ಕಿರುತೆರೆ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಹಾಗೂ ಸದ್ಯ ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವ ನಟಿ ತನಿಷಾ ಕುಪ್ಪಂಡ. ಸದ್ಯ ಐದು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಪೆಂಟಗನ್ ಸಿನಿಮಾ ಮೂಲಕ ಸುದ್ದಿಯಲ್ಲಿರುವ ನಟಿ ಯೂಟ್ಯೂಬರ್ ಒಬ್ಬ ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನದ ವೇಳೆ ಯೂಟ್ಯೂಬರ್, ಪೆಂಟಗನ್ ಸಿನೆಮಾದ ಹಾಡಿನಲ್ಲಿ ಸಿಕ್ಕಾಪಟ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೀರಾ. ನೂಡ್ ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಕೋಪಗೊಂಡ ನಟಿ ಯೂಟ್ಯೂಬರ್ ಅವರನ್ನು ತರಾಟೆಗೆ ತೆಗೆದುಕೊಂಡು ಸಂದರ್ಶನದಿಂದ ಹೊರ ನಡೆದಿದ್ದರು. ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ಗಿಮಿಕ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆ ನಟಿ ತನಿಷಾ ಕುಪ್ಪಂಡ ಹಾಗೂ ಪೆಂಟಗನ್ ಚಿತ್ರದ ನಿರ್ದೇಶಕ ರಘು ಸುದ್ದಿಗೋಷ್ಠಿ ನಡೆಸಿ ಯೂಟ್ಯೂಬರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಯೂಟ್ಯೂಬರ್ ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ಈ ರೀತಿ ವರ್ತಿಸುವುದು ಸರಿಯಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ ತನಿಶಾ ಕುಪ್ಪಂಡ, ಯೂಟ್ಯೂಬರ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದಾಗ ನಮ್ಮ ಸಿನಿಮಾದ ನಿರ್ಮಾಪಕಿ ಯೂಟ್ಯೂಬರ್ ಎಂಬ ಕಾರಣಕ್ಕೆ ಬೇಡ ಅಂದರು. ಆದರೆ ಆ ವ್ಯಕ್ತಿ ತನ್ನ ಚಾನಲ್ ನಲ್ಲಿ ನನ್ನ ಹೆಸರು ಇಟ್ಟುಕೊಂಡು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ಎಂದು ವಿಡಿಯೋಗಳನ್ನು ಮಾಡುತ್ತಿದ್ದಾನೆ. ಈ ಕಾರಣಕ್ಕೆ ನಾವು ಆ ವ್ಯಕ್ತಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಅಂದರು.