ಹೈದರಾಬಾದ್ (ತೆಲಂಗಾಣ): ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅಭಿನಯಿಸಿರುವ ಫೋನ್ ಭೂತ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಭಯಾನಕದೊಂದಿಗೆ ಹಾಸ್ಯಭರಿತವಾಗಿಯೂ ಇದೆ. ಟ್ರೈಲರ್ ನೋಡಿದವರಿಗೆ ಒಂದು ಕಡೆ ಭಯವಾದರೆ, ಭಯದೊಂದಿಗೆ ಇತ್ತು ನಗುವಿನ ಕಡಲಲ್ಲೂ ತೇಲಿಸುತ್ತಿದೆ.
ಮಿರ್ಜಾಪುರ್ ಜನಪ್ರಿಯ ವೆಬ್ಸರಣಿಗೆ ನಿರ್ದೇಶನ ಮಾಡಿದ್ದ ಗುರ್ಮೀತ್ ಸಿಂಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭೂತ್ ಫೋನ್ ಹಾರರ್ ಕಾಮಿಡಿ ಸಿನಿಮಾದಲ್ಲಿ ಇಶಾನ್, ಸಿದ್ಧಾಂತ್ ಹಾಗೂ ಕತ್ರಿನಾ ಅವರು ಕಮಾಲ್ ಮಾಡಿದ್ದಾರೆ. 37 ಹರೆಯದ ಕತ್ರಿನಾ ಇದೇ ಮೊದಲ ಬಾರಿಗೆ 25ರ ಹರೆಯ ಇಶಾನ್ ಹಾಗೂ 27 ಹರೆಯದ ಸಿದ್ಧಾಂತ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಫೋನ್ ಭೂತ್ ಟ್ರೈಲರ್ ನೋಡಿದರೆ ಈ ಚಿತ್ರ ಘೋಸ್ಟ್ಬಸ್ಟರ್ ಭಾರತೀಯ ಆವೃತ್ತಿಗೆ ಟ್ಯಾಗ್ ಮಾಡುವಂತಿದೆ.