ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಕುರಿತು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ನಾಳೆ ಸಂಜೆ 6ರ ಹೊತ್ತಿಗೆ ಚಂದ್ರನ ಮೇಲೆ ಲ್ಯಾಂಡರ್ ಇಳಿಯಲಿದ್ದು, ಚಂದ್ರಯಾನ 3 ಯಶಸ್ವಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬರುತ್ತಿವೆ. ಈ ಹೊತ್ತಿನಲ್ಲಿ ಚಂದ್ರಯಾನ 3 ಕುರಿತು ನಟ ಪ್ರಕಾಶ್ ರಾಜ್ ಅವರ ಟ್ವೀಟ್ ವಿಚಾರ ಸದ್ದು ಮಾಡುತ್ತಿದೆ.
ಪ್ರಕಾಶ್ ರಾಜ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ:ಚಂದ್ರಯಾನ 3 ಕುರಿತು ಸಾಮಾಜಿಕ ಜಾಲತಾಣ xನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವಿಚಾರವಾಗಿ ಬನಹಟ್ಟಿ ಪಟ್ಟಣದ ನಿವಾಸಿಯಾಗಿರುವ ಶಿವಾನಂದ ಗಾಯಕವಾಡ ಎಂಬುವವರು ಪ್ರಕಾಶ ರೈ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀರಿಗೆ ಮನವಿ ಸಲ್ಲಿಸಿದ್ದಾರೆ. ದೇಶದ ವಿಜ್ಞಾನಿಗಳ ಬಗ್ಗೆ ಅಪಹಾಸ್ಯ ಮಾಡಿದ್ದು, ಈ ಕುರಿತು ಪ್ರಕಾಶ್ ರಾಜ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಚಂದ್ರಯಾನ 3 ಕುರಿತು ಟ್ವೀಟ್: ನಟ ಪ್ರಕಾಶ್ ರಾಜ್ ವಿರುದ್ಧ ದೂರು ವ್ಯಂಗ್ಯ ಚಿತ್ರ ಪೋಸ್ಟ್: ಜನಪ್ರಿಯ ನಟ ಪ್ರಕಾಶ್ ರಾಜ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯ ವ್ಯಂಗ್ಯ ಚಿತ್ರವೊಂದನ್ನು (caricature) ಶೇರ್ ಮಾಡಿ, ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಬರೆದುಕೊಂಡಿದ್ದರು. ಇದೀಗ ಈ ಟ್ವೀಟ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಪ್ರಕಾಶ್ ರಾಜ್ ತಮ್ಮ ಟ್ವೀಟ್ ಕುರಿತಂತೆ ಸ್ಪಷ್ಟನೆ ನೀಡಿದ್ದರು.
ಸ್ಪಷ್ಟನೆ ಕೊಟ್ಟ ನಟ ಪ್ರಕಾಶ್ ರಾಜ್:ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದುರಿಸುತ್ತಿರುವ ಪ್ರಕಾಶ್ ರಾಜ್, ತಮ್ಮ ಪೋಸ್ಟ್ ಹಿಂದಿನ ಜೋಕ್ವೊಂದಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ''ದ್ವೇಷವು ದ್ವೇಷವನ್ನೇ ನೋಡುತ್ತದೆ... ಆರ್ಮ್ ಸ್ಟ್ರಾಂಗ್ ಸಮಯದಲ್ಲಿನ ಕೇರಳ ಚಾಯ್ ವಾಲಾಗಳ ಕುರಿತಾದ ಜೋಕ್ ಉಲ್ಲೇಖಿಸಿದ್ದೇನೆ. ಈಗ ಯಾವ ಚಾಯ್ ವಾಲಾಗಳು ಟ್ರೋಲ್ ಮಾಡಿದ್ದಾರೆ ನೋಡಿ? ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಳ್ಳಲು ಕಲಿಯಿರಿ, ಬೆಳೆಯಿರಿ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:Rajinikanth: ಯುಪಿ ಸಿಎಂ ಯೋಗಿ ಪಾದ ಸ್ಪರ್ಶಿಸಿ ಗೌರವ ಸೂಚನೆ.. ಮಿಶ್ರ ಪ್ರತಿಕ್ರಿಯೆಗೆ ಸ್ಪಷ್ಟನೆ ಕೊಟ್ಟ ನಟ ರಜನಿಕಾಂತ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಚಮದ್ರಯಾನ 3 ಮಿಷನ್ ನಾಳೆ ಸಂಜೆ (ಆಗಸ್ಟ್ 23) 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯಲಿದೆ. ಇಸ್ರೋ ವೆಬ್ಸೈಟ್, ಅದರ ಯೂಟ್ಯೂಬ್ ಚಾನಲ್, ಫೇಸ್ಬುಕ್, ಡಿಡಿ ನ್ಯಾಷನಲ್ ಟಿವಿಯಲ್ಲಿ ಲೈವ್ (5 ಗಂಟೆ 27 ನಿಮಿಷದಿಂದ ಪ್ರಾರಂಭ) ಲಭ್ಯವಿರಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ಬಳಿಕ ಈ ಸಾಧನೆಗೈದ ವಿಶ್ವದ ನಾಲ್ಕನೇ ದೇಶ ಭಾರತ. ಆದರೆ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಏಕೈಕ ದೇಶವಾಗಲಿದೆ
ಇದನ್ನೂ ಓದಿ:'ಚಂದಮಾಮ'ನ ಸ್ಪರ್ಶಿಸಲು ಭಾರತದ ಕಾತರ: ಇಸ್ರೋ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ಹೇಳಿದ್ದೇನು?