ಕರ್ನಾಟಕ

karnataka

ETV Bharat / entertainment

Salaar vs Jawan: 'ಜವಾನ್'​ಗಿಂತ ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ 'ಸಲಾರ್'​​ - ಜವಾನ್​ ಹಾಗೂ ಪ್ರಭಾಸ್​ ಅಭಿನಯದ ಸಲಾರ್

'ಸಲಾರ್'​ ಮತ್ತು 'ಜವಾನ್'​ ಎರಡು ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಈಗಾಗಲೇ ಅಡ್ವಾನ್ಸ್​ ಬುಕ್ಕಿಂಗ್​ ಜೋರಾಗಿ ಸಾಗಿದೆ.

prabhas salaar Movie create milestone in advance booking
prabhas salaar Movie create milestone in advance booking

By ETV Bharat Karnataka Team

Published : Aug 30, 2023, 12:10 PM IST

ಬೆಂಗಳೂರು: ಉತ್ತಮ ಸಿನಿಮಾಗಾಗಿ ಕಾಯುತ್ತಿರುವ ಸಿನಿ ಪ್ರಿಯರಿಗೆ ಸೆಪ್ಟೆಂಬರ್​ ಮನೋರಂಜನೆ ಮಾಸವಾಗಿರಲಿದೆ. ಅದರಲ್ಲೂ ಇನ್ನಷ್ಟು ಕ್ರೇಜ್​ ಬರಲು ಕಾರಣ ಬಾಲಿವುಡ್​​ನ ಕಿಂಗ್​ ಖಾನ್​ ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ ಚಿತ್ರ 'ಜವಾನ್'​ ಹಾಗೂ ಪ್ರಭಾಸ್​ ಅಭಿನಯದ 'ಸಲಾರ್'​ ಚಿತ್ರ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಈ ಎರಡು ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದ್ದು, ಅಡ್ವಾನ್ಸ್​​ ಬುಕ್ಕಿಂಗ್​ ನಡೆಸಿದ್ದು, ಸಲಾರ್​ ಚಿತ್ರಕ್ಕೆ ಜವಾನ್​ಗಿಂತ ಹೆಚ್ಚಿನ ಬುಕ್ಕಿಂಗ್​ ಆಗಿರುವುದು ಗಮನ ಸೆಳೆದಿದೆ. ವರದಿಗಳ ಪ್ರಕಾರ, ಆಗಸ್ಟ್​​ 28ರವರೆಗೆ 'ಜವಾನ್'​ ಚಿತ್ರದ ಅಡ್ವಾನ್ಸ್​​ ಬುಕ್ಕಿಂಗ್​ನಿಂದ ಸಂಗ್ರಹವಾದ ಮೊತ್ತ 200,000 ಡಾಲರ್​ ಆಗಿದೆ.

'ಜವಾನ್'​ ಚಿತ್ರದ ಅಡ್ವಾನ್ಸ್​​ ಬುಕ್ಕಿಂಗ್​ 450 ಸ್ಥಳಗಳಲ್ಲಿ ಲಭ್ಯವಿರುವುದು ಕೂಡ ಗಮನಿಸಬೇಕಾದ ವಿಷಯವಾಗಿದೆ. ಇನ್ನು 'ಸಲಾರ್'​ ಚಿತ್ರ ಕೂಡ ಈಗಾಗಲೇ 40,000 ಡಾಲರ್​ ಮೊತ್ತದ ಅಡ್ವಾನ್​ ಬುಕ್ಕಿಂಗ್​ ನಡೆಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಜವಾನ್​ ಚಿತ್ರದ ಅಡ್ವಾನ್ಸ್​ ಬುಕ್ಕಿಂಗ್​ ಭಾರತದಲ್ಲಿ ಮಾತ್ರ ಆರಂಭವಾಗಿದ್ದು, ಈ ಬುಕ್ಕಿಂಗ್​ನ ಸ್ವಷ್ಟ ಮಾಹಿತಿ ಕುರಿತು ಇನ್ನೂ ಕೂಡ ಚಿತ್ರತಂಡ ತಿಳಿಸಿಲ್ಲ.

ತಮಿಳು ನಿರ್ದೇಶಕ ಅಟ್ಲಿ ಅವರ ನಿರ್ದೇಶನ 'ಜವಾನ್'​ ಈಗಾಗಲೇ ಭಾರತದಲ್ಲೆಡೆ ಹವಾ ಸೃಷ್ಟಿಸಿದೆ. ಶಾರುಖ್​ ಖಾನ್​ ವಿಭಿನ್ನವಾಗಿ ಈ ಚಿತ್ರದಲ್ಲಿ ಕಂಗೊಳಿಸಿದ್ದು, ದಕ್ಷಿಣ ಭಾರತದ ಪ್ರಮುಖ ನಟ ನಟಿಯರಾಗಿರುವ ನಯನತಾರ, ವಿಜಯ್​​ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಮಿಂಚು ಹರಿಸಿದ್ದಾರೆ. ಇದರ ಜೊತೆಗೆ ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್​ ದತ್​​ ಮತ್ತು ವಿಜಯ್​ ನಟನೆ ಚಿತ್ರದ ಮತ್ತೊಂದು ಹೈಲೈಟ್​ ಆಗಿದೆ.

ಚಿತ್ರ ಬಿಡುಗಡೆ ನಿರೀಕ್ಷೆ ಹೆಚ್ಚಿರುವ ನಡುವೆ 'ಜವಾನ್'​ ಚಿತ್ರತಂಡ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಹಾಡುಗಳ ಬಿಡುಗಡೆ ಕಾರ್ಯಕ್ರಮ ಮಾಡುತ್ತಿದೆ. ಇದೇ ಆಗಸ್ಟ್​ 30ರಂದು ಈ ಕಾರ್ಯಕ್ರಮ ನಡೆಯಲಿದೆ. ಈ ಚಿತ್ರ ಸೆಪ್ಟೆಂಬರ್​ 7ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

ಇನ್ನು 'ಕೆಜಿಎಫ್'​ ಬಳಿಕ ನಿರ್ದೇಶಕ ಪ್ರಶಾಂತ್​ ನೀಲ್​ ಅವರ 'ಸಲಾರ್'​ ಚಿತ್ರ ವೀಕ್ಷಣೆಗೆ ಜನರು ತುದಿಗಾಲಲ್ಲಿ ಕಾದಿದ್ದಾರೆ. ಪ್ರಭಾಸ್​ ಅವರ ಈ ಹಿಂದಿನ 'ಆದಿಪುರುಷ್'​ ಮತ್ತು 'ರಾಧೆ ಶ್ಯಾಮ್'​ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡದ ಹಿನ್ನೆಲೆ ಈ ಚಿತ್ರ ನಟನಿಗೂ ಕೂಡ ದೊಡ್ಡ ಬ್ರೇಕ್​ ನೀಡುವ ಸಿನಿಮಾಗಲಿದೆ. ಸಲಾರ್​ನಲ್ಲಿ ನಟ ಪ್ರಭಾಸ್​​ಗೆ ಶೃತಿ ಹಾಸನ್​ ಜೊತೆಯಾಗಿದ್ದು, ಈ ಚಿತ್ರ ಇದೇ ಸೆಪ್ಟೆಂಬರ್​ 28ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ:Not Ramaiya Vastavaiya: 'ಜವಾನ್​'ನ ಮತ್ತೊಂದು ಹಾಡು ಅನಾವರಣ - ಸಿನಿಮಾ ಬಿಡುಗಡೆಗೆ ಕುತೂಹಲ

ABOUT THE AUTHOR

...view details