ಕರ್ನಾಟಕ

karnataka

ETV Bharat / entertainment

ಹಿರಿಯ ನಟ ಕೃಷ್ಣ ನಿಧನ.. ಪಿಎಂ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ

ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

PM Modi condolence on actor Krishna death
ಕೃಷ್ಣ ನಿಧನಕ್ಕೆ ಪಿಎಂ ಮೋದಿ ಸಂತಾಪ

By

Published : Nov 15, 2022, 3:48 PM IST

ವೃದ್ಧಾಪ್ಯ ಸಂಬಂಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ತೆಲುಗು ಸಿನಿಮಾ ಲೋಕದ ನಟ ಕೃಷ್ಣ (80) ಇಂದು ಇಹಲೋಕ ತ್ಯಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ನಟ ಮಹೇಶ್ ಬಾಬು ತಂದೆ ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ದುಃಖದಲ್ಲಿರುವ ಕೃಷ್ಣ ಅವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದಾರೆ. 'ಕೃಷ್ಣ ಲೆಜೆಂಡರಿ ನಟರಾಗಿದ್ದು, ತಮ್ಮ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದಿದ್ದರು. ಅವರ ನಿಧನದಿಂದ ಮನೋರಂಜನಾ ಲೋಕಕ್ಕೆ ಅಪಾರ ನಷ್ಟವಾಗಿದೆ. ಓಂ ಶಾಂತಿ...''ಎಂದು ಪಿಎಂ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದು, 'ತೆಲುಗಿನ ಹಿರಿಯ ನಟ ಕೃಷ್ಣಗಾರು ಅವರ ನಿಧನದಿಂದ ದುಃಖವಾಗಿದೆ. ಅವರು ತೆಲುಗು ಚಿತ್ರರಂಗದಲ್ಲಿ ಅನೇಕ ಹೊಸತನಗಳಿಗೆ ನಾಂದಿ ಹಾಡಿದ್ದರು. ಇಂದು ಅವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅವರ ನಿಧನ ಭಾರತೀಯ ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ. ಮಹೇಶ್ ಮತ್ತು ಅವರ ಕುಟುಂಬಕ್ಕೆ ನನ್ನ ಸಂತಾಪವನ್ನು ತಿಳಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಸೂಪರ್​ಸ್ಟಾರ್ ರಜನಿಕಾಂತ್​ ಟ್ವೀಟ್ ಮಾಡಿದ್ದು, 'ಕೃಷ್ಣ ಅವರ ನಿಧನ ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರೊಂದಿಗೆ 3 ಚಿತ್ರಗಳಲ್ಲಿ ಕೆಲಸ ಮಾಡಿದ್ದು, ನಾನು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನನ್ನ ಸಂತಾಪ ತಿಳಿಸುತ್ತೇನೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:'ಟಾಲಿವುಡ್‌ ಜೇಮ್ಸ್ ಬಾಂಡ್' ಇನ್ನಿಲ್ಲ: ಸೂಪರ್‌ ಸ್ಟಾರ್ ಕೃಷ್ಣ ನಡೆದು ಬಂದ ಹಾದಿ..

ನಟ ಕಮಲ್ ಹಾಸನ್ ಸಂತಾಪದಲ್ಲಿ, 'ತೆಲುಗು ಚಿತ್ರರಂಗದ ಐಕಾನ್ ಕೃಷ್ಣಗಾರು ಇನ್ನಿಲ್ಲ, ಅವರ ನಿಧನದೊಂದಿಗೆ ಒಂದು ಯುಗ ಕೊನೆಗೊಳ್ಳುತ್ತದೆ' ಎಂದು ದುಃಖ ಹೊರಹಾಕಿದ್ದಾರೆ. ತಾಯಿ, ಸಹೋದರನ ಸಂತರ ಈಗ ತನ್ನ ತಂದೆಯನ್ನು ಕಳೆದುಕೊಂಡ ಭಾವನಾತ್ಮಕ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಮಹೇಶ್ ಬಾಬು ಅವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details