ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಸ್ಟಾರ್ ಹೀರೋ ಯಶ್ ಅವರಿಗೆ 'ಕೆಜಿಎಫ್' ಮೂಲಕ ತಮ್ಮ ವೃತ್ತಿಜೀವನದ ದೊಡ್ಡ ಯಶಸ್ಸನ್ನು ನೀಡಿದ್ದಾರೆ. ಚಿತ್ರದ ಯಶಸ್ಸಿನೊಂದಿಗೆ ಪ್ರಶಾಂತ್ ನೀಲ್ ಸ್ಟಾರ್ ಡೈರಕ್ಟರ್ ಎಂದು ಗುರುತಿಸಿಕೊಂಡರು.
ಸದ್ಯ ಅವರು ‘ಸಲಾರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ನಾಯಕನಾಗಿ ಚಿತ್ರ ರೆಡಿಯಾಗುತ್ತಿದೆ. ಈ ಸ್ಟಾರ್ ಡೈರೆಕ್ಟರ್ ಜೊತೆ ಕೈಜೋಡಿಸಿರುವ ಈ ಇಬ್ಬರು ಕ್ರೇಜಿ ಹೀರೋಗಳು ಇತ್ತೀಚೆಗಷ್ಟೇ ಒಟ್ಟಿಗೆ ಭೇಟಿಯಾಗಿ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ನೆಟ್ಟಿಗರನ್ನು ಸೆಳೆಯುತ್ತಿವೆ. ಇಷ್ಟಕ್ಕೂ ಆ ಪಾರ್ಟಿ ಏನಂದ್ರೆ.. ಪ್ರಶಾಂತ್ ನೀಲ್ ಹುಟ್ಟುಹಬ್ಬ..
ಕೆಜಿಎಫ್ ಮೂಲಕ ದೇಶಾದ್ಯಂತ ಹವಾ ಕ್ರಿಯೆಟ್ ಮಾಡಿರುವ ಪ್ರಶಾಂತ್ ನೀಲ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಬರ್ತ್ಡೇ ಪಾರ್ಟಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವಿಜಯ್ ಕಿರಗಂದೂರು, ‘ಕೆಜಿಎಫ್: ಚಾಪ್ಟರ್ 1-2’ ಸಿನಿಮಾ ನಟ ಯಶ್ ಮತ್ತು ‘ಸಲಾರ್’ ಚಿತ್ರದ ನಾಯಕ ಪ್ರಭಾಸ್ ಸೇರಿದಂತೆ ಅನೇಕರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.
ಓದಿ:KGF ಚಾಪ್ಟರ್ 3 ಯಾವಾಗ ಆರಂಭ, ಚಿತ್ರದಲ್ಲಿರಲಿದ್ದಾರಾ ಹಾಲಿವುಡ್ ಖಳ ನಟರು?
ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬಕ್ಕಾಗಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂಬುದು ವಿಶೇಷ. ಸದ್ಯ ಬರ್ತ್ಡೇ ಸೆಲೆಬ್ರೇಷನ್ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಎಲ್ಲರೂ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದ ಶುಭ ಕೋರುತ್ತಿರುವುದು ಕಂಡು ಬಂದಿದೆ.
ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆದಾಗಲೇ ಪ್ರಶಾಂತ್ ನೀಲ್ ಪರಭಾಷೆ ಮಂದಿ ಮೇಲೆ ಕಣ್ಣಿಟ್ಟರು. ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡುವ ಅವಕಾಶ ದೊರೆಯಿತು. ಈ ಚಿತ್ರದಿಂದಾಗಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಸಖತ್ ಆತ್ಮೀಯತೆ ಬೆಳೆದಿದೆ. ತಮ್ಮ ಸಿನಿಮಾದ ನಿರ್ದೇಶಕನ ಬರ್ತ್ಡೇ ಮಾಡಲು ಪ್ರಭಾಸ್ ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದಾರೆ. ಈ ವಿಷಯವನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.
ಓದಿ:KGF- 2 ಚಿತ್ರದ ರಾಕಿ ಭಾಯ್ ಪ್ರಭಾವ.. ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ ಬಾಲಕ!
ಪ್ರಶಾಂತ್ ನೀಲ್ ಹುಟ್ಟುಹಬ್ಬದ ಸಲುವಾಗಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತಂಡದವರು ಒಂದೆಡೆ ಸೇರಿದ್ದಾರೆ. ಈ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ನಿರ್ದೇಶಕರ ಹುಟ್ಟುಹಬ್ಬದ ಸಂಭ್ರಮ ಜೊತೆಯಲ್ಲಿ ‘ಕೆಜಿಎಫ್ 2’ ಚಿತ್ರದ 50 ದಿನದ ಸಂಭ್ರಮವನ್ನೂ ಆಚರಿಸಲಾಗಿದೆ. ಪ್ರಶಾಂತ್ ನೀಲ್ ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡರು. ಈ ಕಾರಣದಿಂದ ಪ್ರಶಾಂತ್ ನೀಲ್ ಅವರಿಗೆ ಈ ಹುಟ್ಟುಹಬ್ಬ ವಿಶೇಷವಾಗಿದೆ. ಸದ್ಯ ಅವರ ಕೈಯಲ್ಲಿ ಮಹತ್ವದ ಪ್ರಾಜೆಕ್ಟ್ಗಳಿವೆ. ಸಲಾರ್ ಬಳಿ ಜ್ಯೂ. ಎನ್ಟಿಆರ್ ಅವರ ಹೊಸ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.