ಕರ್ನಾಟಕ

karnataka

ETV Bharat / entertainment

ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕ ಮುಂದೂಡಿಕೆ; ಪ್ರೇಕ್ಷಕರಿಗೆ ನಿರಾಸೆ - ಈಟಿವಿ ಭಾರತ ಕನ್ನಡ

2024ರ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

kalki 2898 AD
ಕಲ್ಕಿ 2898 ಎಡಿ'

By

Published : Jul 24, 2023, 10:50 PM IST

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ 'ಪ್ರಾಜೆಕ್ಟ್​ ಕೆ' ಚಿತ್ರತಂಡ ಫಸ್ಟ್​ ಗ್ಲಿಂಪ್ಸ್​ ಅನಾವರಣಗೊಳಿಸಿ ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆ ಬಹಿರಂಗಗೊಳಿಸಿತು. 'ಕಲ್ಕಿ 2898 ಎಡಿ' ('Kalki 2898 AD') ಎಂದು ಹೆಸರಿಡಲಾಗಿದ್ದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಸಿನಿಮಾದ ಮೊದಲ ನೋಟ ಪ್ರೇಕ್ಷಕರ ಜೊತೆ ಚಲನಚಿತ್ರ ತಾರೆಯರು ಮತ್ತು ನಿರ್ದೇಶಕರನ್ನು ಸೆಳೆದಿದೆ. ಪ್ರಭಾಸ್​ ಅವರ ಲುಕ್​ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

2024ರ ಈ ಬಹುನಿರೀಕ್ಷಿತ ಚಿತ್ರವನ್ನು ಜನವರಿ 12 ರಂದು ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಇದೀಗ ಸದ್ಯದ ವರದಿಗಳ ಪ್ರಕಾರ ರಿಲೀಸ್​ ಡೇಟ್​ ಮುಂದೂಡಲಾಗಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಹೆಚ್ಚು ಸಮಯ ಕಾಯಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಚಿತ್ರವು ಜನವರಿ 12ರ ಬದಲಿಗೆ 2024ರ ಮೇ 9 ರಂದು ರಿಲೀಸ್​ ಆಗಲಿದೆ. ಈ ಬಗ್ಗೆ 'ಕಲ್ಕಿ 2898 ಎಡಿ' ಚಿತ್ರತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಒಂದೆಡೆ ಸ್ವತಃ ನಿರ್ದೇಶಕ ನಾಗ್​ ಅಶ್ವಿನ್ ಅವರೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿರುವುದಾಗಿ ಹೇಳಲಾಗುತ್ತಿದೆ.

ಮತ್ತೊಂದೆಡೆ 'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರದ ವಿಎಫ್‌ಎಕ್ಸ್‌ನಲ್ಲಿನ ಕೆಲಸವೇ ಕಾರಣ ಎಂದು ಹೇಳಲಾಗುತ್ತಿದೆ. ಚಿತ್ರದ ವಿಎಫ್‌ಎಕ್ಸ್‌ ಕೆಲಸ ನಡೆಯುತ್ತಿದೆ. ಇದೇ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ವಿಸ್ತರಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಲ್ಕಿ 2898 ADಯನ್ನು 600 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ವಿಕ್ಕಿ ಕೌಶಲ್​ ನಟನೆಯ 'ಮಸಾನ್‌' ಚಿತ್ರಕ್ಕೆ ಎಂಟು ವರ್ಷ: ಪೋಸ್ಟ್​ ಹಂಚಿಕೊಂಡ ನಟ

ಜಗತ್ತನ್ನು ಕತ್ತಲೆ ಆವರಿಸಿದಾಗ ಶಕ್ತಿಯೊಂದು ಹೊರಹೊಮ್ಮುತ್ತದೆ. ಅಂತ್ಯ ಶುರುವಾಗಲಿದೆ ಎಂಬ ಹಿನ್ನೆಲೆಯಲ್ಲಿ ಚಿತ್ರಕಥೆ ಸಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್​ನಲ್ಲಿ ಸಿನಿಮಾ ಕುರಿತು ಭಾರಿ ನಿರೀಕ್ಷೆ ಮೂಡಿಸುವ ಸಾಹಸ ದೃಶ್ಯಗಳಿವೆ. ದೃಶ್ಯಗಳು ರೋಮಾಂಚಕವಾಗಿದ್ದು, ಪ್ಯಾನ್​​​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ನೋಟ ಅದ್ಭುತವಾಗಿದೆ.

ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​​ ಕಟ್​​ ಹೇಳುತ್ತಿರುವ ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಲ್ಲದೇ ಬಿಗ್ ಬಿ ಅಮಿತಾಭ್​ ಬಚ್ಚನ್, ಕಾಲಿವುಡ್ ಸೂಪರ್​ ಸ್ಟಾರ್ ಕಮಲ್ ಹಾಸನ್, ಬಾಲಿವುಡ್​ ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ಫಿಟ್ನೆಸ್​ ಐಕಾನ್​​ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಗ್​​ ಸ್ಟಾರ್ಸ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಈ ಸಿನಿಮಾವು ಇಂಗ್ಲಿಷ್​ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಜ್ಜಾದಂತೆ ಕಾಣುತ್ತಿದೆ.

ಇದನ್ನೂ ಓದಿ:ಕ್ಯಾಶುವಲ್​ ಲುಕ್​ನಲ್ಲಿ ದೀಪಿಕಾ ಪಡುಕೋಣೆ: ಮಿಲಿಯನ್ ಡಾಲರ್ ಸ್ಮೈಲ್​ನೊಂದಿಗೆ ಫ್ಯಾನ್ಸ್​ ಹೃದಯ ಕದ್ದ ನಟಿ

ABOUT THE AUTHOR

...view details