ಹೈದರಾಬಾದ್: ಕಳೆದ ತಿಂಗಳು ರಾಜಸ್ಥಾನದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕೊನೆ ಮಗ ಅನಂತ್ ಅಂಬಾನಿ - ರಾಧಿಕಾ ಮರ್ಜೆಂಟ್ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿತ್ತು. ಆದರೆ, ಮದುವೆ ದಿನಾಂಕ ಮಾತ್ರ ಇನ್ನೂ ಪ್ರಕಟವಾಗಿರಲಿಲ್ಲ. ಈ ನಡುವೆ ಅಂಬಾನಿ ಮತ್ತು ಮರ್ಚೆಂಟ್ ಎರಡು ಮನೆಗಳಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಈ ಕುರಿತಾದ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಹಂದಿ ಕಾರ್ಯಕ್ರಮದ ಚಿತ್ರಗಳು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ರಾಧಿಕ ಬಹು ಬಣ್ಣದ ರೆಷ್ಮಂ ಲೆಹಂಗಾದಲ್ಲಿ ಮಿಂಚಿದ್ದಾರೆ
ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ ರಾಧಿಕಾ: ಮೆಹಂದಿಗೆ ರಾಧಿಕಾ ಅವರುು ಜಾನಿ ಮತ್ತು ಸಂದೀಪ್ ಕೊಸ್ಲಾ ಅವರನ್ನು ಡಿಸೈನರ್ಗಳಾಗಿ ಆರಿಸಿಕೊಂಡಿದ್ದಾರೆ. ಗುಲಾಬಿ ಬಣ್ಣ ವಿನ್ಯಾಸದ ಲೆಹಂಗಾಕ್ಕೆ ಚೋಕರ್ ಮತ್ತು ರಾಣಿ ಹಾರವನ್ನು ರಾಧಿಕಾ ತೊಟ್ಟಿರುವುದು ಕಾಣಬಹುದಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಅವರ ಮೇಕಪ್ ಮತ್ತು ಕೇಶ ವಿನ್ಯಾವನ್ನು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿರುವ ಆರ್ತಿ ನಾಯರ್ ಮಾಡಿದ್ದಾರೆ.
ಮೆಹಂದಿ ವಿನ್ಯಾಸಕಾರರಾದು ಅಬ ಜಾನಿ ಮತ್ತು ಸಂದೀಪ್ ಕೊಸ್ಲಾ, ರಾಧಿಕಾ ಅವರ ಕೈಯಲ್ಲಿ ಬರೆದಿರುವ ಮೆಹಂದಿ ವಿನ್ಯಾಸದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದ ಅದ್ಬುತ ಕ್ಷಣಗಳನ್ನು ಖ್ಯಾತ ಸೆಲಿಬ್ರಿಟಿ ಫೋಟೋಗ್ರಾಫರ್ ಡಬೊ ರತ್ನಾನಿ ಸೆರೆ ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಫೋಟೋಗಳು: ಇನ್ನು ಈ ಮೆಹಂದಿ ಕಾರ್ಯಕ್ರಮದ ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಇದರ ಜೊತೆ ಕಾರ್ಯಕ್ರದಲ್ಲಿ ಕಳಂಕ್ ಸಿನಿಮಾದ ಘರ್ ಮೋರ್ ಪರ್ದೇಸಿಯಾ ಹಾಡಿಗೆ ರಾಧಿಕಾ ಹೆಜ್ಜೆ ಹಾಕಿರುವ ವಿಡಿಯೋ ಕೂಡ ಕಂಡು ಬಂದಿದೆ. ಭರತನಾಟ್ಯ ಕಲಾವಿದೆಯಾಗಿರುವ ರಾಧಿಕಾ ತಮ್ಮ ಅದ್ಬುತ ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ.
ಎನ್ಕೋರ್ ಹೆಲ್ತ್ಕೇರ್ನ ಸಿಇಒ ಆಗಿರುವ ವಿರೇನ್ ಮರ್ಚೆಂಟ್ ಅವರ ಮಗಳೇ ಈ ರಾಧಿಕಾ. ಇವರು ಗುಜರಾತ್ನ ಕಛ್ ಮೂಲದವರು. 8ನೇ ವರ್ಷಕ್ಕೆ ಭರತನಾಟ್ಯ ಕಲಿಕೆ ಆರಂಭಿಸಿರುವ ರಾಧಿಕಾ ಗುರುಗಳು ನಭಾ ಆರ್ಟ್ಸ್ನ ಗುರು ಭವಾನ ಥಾಕರ್ ಆಗಿದ್ದಾರೆ. ಕಳೆದ ಜೂನ್ ನಲ್ಲಿ ರಾಧಿಕಾ ರಂಗ ಪ್ರವೇಶಕ್ಕೆ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಕುಟುಂಬ ವೇದಿಕೆ ಸಿದ್ದತೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಮಂದಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಅನಂತ್ ಅಂಬಾನಿ ಮುಕೇಶ್ ಅಂಬಾನಿ ಅವರ ಕಿರಿಯ ಮಗನಾಗಿದ್ದು, ರಿಲಯನ್ಸ್ ಎನರ್ಜಿ ಅನ್ನು ಮುನ್ನಡೆಸಲಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥದ ಅದ್ದೂರಿ ಸಮಾರಂಭವನ್ನು ಅಂಬಾನಿ ನಿವಾಸ ಅಂಟಿಲಿಯಾದಲ್ಲಿ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿ ಟೌನ್ ಸೆಲಿಬ್ರಿಟಿಗಳಾದ ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ಜಾನ್ವಿ ಕಪೂರ್, ಆಲಿಯಾ ಭಟ್, ರಣಬೀರ್ ಕಪೂರ್, ರಣವೀರ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನು ಸಂಪ್ರದಾಯ ಬದ್ಧ ರೋಕ (ನಿಶ್ಚಿತಾರ್ಥ)ವನ್ನು ರಾಜಸ್ಥಾನದ ನಾಥ್ದ್ವಾರದ ಶ್ರೀನಾಥ್ಜೀ ದೇಗುಲದಲ್ಲಿ ನಡೆಸಲಾಗಿತ್ತು.
ಇದನ್ನೂ ಓದಿ: ನಟಿ ಐಶ್ವರ್ಯಾ ರೈಗೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ