ಕರ್ನಾಟಕ

karnataka

ETV Bharat / entertainment

'ಪ್ರಭಾಸ್ - ಕೃತಿ ನಟನೆ ಪ್ರೇಕ್ಷಕರನ್ನು ತಲುಪಲಿದೆ': ಆದಿಪುರುಷ್ ಎಡಿಟರ್​​ ಆಶಿಶ್ ವಿಶ್ವಾಸ

ಪ್ರಭಾಸ್ ಮತ್ತು ಕೃತಿ ಅವರ ಅಭಿಮಾನಿಗಳು ನಿರಾಶೆಗೊಳ್ಳುವುದಿಲ್ಲ. ಆದಿಪುರುಷ್​ನಲ್ಲಿ ಅವರ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರನ್ನು ತಲುಪಲಿದೆ ಎಂದು ಚಿತ್ರದ ಎಡಿಟರ್​​ ಆಶಿಶ್ ಮ್ಹಾತ್ರೆ ತಿಳಿಸಿದ್ದಾರೆ.

prabhas kriti sanon
ಪ್ರಭಾಸ್ - ಕೃತಿ

By

Published : Feb 22, 2023, 7:53 PM IST

ಪೌರಾಣಿಕ ಕಥಾಹಂದರವುಳ್ಳ ಭಾರತದ ಬಹು ನಿರೀಕ್ಷಿತ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆಗಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಕಳೆದ ಅಕ್ಟೋಬರ್​ 2ರಂದು ಆದಿಪುರುಷ್ ಟೀಸರ್​ ಬಿಡುಗಡೆ ಆಗಿ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗಿತ್ತು. ಟೀಸರ್​ನಲ್ಲಿ ಬರುವ ಕೆಲ ಗ್ರಾಫಿಕ್ಸ್​ ಅನ್ನು ಅನೇಕರು ಕಾರ್ಟೂನ್​ಗಳಿಗೆ ಹೋಲಿಕೆ ಮಾಡಿದ್ದರು. ಟೀಸರ್ ಟೀಕೆಗೊಳಗಾಗಿದ್ದರೂ, ಕಲಾವಿದರ ನಟನೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಭಾರೀ ಟ್ರೋಲಿಂಗ್ ನಡುವೆಯೂ ಆದಿಪುರುಷ್ ಟೀಸರ್​ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿದ ಏಕೈಕ ವಿಷಯ ಎಂದರೆ ನಟ ಪ್ರಭಾಸ್ ಮತ್ತು ನಟಿ ಕೃತಿ ಸನೋನ್​​ ಜೋಡಿ. ಈ ಬಗ್ಗೆ ಆದಿಪುರುಷ್​ ಸಂಕಲನಕಾರ ಆಶಿಶ್ ಮ್ಹಾತ್ರೆ (Ashish Mhatre) ಅವರ ಮಾತುಗಳು ಒಂದೆಡೆಯಾದರೆ, ಪ್ರಭಾಸ್ ಮತ್ತು ಕೃತಿ ಅವರ ದೃಶ್ಯಗಳು ಚಿತ್ರದ ಹೈಲೈಟ್ಸ್​​​​ ಆಗಲಿವೆ ಅನ್ನೋದು ಚಿತ್ರತಂಡ ಸೇರಿದಂತೆ ಅಭಿಮಾನಿಗಳ ಮಾತು.

ಇತ್ತೀಚೆಗೆ ಪ್ರೇಮ ವದಂತಿ ಜೋಡಿ ಪ್ರಭಾಸ್ ಮತ್ತು ಕೃತಿ ಸನೋನ್ ಕೆಮಿಸ್ಟ್ರಿ ಬಗ್ಗೆ ಮಾತನಾಡಿರುವ ಸಂಕಲನಕಾರ ಆಶಿಶ್ ಮ್ಹಾತ್ರೆ, ಆದಿಪುರುಷ್​​ನಲ್ಲಿ ಪ್ರಭಾಸ್ ಮತ್ತು ಕೃತಿ ಅವರ ಬೆರಗುಗೊಳಿಸುವ ನಟನೆ ಬಗ್ಗೆ ವಿವರಿಸಲು ಪದಗಳ ಕೊರತೆಯಿದೆ ಎಂದಿದ್ದಾರೆ. ಈ ಜೋಡಿಯ ಬಗ್ಗೆ ಮಾತನಾಡುತ್ತಾ, ಚಿತ್ರದಲ್ಲಿ ಪ್ರಭಾಸ್ ಮತ್ತು ಕೃತಿ ಅವರ ಅನೇಕ ಭಾವನಾತ್ಮಕ ದೃಶ್ಯಗಳಿವೆ. ಅವು ಪ್ರೇಕ್ಷಕರನ್ನು ತಲುಪಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ದೀಪಿಕಾ ದಾಸ್ ಅವರ ಕರಿಬೆಕ್ಕು ಹುಡುಕಿ ಕೊಡಿ, ₹15 ಸಾವಿರ ಇನಾಮು ಗೆಲ್ಲಿ!

ಈ ವರ್ಷದ ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಯೋಜಿಸಲಾಗಿದ್ದ ಆದಿಪುರುಷ್​ ಇದೇ ಜೂನ್ 16ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಓಂ ರಾವುತ್ ಬರೆದು ನಿರ್ದೇಶಿಸಿರುವ ಈ ಚಿತ್ರವು ರಾಮಾಯಣ ಕಥಾಹಂದರವನ್ನೊಳಗೊಂಡಿದೆ. ಪ್ರಭಾಸ್ ಮತ್ತು ಕೃತಿ ಅವರು ರಾಮ ಸೀತೆಯ ಪಾತ್ರ ನಿರ್ವಹಿಸಿದ್ದರೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅಲಿ ಖಾನ್ ರಾವಣ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲಿ ಹೊಸ ಪ್ರಯೋಗ: ಶೀಘ್ರದಲ್ಲೇ ಜೂಲಿಯೆಟ್ 2 ತೆರೆಗೆ, ಪಾರ್ಟ್ 1 ಶೂಟಿಂಗ್ ಚುರುಕು!​

ಈ ಹಿಂದೆ ಟೀಸರ್​ ಬಗೆಗಿನ ನೆಗೆಟಿವ್ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಓಂ ರಾವತ್, "ನಾನು ಖಂಡಿತವಾಗಿ ನಿರಾಶೆಗೊಂಡಿದ್ದೇನೆ. ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಮಾಡಲಾಗಿದೆ. ನೀವು ಅದನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಬಹುದು. ಆದರೆ, ಅದನ್ನು ಮೊಬೈಲ್ ಫೋನ್‌ಗೆ ತರಲು ಸಾಧ್ಯವಿಲ್ಲ" ಎಂದು ತಿಳಿಸಿದ್ದರು. ಈ ಸಿನಿಮಾವನ್ನು ಮಾಡಿರುವುದು ಬಿಗ್ ಸ್ಕ್ರೀನ್​ಗಾಗಿ. ನಾನು ಆ ಟೀಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಚಿತ್ರವನ್ನು ಎಂದಿಗೂ ಯೂಟ್ಯೂಬ್‌ನಲ್ಲಿ ಹಾಕುವುದಿಲ್ಲ.

ಹೆಚ್ಚಿನ ಸಂಖ್ಯೆ ಪ್ರೇಕ್ಷಕರನ್ನು ತಲುಪಲು ದೊಡ್ಡ ಸ್ಕ್ರೀನ್​ನಲ್ಲೇ ಪ್ರದರ್ಶನ ಮಾಡಿಸಬೇಕಿದೆ. ಸಿನಿಮಾವನ್ನು 3ಡಿ ವರ್ಷನ್​ನಲ್ಲಿ ನೋಡಿದಾಗ ಗ್ರಾಫಿಕ್ಸ್ ಚೆನ್ನಾಗಿ ಕಾಣಿಸುತ್ತದೆ. ಆದರೆ, ಮೊಬೈಲ್​ ಯೂಟ್ಯೂಬ್​ನಲ್ಲಿ ಜನರಿಗೆ ತಲುಪಿಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಗ್ರಾಫಿಕ್ಸ್​ ಚೆನ್ನಾಗಿ ಕಾಣಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ABOUT THE AUTHOR

...view details