ಪೊನ್ನಿಯಿನ್ ಸೆಲ್ವನ್ ಕಳೆದ ವರ್ಷದ ಹಿಟ್ ಚಿತ್ರಗಳಲ್ಲಿ ಒಂದು. ಮಣಿರತ್ನಂ ನಿರ್ದೇಶನದ ಚಿತ್ರ 2022ರ ಸೆಪ್ಟೆಂಬರ್ 30ರಂದು ತೆರೆಕಂಡು ಧೂಳೆಬ್ಬಿಸಿತ್ತು. ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ, ಪ್ರಕಾಶ್ ರಾಜ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕ ಘಟಾನುಘಟಿಗಳ ಚಿತ್ರ ಉತ್ತಮ ಕಲೆಕ್ಷನ್ (480 ಕೋಟಿ ರೂ.) ಮಾಡುವಲ್ಲಿ ಯಶಸ್ವಿ ಆಗಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್ ಬಿಡುಗಡೆಗೆ ಸಜ್ಜಾಗಿದೆ.
ಮಣಿರತ್ನಂ ನಿರ್ದೇಶನದಲ್ಲೇ ಪೊನ್ನಿಯಿನ್ ಸೆಲ್ವನ್ 2 ರೆಡಿಯಾಗಿದ್ದು, ಮೊದಲ ಭಾಗದಲ್ಲಿದ್ದವರು ಮುಂದುವರಿದಿದ್ದಾರೆ. ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಏಪ್ರಿಲ್ 28ರಂದು ಬಹುನಿರೀಕ್ಷಿತ ಚಿತ್ರ ತೆರೆ ಕಾಣಲಿದ್ದು, ಇದೀಗ ರಾಷ್ಟ್ರವ್ಯಾಪಿ ಪ್ರಚಾರ ಪ್ರವಾಸವನ್ನು ಚಿತ್ರತಂಡ ಆರಂಭಿಸಿದೆ.
ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ವಿಕ್ರಮ್, ಐಶ್ವರ್ಯಾ ರೈ, ಜಯಂ ರವಿ, ತ್ರಿಶಾ ಮತ್ತು ಕಾರ್ತಿ ಒಳಗೊಂಡಿರುವ ಚಿತ್ರತಂಡ ಚಿತ್ರ ಪ್ರಚಾರಕ್ಕಾಗಿ ಕೊಯಮತ್ತೂರ್‌ಗೆ ಆಗಮಿಸಿದೆ. ನಟ ವಿಕ್ರಮ್ ಟ್ವಿಟರ್‌ನಲ್ಲಿ ಇಡೀ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಂಡವು ಕೊಚ್ಚಿ, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ರಾಷ್ಟ್ರದಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ.
ಪೊನ್ನಿಯಿನ್ ಸೆಲ್ವನ್ ಚಲನಚಿತ್ರವು ಇಲ್ಲಿಯವರೆಗಿನ ಅತ್ಯಂತ ದುಬಾರಿ ತಮಿಳು ಚಲನಚಿತ್ರಗಳಲ್ಲಿ ಒಂದಾಗಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್‌ನಿಂದ ಹಣವನ್ನು ಹೂಡಲಾಗಿದೆ. ಮೊದಲ ಭಾಗ ಕೆಲಕ್ಷನ್ ವಿಚಾರದಲ್ಲಿ ಸದ್ದು ಮಾಡಿದ್ದು, ಸಕ್ವೆಲ್ ಮೇಲೂ ಭಾರಿ ನಿರೀಕ್ಷೆ ಇದೆ.