ಮೀರತ್ ( ಉತ್ತರಪ್ರದೇಶ):ಸೀಮಾ ಹೈದರ್ ಮತ್ತು ಸಚಿನ್ ಪ್ರೇಮಕಥೆ ಆಧರಿಸಿದ ಚಲನಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಬಗ್ಗೆ ನಿರ್ಮಾಪಕ ಹಾಗೂ ನಿರ್ದೇಶಕ ಅಮಿತ್ ಜಾನಿ ಈ ಹಿಂದೆಯೇ ಘೋಷಿಸಿದ್ದರು. ಇದೀಗ, ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಸೀಮಾ ಹೈದರ್ ಪಾತ್ರಕ್ಕೆ ನಟಿ ಆಯ್ಕೆ ಮಾಡಲಾಗಿದ್ದು, ಸಚಿನ್ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿದೆ.
ಚಿತ್ರದ ಹೆಸರನ್ನು ಜಾನಿ ಫೈರ್ ಫಾಕ್ಸ್ ಫಿಲ್ಮ್ ಪ್ರೊಡಕ್ಷನ್ ನಿರ್ಧರಿಸಿದೆ ಎಂದು ಚಿತ್ರದ ನಿರ್ಮಾಪಕ ನಿರ್ದೇಶಕ ಅಮಿತ್ ಜಾನಿ ತಿಳಿಸಿದ್ದಾರೆ. 'ಕರಾಚಿ ಟು ನೋಯ್ಡಾ' ಎಂಬ ಶೀರ್ಷಿಕೆ ಆಯ್ಕೆ ಮಾಡಲಾಗಿದ್ದು, ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಕರಾಚಿ ಟು ನೋಯ್ಡಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಸಚಿನ್ ಹೊರತಾಗಿ ಭಾರತದಿಂದ ಪಾಕಿಸ್ತಾನಕ್ಕೆ ಹೋದ ಅಂಜು ಅವರ ಕಥೆಯನ್ನು ಸಹ ಸಿನಿಮಾ ಮಾಡಲಾಗುವುದು ಎಂದು ಅವರು ಹೇಳಿದರು.
ಮೂರು ಚಿತ್ರಗಳ ಹೆಸರನ್ನು ಪ್ರೊಡಕ್ಷನ್ ಹೌಸ್ ಬುಕ್ ಮಾಡಿದೆ. ಮೊದಲ ಚಿತ್ರ ಸೀಮಾ ಹೈದರ್ ಕುರಿತಾಗಿದ್ದು, ಎರಡನೇ ಸಿನಿಮಾ ಅಂಜು ಅವರ ಕಥೆಯನ್ನು ಒಳಗೊಂಡಿರಲಿದೆ. ಮೂರನೇಯದು ವೆಬ್ ಸರಣಿ, ಪಾಲ್ಘರ್ನಲ್ಲಿ ನಡೆದ ಸಂತರ ಹತ್ಯೆಯ ಬಗ್ಗೆಯೂ ಚಿತ್ರ ನಿರ್ಮಿಸಲಾಗುವುದು. ಇದಕ್ಕೆ (ಗುಂಪು ಹತ್ಯೆ) ಮಾಬ್ ಲಿಂಚಿಂಗ್ ಎಂಬ ಹೆಸರನ್ನು ಜಾನಿ ಫೈರ್ಫಾಕ್ಸ್ ಫಿಲ್ಮ್ ಪ್ರೊಡಕ್ಷನ್ ಘೋಷಿಸಿದೆ ಎಂದು ನಿರ್ದೇಶಕ ಅಮಿತ್ ಜಾನಿ ಮಾಹಿತಿ ನೀಡಿದರು.
ಇದನ್ನೂ ಓದಿ :ಟೈಲರ್ ಶಿರಚ್ಛೇದ ಪ್ರಕರಣ.. ಉದ್ಯಮಿ ಕೊಲೆಗೂ ಈ ಕಿರಾತಕರು ಇಟ್ಟಿದ್ದರಂತೆ ಮುಹೂರ್ತ!