ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಭಾರತ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ. ಈ ವಿಶೇಷ ಇತಿಹಾಸ ಸೃಷ್ಟಿಸಿದ ರಿಕ್ಕಿ ಕೇಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.
"ಅದ್ಭುತವಾಗಿದೆ. ಇದು ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಚಾರ." ಎಂದು ರಿಕ್ಕಿಯ ಪೋಸ್ಟ್ಗೆ ಪ್ರಧಾನಿ ಮೋದಿ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ರಿಕ್ಕಿ ಅವರು ತಮ್ಮ ಪೋಸ್ಟ್ನಲ್ಲಿ "ಕೆಲವು ದಿನಗಳ ಹಿಂದೆ ನಾನು ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಆರ್ಕೆಸ್ಟ್ರಾವನ್ನು ನಡೆಸಿದ್ದೆ. ಇದು ಭಾರತದ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ ಅತಿ ದೊಡ್ಡ ಆರ್ಕೆಸ್ಟ್ರಾವಾಗಿದೆ. ಇದು ಅದ್ಭುತವಾಗಿದೆ. ಕೊನೆಯಲ್ಲಿ ಜಯ್ ಹೇ ಗೂಸೆಬಂಪ್ಸ್ ನೀಡಿತು. ಭಾರತೀಯ ಸಂಗೀತ ಸಂಯೋಜಕನಾಗಿ ಇದು ಉತ್ತಮವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:Independence Day 2023: ತ್ರಿವರ್ಣ ರಂಗಿನಿಂದ ರಾರಾಜಿಸುತ್ತಿದೆ ಭಾರತ... ಕೆಂಪುಕೋಟೆಯಲ್ಲಿ ಬಿಗಿ ಬಂದೋಬಸ್ತ್
ಈ ಮಧ್ಯೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರನ್ನು ಶ್ಲಾಘಿಸಿದ್ದಾರೆ. "ರಾಷ್ಟ್ರಗೀತೆಯನ್ನು ಹಾಡಲು ಮತ್ತು ರಾಷ್ಟ್ರಧ್ವಜವನ್ನು ಹಾರಿಸಲು ಧೈರ್ಯ ಮಾಡಿದ ಭಾರತೀಯರನ್ನು ಬ್ರಿಟಿಷರು ಜೈಲಿಗೆ ತಳ್ಳುವ ಕಾಲವೊಂದಿತ್ತು. ನಾವು ಸ್ವಾತಂತ್ರ್ಯದ ಅಮೃತ ಕಾಲವನ್ನು ಪ್ರವೇಶಿಸುತ್ತಿದ್ದಂತೆ, ಭಾರತ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಇದನ್ನು ಭಾರತೀಯ ಪ್ರತಿಭಾವಂತ ರಿಕ್ಕಿ ಕೇಜ್ ನಡೆಸಿದ್ದಾರೆ. ಇದು ನಮ್ಮ ರಾಷ್ಟ್ರ ಕಾಯುತ್ತಿರುವ ವೈಭವದ ದಿನಗಳ ಮುನ್ನುಡಿಯಾಗಿದೆ" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್: ಕನ್ನಡ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ ಅಂಗಳದಲ್ಲೂ ತನ್ನದೇ ವಿಭಿನ್ನ ಮ್ಯೂಸಿಕ್ನಿಂದ ಬ್ರ್ಯಾಂಡ್ ಆಗಿರುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್. ಸದ್ಯ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ, ಪರಿಸರವಾದಿಯೂ ಆಗಿರುವ ರಿಕ್ಕಿ ಕೇಜ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ದಿನ ಅಂದ್ರೆ, ಆಗಸ್ಟ್ 14ರಂದು ವಿಭಿನ್ನ ಬಗೆಯ ರಾಷ್ಟ್ರಗೀತೆ ಬಿಡುಗಡೆಯಾಗಿದೆ.
ಇದನ್ನೂ ಓದಿ:Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ