ಕರ್ನಾಟಕ

karnataka

ETV Bharat / entertainment

'ಕಣ್ಣಪ್ಪ' ಸಿನಿಮಾದಲ್ಲಿ ಶಿವ-ಪಾರ್ವತಿಯಾಗಿ ಪ್ರಭಾಸ್, ನಯನತಾರಾ; 16 ವರ್ಷಗಳ ಬಳಿಕ ಒಟ್ಟಿಗೆ ಅಭಿನಯ? - Prabhas Nayantara kannappa movie

16 ವರ್ಷಗಳ ಬಳಿಕ ಹೊಸ ಸಿನಿಮಾದಲ್ಲಿ ನಟರಾದ ಪ್ರಭಾಸ್ ಮತ್ತು ನಯನತಾರಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

Prabhas Nayantara
ಪ್ರಭಾಸ್, ನಯನತಾರಾ

By ETV Bharat Karnataka Team

Published : Sep 24, 2023, 11:14 AM IST

ತೆಲುಗು ಚಿತ್ರರಂಗದಲ್ಲಿ ಪ್ರಭಾಸ್ - ಅನುಷ್ಕಾ ಅಭಿನಯ ಜನಮಾನಸದಲ್ಲಿ ಎಷ್ಟು ಆಳವಾಗಿ ನೆಲೆಯೂರಿದೆಯೋ ಅಷ್ಟೇ ಸೊಗಸಾದ ಕೆಮಿಸ್ಟ್ರಿ ಪ್ರಭಾಸ್ ಮತ್ತು ನಯನತಾರಾ ಅವರದ್ದೆಂಬ ಅಭಿಪ್ರಾಯ ಅಭಿಮಾನಿಗಳದ್ದು. ಈ ಹಿಂದೆ 'ಯೋಗಿ' ಶೀರ್ಷಿಕೆಯ ಚಿತ್ರದಲ್ಲಿ ಪ್ರಭಾಸ್ ಹಾಗೂ ನಯನತಾರಾ ನಟಿಸಿದ್ದರು. ಸಿನಿಮಾದಲ್ಲಿ ಇವರ ಪಾತ್ರ ಅದ್ಭುತವಾಗಿ ವರ್ಕ್​ಔಟ್​ ಆಗಿತ್ತು. ಈ ಸಿನಿಮಾ 2007ರಲ್ಲಿ ಸಿಲ್ವರ್‌ ಸ್ಕ್ರೀನ್‌ನಲ್ಲಿ ಯಶಸ್ಸು ಕಂಡಿತ್ತು. ಆದ್ರೆ ಅದಾದ ಬಳಿಕ ಒಂದೇ ಒಂದು ಚಿತ್ರದಲ್ಲೂ ಇವರು ಕಾಣಿಸಿಕೊಳ್ಳಲಿಲ್ಲ. ಸ್ಟಾರ್​ ಜೋಡಿಯನ್ನು ಮತ್ತೆ ಒಟ್ಟಾಗಿ ನೋಡಬೇಕೆಂಬ ಬಯಕೆ ಇರುವವರಿಗೆ ಇದೀಗ ಗುಡ್​ ನ್ಯೂಸ್ ಸಿಕ್ಕಿದೆ. ಹೌದು, 16 ವರ್ಷಗಳ ಗ್ಯಾಪ್​ ನಂತರ ಪ್ರಭಾಸ್ ಮತ್ತು ನಯನತಾರಾ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಕಣ್ಣಪ್ಪ ಸಿನಿಮಾ:ನಿರ್ಮಾಪಕ, ನಟ ವಿಷ್ಣು ಮಂಚು ಎರಡು ವಾರಗಳ ಹಿಂದಷ್ಟೇ ಕಣ್ಣಪ್ಪ ಸಿನಿಮಾ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಪಾತ್ರದ ಕುರಿತು ಸುಳಿವು ಬಿಟ್ಟುಕೊಟ್ಟಿದ್ದರು. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾವನ್ನು ಮೋಹನ್ ಬಾಬು ಮತ್ತು ವಿಷ್ಣು ಮಂಚು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಪ್ರಭಾಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೂ ಕೂಡ ಶಿವನ ಪಾತ್ರದಲ್ಲಿ. ದೇವರ ಪಾತ್ರದಲ್ಲಿ ಪ್ರಭಾಸ್​​ ಅಭಿನಯಿಸಲಿದ್ದಾರೆ ಎಂಬ ವರದಿಗಳು ಈ ಹಿಂದೆ ಬಂದಿದ್ದವು. ಇದನ್ನು ಮಂಚು ವಿಷ್ಣು ಕೂಡ ರಹಸ್ಯಕರ ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಇದೀಗ ಪ್ರಭಾಸ್ ಜೊತೆ ನಯನತಾರಾ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಸದ್ದಾಗುತ್ತಿದೆ.

ಶಿವ-ಪಾರ್ವತಿ ಪಾತ್ರದಲ್ಲಿ ಪ್ರಭಾಸ್, ನಯನತಾರಾ: ಶಿವನ ಜೊತೆ ಪಾರ್ವತಿಯಾಗಿ ನಯನತಾರಾ ಅಭಿನಯಿಸುತ್ತಾರೆ ಎನ್ನಲಾಗಿದೆ. ಅಂತೆಕಂತೆಗಳು ನಿಜವಾದಲ್ಲಿ ಯೋಗಿ ಚಿತ್ರದ ಬಳಿಕ ಅಂದರೆ ಸುಮಾರು ಹದಿನಾರು ವರ್ಷಗಳ ನಂತರ ಪ್ರಭಾಸ್-ನಯನತಾರಾ ಮೋಡಿಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಶಿವನ ಭಕ್ತ ಕಣ್ಣಪ್ಪನ ಕಥೆ ಆಧರಿಸಿದ ಸಿನಿಮಾವಿದು. ಚಿತ್ರವನ್ನು ಒಂದೇ ಶೆಡ್ಯೂಲ್‌ನಲ್ಲಿ ಪೂರ್ಣಗೊಳಿಸುವ ಯೋಜನೆಯೂ ಇದೆಯಂತೆ. ಮಣಿ ಶರ್ಮಾ ಮತ್ತು ಸ್ಟೀಫನ್ ದೇವಸಿ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:ರಾಘ್​ನೀತಿ ವಿವಾಹೋತ್ಸವ: ಕೇಜ್ರಿವಾಲ್​, ಭಗವಂತ್​ ಮಾನ್​ ಆಗಮನ; ಅತಿಥಿಗಳಿಗೆ ವಿಶೇಷ ಭಕ್ಷ್ಯಗಳ ತಯಾರಿ

ನಯನತಾರಾ ಜವಾನ್​ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾದರೂ, ಚಿತ್ರದಲ್ಲಿ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ನಯನತಾರಾ ಚಿತ್ರತಂಡದವರ ಬಗ್ಗೆ ಬೇಸರಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಇತ್ತ ಪ್ರಭಾಸ್​ ಸಲಾರ್​ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಾದ ಬಳಿಕ ಕಲ್ಕಿ 2898 ಎಡಿ ಸಿನಿಮಾ ಇವರ ಕೈಯಲ್ಲಿದೆ. ಬಿಗ್​ ಸ್ಟಾರ್ ಕಾಸ್ಟ್ ಹೊಂದಿರುವ ಈ ಚಿತ್ರ ಬಿಗ್​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ.

ಇದನ್ನೂ ಓದಿ:'ಚಂದ್ರಮುಖಿ 2' ಹೊಸ ಟ್ರೇಲರ್​ ರಿಲೀಸ್: ಸಿನಿಪ್ರೇಮಿಗಳಲ್ಲಿ ಹೆಚ್ಚಿದ ಕುತೂಹಲ, ಸೆಪ್ಟೆಂಬರ್‌ನಲ್ಲಿ ತೆರೆಗೆ

ABOUT THE AUTHOR

...view details