ಕರ್ನಾಟಕ

karnataka

ETV Bharat / entertainment

ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ನಾಳೆಯಿಂದ ಒಟಿಟಿಯಲ್ಲಿ 'ಸಲಾರ್' ಸ್ಟ್ರೀಮಿಂಗ್‌ - ಪ್ರಶಾಂತ್ ನೀಲ್ ನಿರ್ದೇಶನ

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕ ನಟನಾಗಿ ಅಭಿನಯಿಸಿರುವ ಆ್ಯಕ್ಷನ್ ಥ್ರಿಲ್ಲರ್ 'ಸಲಾರ್' ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್​ ಆಗಲು ರೆಡಿಯಾಗಿದೆ.

Tollywood actor Prabhas  salaar movie ott release date  ಸಲಾರ್ OTT ದಿನಾಂಕ ಔಟ್​ ಪ್ರಶಾಂತ್ ನೀಲ್ ನಿರ್ದೇಶನ  ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್
ಸಲಾರ್ OTT ದಿನಾಂಕ ಔಟ್

By ETV Bharat Karnataka Team

Published : Jan 19, 2024, 10:06 AM IST

ಹೈದರಾಬಾದ್​:ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಆ್ಯಕ್ಷನ್ ಥ್ರಿಲ್ಲರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡಿತ್ತು. ಕ್ರಿಸ್‌ಮಸ್ ಹಬ್ಬದಂದು ತೆರೆಕಂಡು 700 ಕೋಟಿ ರೂ.ಗೂ ಹೆಚ್ಚು ಬಾಚಿಕೊಂಡಿತ್ತು. ಅನೇಕ ದಿನಗಳಿಂದ ಹಿಟ್‌ಗಾಗಿ ಕಾಯುತ್ತಿದ್ದ ಪ್ರಭಾಸ್ 2023ರಲ್ಲಿ ತಮ್ಮ ಅಭಿಮಾನಿಗಳಿಗೆ ಈ ಮೂಲಕ ಸಿಹಿ ನೆನಪುಗಳನ್ನು ನೀಡಿದ್ದರು. 'ಸಲಾರ್‌' ಒಟಿಟಿಗೆ ಯಾವಾಗ ಬರುತ್ತೆ ಎಂದು ಕಾದು ಕುಳಿತಿರುವ ಅಭಿಮಾನಿಗಳಿಗೆ ಇದೀಗ ಸಂತಸದ ಸುದ್ದಿ ಹೊರಬಂದಿದೆ.

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಜನವರಿ 20ರಿಂದ 'ಸಲಾರ್' ಸ್ಟ್ರೀಮಿಂಗ್ ಆಗಲಿದೆ ಎಂದು ಪ್ರಕಟಿಸಿದೆ. ಶನಿವಾರ (ನಾಳೆ) ರಾತ್ರಿ 12 ಗಂಟೆಯಿಂದಲೇ ಸಿನಿಮಾ ಸ್ಟ್ರೀಮಿಂಗ್​ ಆಗಲಿದೆ. ಈ ಚಿತ್ರ ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದರೂ ನೆಟ್‌ಫ್ಲಿಕ್ಸ್ ಅದಕ್ಕೂ ಮೊದಲೇ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಸಲಾರ್​ 2' ಅಪ್​ಡೇಟ್ಸ್​​: ಸಲಾರ್ ಭಾಗ ಭಾರಿ ಯಶಸ್ಸು ಕಂಡಿದೆ. ಇದೀಗ ಸಿನಿಮಾದ ಸೀಕ್ವೆಲ್​​​ಗಾಗಿ ಇದೀಗ ಅಭಿಮಾನಿಗಳು ಕಾತರರಾಗಿದ್ದಾರೆ. ಪ್ರಭಾಸ್ ಇತ್ತೀಚೆಗೆ ಸಲಾರ್ 2ರ ಸುಳಿವು ಕೊಟ್ಟಿದ್ದರು. ಸೀಕ್ವೆಲ್‌ಗೆ 'ಶೌರ್ಯಾಂಗ ಪರ್ವಂ' ಎಂದು ಹೆಸರಿಡಲಾಗಿದೆ.

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಪ್ರಭಾಸ್, "ಈಗಾಗಲೇ ಭಾಗ 2ರ ಕಥೆ ಸಿದ್ಧವಾಗಿದೆ. ಶೀಘ್ರದಲ್ಲೇ ಶೂಟಿಂಗ್​ ಪ್ರಾರಂಭಿಸುತ್ತೇವೆ. ಸಾಧ್ಯವಾದಷ್ಟು ಬೇಗ ಸೀಕ್ವೆಲ್​ ಅನ್ನು ಪ್ರೇಕ್ಷಕರ ಮುಂದಿಡುವ ಗುರಿ ಇದೆ. ನನ್ನ ಅಭಿಮಾನಿಗಳು ಸಲಾರ್​ 2ಗಾಗಿ ಕಾಯುತ್ತಿದ್ದಾರೆ ಎಂಬುದು ತಿಳಿದಿದೆ. 'ಸಲಾರ್ ಭಾಗ 2'ರ ಮಾಹಿತಿಯನ್ನು ಶೀಘ್ರದಲ್ಲೇ ಕೊಡಲಿದ್ದೇವೆ'' ಎಂದಿದ್ದರು.

"ನನ್ನ ಕೆಲಸದ ಮೂಲಕ ಪ್ರಪಂಚಾದ್ಯಂತ ಹೆಚ್ಚಿನ ಸಂಖ್ಯೆಯ ಜನರನ್ನು ರಂಜಿಸುವುದು ನನ್ನ ಏಕೈಕ ಗುರಿ. ನಾನು ಆಯ್ಕೆ ಮಾಡುವ ಸಿನಿಮಾಗಳ ಹಿಂದಿರುವ ಮುಖ್ಯ ಆಲೋಚನೆಯೇ ಇದು. ಸಲಾರ್ ಒಂದು ರಗಡ್ ಮಾಸ್ ಚಿತ್ರ. ಮುಂದಿನ ಪ್ರೊಜೆಕ್ಟ್​ ಭಯಾನಕವಾಗಿರಲಿದೆ. ನಾನು ವಿಭಿನ್ನ ಜಾನರ್‌ಗಳನ್ನು ಅನ್ವೇಷಿಸಲು ಬಯಸುತ್ತೇನೆ. ಇದರಿಂದ ಪ್ರೇಕ್ಷಕರಿಗೆ ಮನರಂಜನೆ ಸಿಗುತ್ತದೆ. ಅಭಿಮಾನಿಗಳು, ಸಿನಿಪ್ರಿಯರು ಸಲಾರ್‌ಗೆ ಕೊಟ್ಟ ಪ್ರೀತಿಯನ್ನೇ ನನ್ನ ಮುಂದಿನ ಸಿನಿಮಾಗಳಿಗೂ ಕೊಡುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದರು. ಪ್ರಶಾಂತ್ ನೀಲ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ 'ಶೌರ್ಯಾಂಗ ಪರ್ವಮ್' ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ:ಸಲಾರ್​ ಸ್ಪೆಷಲ್​​​​: ಪ್ರಭಾಸ್​, ಪೃಥ್ವಿರಾಜ್ ಸುಕುಮಾರನ್​​​, ಶ್ರುತಿ ಹಾಸನ್​ ಚಿಟ್​ ಚಾಟ್​ ನೋಡಿ

ABOUT THE AUTHOR

...view details