ಭುವನೇಶ್ವರ (ಒಡಿಶಾ):ಒಡಿಶಾದ ಜನಪ್ರಿಯ ಡಿಜೆ ಅಕ್ಷಯ್ ಕುಮಾರ್ ಅಲಿಯಾಸ್ ಡಿಜೆ ಅಜೆಕ್ಸ್ (Akshay Kumar aka DJ Azex) ಅವರು ಭುವನೇಶ್ವರದ ಖರಾಬೇಲಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಶನಿವಾರ ಸಂಜೆ ಆತ್ಮಹತ್ಯೆ:ಶನಿವಾರ ಸಂಜೆ ಡಿಜೆ ಅಕ್ಷಯ್ ಕುಮಾರ್ ಅವರ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಅವರನ್ನು ನಗರದ ಕ್ಯಾಪಿಟಲ್ ಆಸ್ಪತ್ರೆಗೆ ಕರೆದೊಯ್ದರು. ದುರಾದೃಷ್ಟವಶಾತ್, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆ ಬಳಿಕಷ್ಟೇ ಆತ್ಮಹತ್ಯೆಯ ಕಾರಣ ಬಯಲಿದೆ ಬರಲಿದೆ.
ತಮ್ಮ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣು.. ನಿನ್ನೆ ಸಂಜೆ ಮಳೆ ಬರುತ್ತಿತ್ತು. ಮಗ ಅಕ್ಷಯ್ ಕುಮಾರ್ ತಮ್ಮ ಕೋಣೆಯಲ್ಲಿದ್ದರು. ನಾವು ಅವರನ್ನು ಊಟಕ್ಕೆ ಕರೆದಾಗ ಬಾಗಿಲು ತೆರೆಯಲಿಲ್ಲ. ನಂತರ ನಾವು ಬಾಗಿಲು ಒಡೆದು ನೋಡಿದಾಗ ಮಗನ ಮೃತದೇಹ ಪತ್ತೆಯಾಗಿದೆ ಎಂದು ಡಿಜೆ ಅಜೆಕ್ಸ್ ಅವರ ತಂದೆ ಭಗಬನ್ ಮಹಾರಾಣಾ ತಿಳಿಸಿದರು.
ಪೊಲೀಸ್ ಮಾಹಿತಿ.. ಶನಿವಾರ ರಾತ್ರಿ 11.15ರ ಸುಮಾರಿಗೆ ಕ್ಯಾಪಿಟಲ್ ಆಸ್ಪತ್ರೆಗೆ ಅಕ್ಷಯ್ ಮಹಾರಾಣಾ ದೇಹವನ್ನು ಕೊಂಡೊಯ್ಯಲಾಗಿತ್ತು. ಅವರು ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ" ಎಂದು ಭುವನೇಶ್ವರದ ವಲಯ-I ಎಸಿಪಿ ಮಾನಸ್ ಗಡನಾಯಕ್ ಮಾಹಿತಿ ನೀಡಿದ್ದಾರೆ. ಪೊಲೀಸ್ ತನಿಖೆ ಆರಂಭಿಸಿದ್ದಾರೆ.