋಮವಾರ 40,000 ದಾಟಿತ್ತು. ಇಂದು ಈ ಸಂಖ್ಯೆ ಲಕ್ಷದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಇನ್ನೂ ರೆಡ್ ಫೋರ್ಟ್ ಮೈದಾನದಲ್ಲಿ ಪ್ರಭಾಸ್ ಅವರು ರಾವಣ ಸಂಹಾರ ಮಾಡಲಿದ್ದು, ಈವರೆಗೆ ಐದು ಲಕ್ಷಕ್ಕೂ ಹೆಚ್ಚು ಪಾಸ್​ಗಳನ್ನು ಜನರಿಗೆ ವಿತರಿಸಲಾಗಿದೆ. ಹೆಚ್ಚುವರಿಯಾಗಿ ಎರಡು ಲಕ್ಷ ಪಾಸ್​ಗಳನ್ನು ಮುದ್ರಿಸಲಾಗುತ್ತಿದೆ. ಈ ಬಾರಿ ಮೊದಲಿಗಿಂತಲೂ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 125 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 800ಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಹಿದೆ. 120 ಬ್ಲ್ಯಾಕ್​​ ಕಮಾಂಡೋ ಸೆಕ್ಯೂರಿಟಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ರಾಮಲೀಲಾ ವೇದಿಕೆಯಲ್ಲಿ ಹೆಚ್ಚುವರಿ ಸಂಖ್ಯೆಯ ದೆಹಲಿ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.

ಈ ಬಾರಿ ರಾವಣ, ಕುಂಭಕರನ್ ಮತ್ತು ಮೇಘನಾದ 3ರ ಬದಲಿಗೆ 9 ಪ್ರತಿಕೃತಿಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳ ಎತ್ತರವು 100 ಅಡಿಗಳವರೆಗೆ ಇರುತ್ತದೆ. ರಾಷ್ಟ್ರಪತಿ, ಮುಖ್ಯಮಂತ್ರಿ ಮತ್ತು ಪ್ರಭಾಸ್‌ ಅವರು ಪ್ರತ್ಯೇಕವಾಗಿ ರಾವಣ, ಕುಂಭಕರನ್‌, ಮೇಘನಾದನ ಪ್ರತಿಕೃತಿಗಳನ್ನು ದಹಿಸುವ ಸಾಧ್ಯತೆ ಇದೆ.

Last Updated : Oct 5, 2022, 1:58 PM IST

ABOUT THE AUTHOR

...view details