ಹೈದರಾಬಾದ್: ನಟ ಪ್ರಭಾಸ್ ಅವರು ಮತ್ತೆ ಆ್ಯಕ್ಷನ್ ಸಿನಿಮಾ ಪಾತ್ರಗಳಲ್ಲಿ ಮಗ್ನರಾಗಿದ್ದಾರೆ. ಅವರ ಮುಂದಿನ ಚಿತ್ರದ ಹೆಸರು 'ರಾಜಾ ಡಿಲಕ್ಸ್'. ಇದರ ಕೆಲವು ಸೀನ್ಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನಿರ್ದೇಶಕ ಮಾರುತಿ ಜೊತೆ ಪ್ರಭಾಸ್ ಮಾತುಕತೆ ನಡೆಸುತ್ತಿರುವ ಸೆಟ್‌ನ ಫೋಟೋಗಳು ಕಂಡುಬಂದಿವೆ. ಶೂಟಿಂಗ್ಗೆ ಸಜ್ಜಾಗಿ ಕುಳಿತಿರುವ ಪ್ರಭಾಸ್ ಅವರ ಚಿತ್ರಗಳನ್ನು ಅಭಿಮಾನಿಗಳು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದಾರೆ.
'ರಾಜಾ ಡಿಲಕ್ಸ್'ನಲ್ಲಿ ಪ್ರಭಾಸ್ಗೆ ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಮತ್ತು ರಿದ್ದಿ ಕುಮಾರ್ ಜೊತೆಯಾಗಿದ್ದಾರೆ. ಇದೊಂದು ಕಾಮಿಡಿ-ಹಾರರ್ ಚಿತ್ರ ಎನ್ನಲಾಗುತ್ತಿದೆ. ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷತೆ.