ಕರ್ನಾಟಕ

karnataka

ETV Bharat / entertainment

ಕಾಲೇಜು ದಿನಗಳಲ್ಲಿ ನನಗೆ ಬೆಂಗಳೂರು ನ್ಯೂಯಾರ್ಕ್ ಸಿಟಿಯಾಗಿತ್ತು: ತಮಿಳು ನಟ‌ ಕಾರ್ತಿ - Tamil actor Karthi

ತಮಿಳು ನಟ ಕಾರ್ತಿ ಬೆಂಗಳೂರು ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Ponniyin Selvan promotion
ಪೊನ್ನಿಯಿನ್‌ ಸೆಲ್ವನ್ ಪ್ರಚಾರ

By

Published : Sep 23, 2022, 2:27 PM IST

ಸಾಮಾನ್ಯ ಜನರಿಗೆ ಮಾತ್ರವಲ್ಲದೇ ಸಿನಿಮಾ‌ ಸೆಲೆಬ್ರಿಟಿಗಳಿಗೂ ಬೆಂಗಳೂರು ಎಂದರೆ ಅಚ್ಚು ಮೆಚ್ಚು. ಬಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗದ ಯಾರೇ ಸೆಲೆಬ್ರಿಟಿಗಳು ಬರಲಿ ಬ್ಯೂಟಿಫುಲ್ ಪ್ಲೇಸ್ ಬೆಂಗಳೂರು ಬಗೆಗಿನ ಕೆಲ ಸಂಗತಿಗಳನ್ನು ಹಂಚಿಕೊಳ್ಳತ್ತಾರೆ. ಈ ಬಾರಿ ತಮಿಳು ಸ್ಟಾರ್ ಕಾರ್ತಿ ಬೆಂಗಳೂರು ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ಮಣಿರತ್ನಂ ಆ್ಯಕ್ಷನ್‌ ಕಟ್‌ ಹೇಳಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್‌ ಸೆಲ್ವನ್‌' ಸೆಪ್ಟೆಂಬರ್ 30ರಂದು ತೆರೆ ಕಾಣಲು ಸಜ್ಜಾಗಿದ್ದು ಸಿನಿಮಾ ಪ್ರಚಾರ ಕಾರ್ಯ ನಡೆಯುತ್ತಿದೆ. ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ ಭಾಷೆಯಲ್ಲಿಯೂ ಬಿಡುಗಡೆ ಆಗುತ್ತಿದೆ.‌

ತಮಿಳು ನಟ‌ ಕಾರ್ತಿ

ಈ ಹಿನ್ನೆಲೆ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ನಿನ್ನೆ ಬೆಂಗಳೂರಿಗೆ ಆಗಮಿಸಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ‌ ವಿಕ್ರಮ್‌, ಕಾರ್ತಿ, ಜಯಂರವಿ, ತ್ರಿಷಾ ಹಾಗೂ ಇನ್ನಿತರರು ಭಾಗವಹಿಸಿದ್ದರು. ಎಲ್ಲರೂ ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ:'ಪೊನ್ನಿಯಿನ್‌ ಸೆಲ್ವನ್‌' ಮಣಿರತ್ನಂ ಅವರ ಕನಸಿನ ಸಿನಿಮಾ: ನಟ ವಿಕ್ರಮ್

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ನಟ ಕಾರ್ತಿ, ನನಗೆ ಇಷ್ಟೇ ಕನ್ನಡ ಬರುವುದು ಎಂದರು. ನಂತರ ತಮಿಳು ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡಿದ ಅವರು, ಇಲ್ಲಿಗೆ ಬರುತ್ತಿದ್ದಂತೆ ನನಗೆ ಕಾಲೇಜು ದಿನಗಳು ನೆನಪಾಯಿತು. ನಾವು ಮನೆಯಲ್ಲಿ ಸುಳ್ಳು ಹೇಳಿ ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಸುತ್ತಾಡಿ ನಂತರ ಚೆನ್ನೈ ಬಸ್‌ ಹಿಡಿದು ಹೊರಡುತ್ತಿದ್ದೆವು.

ಬೆಂಗಳೂರು ನಮಗೆ ಆಗ ನ್ಯೂಯಾರ್ಕ್‌ ಇದ್ದ ಹಾಗೆ ಇತ್ತು. ಇಲ್ಲಿ ಇಂಗ್ಲಿಷ್​​ ಸಿನಿಮಾಗಳು ರಿಲೀಸ್‌ ಆಗುತ್ತಿತ್ತು. ರೂಮ್‌ ಬಹಳ ದುಬಾರಿ ಆಗಿದ್ದರಿಂದ ಎಲ್ಲಿಯೂ ರೂಮ್‌ ಬುಕ್‌ ಮಾಡದೇ ಸುತ್ತಾಡಿ, ಎಂ.ಜಿ ರೋಡ್‌ನಲ್ಲಿ ವಿಂಡೋ ಶಾಪಿಂಗ್‌ ಮಾಡುತ್ತಿದ್ದೆವು. ಕಡಿಮೆ ಬೆಲೆಗೆ ಸಿಗುತ್ತಿದ್ದರಿಂದ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಬೇಕಿದ್ದನ್ನು ಖರೀದಿಸುತ್ತಿದ್ದೆವು. ನಾನು ಕೆಎಫ್​ಸಿ ನೋಡಿದ್ದು ಮೊದಲು ಬೆಂಗಳೂರಿನಲ್ಲೇ. ಅದನ್ನು ನೆನಪಿಸಿಕೊಂಡರೆ ಬಹಳ ಖುಷಿಯಾಗುತ್ತದೆ ಎಂದು ತಮಿಳು ನಟ ಕಾರ್ತಿ ತಮ್ಮ ಕಾಲೇಜು ದಿನಗಳ ಬಗ್ಗೆ ಮೆಲುಕು ಹಾಕಿದರು.

ABOUT THE AUTHOR

...view details