ಬಾಲಿವುಡ್ನ ಬಹುನಿರೀಕ್ಷಿತ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟಿ ಪೂಜಾ ಹೆಗ್ಡೆ ಪಾದದ ಗಾಯದಿಂದ ಬಳಲುತ್ತಿದ್ದರೂ ಶೂಟಿಂಗ್ನಿಂದ ತಪ್ಪಿಸಿಕೊಂಡಿಲ್ಲ. ಇತ್ತೀಚೆಗೆ ತಮ್ಮ ಜನ್ಮ ದಿನವನ್ನೂ ನಟಿ ಸೆಟ್ನಲ್ಲೇ ಆಚರಿಸಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಪ್ ಒಂದನ್ನು ಪೂಜಾ ಹಂಚಿಕೊಂಡು, ಪಾದದ ಗಾಯದಿಂದ ಬಳಲುತ್ತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ ತಾವು ಶೂಟಿಂಗ್ಗೆ ತಯಾರಾಗುತ್ತಿರುವುದಾಗಿಯೂ ಹೇಳಿದ್ದರು.