ಕರ್ನಾಟಕ

karnataka

ETV Bharat / entertainment

'ಪವನ್ ಕಲ್ಯಾಣ್ ರೋಷಾಗ್ನಿ ನೋಡಲಿದ್ದೀರಿ': OG ತಂಡ - ಪವನ್ ಕಲ್ಯಾಣ್ ಸಇನಿಮಾಗಳು

ಮುಂಬೈನಲ್ಲಿ 'ಒರಿಜಿನಲ್ ಗ್ಯಾಂಗ್‌ಸ್ಟರ್' ಸಿನಿಮಾ ಶೂಟಿಂಗ್​ ನಡೆದಿದೆ. ಇನ್ನು ಪುಣೆಯಲ್ಲಿ ಚಿತ್ರೀಕರಣ ಆಗಲಿದೆ.

Pawan Kalyan Original Gangster movie
ಪವನ್ ಕಲ್ಯಾಣ್ ಒರಿಜಿನಲ್ ಗ್ಯಾಂಗ್‌ಸ್ಟರ್ ಸಿನಿಮಾ

By

Published : May 2, 2023, 2:34 PM IST

'OG' ದಕ್ಷಿಣ ನಟ ಪವನ್​ ಕಲ್ಯಾಣ್​ ಅವರ ಮುಂಬರುವ ಬಹು ನಿರೀಕ್ಷಿತ ಸಿನಿಮಾ. ಕಳೆದ ವಾರ ಚಿತ್ರ ಸೆಟ್ಟೇರಿದೆ. ಮುಂಬೈನಲ್ಲಿ ಶೂಟಿಂಗ್​​​ ನಡೆದಿದ್ದು, ಸುಜೀತ್ ನಿರ್ದೇಶನದಲ್ಲಿ ಚಿತ್ರ ತಯಾರಾಗುತ್ತಿದೆ. ವರದಿಗಳ ಪ್ರಕಾರ, ಚಿತ್ರತಂಡ ಪವರ್ ಸ್ಟಾರ್ ಅವರ ಸೋಲೋ ಸೀಕ್ವೆನ್ಸ್​ನ ಆರು ದಿನಗಳ ಮುಂಬೈ ವೇಳಾಪಟ್ಟಿ ಮುಕ್ತಾಯಗೊಳಿಸಿದೆ. ಇದೀಗ ಸಿನಿಮಾ ಸಿಬ್ಬಂದಿ ಪುಣೆಗೆ ತೆರಳಿದ್ದಾರೆ.

ಡಿವಿವಿ ಮೂವೀಸ್​ ತನ್ನ ಇನ್​ಸ್ಟಾ ಖಾತೆಯಲ್ಲಿ 'OG' (Original Gangster) ಚಿತ್ರದ ಕೆಲ ಮಾಹಿತಿ ಶೇರ್ ಮಾಡಿದೆ. ಚಿತ್ರದಿಂದ ಪವನ್ ಕಲ್ಯಾಣ್ ಅವರ ನೋಟವನ್ನು ಹಂಚಿಕೊಳ್ಳುತ್ತಾ, ''ಬಾಂಬೆಯಲ್ಲಿ ಶೂಟಿಂಗ್​ ನಿಗದಿ ಆಗಿದೆ, ನಾವು ನಿಮಗೆ ಭರವಸೆ ನೀಡುತ್ತೇವೆ, ಪವನ್ ಕಲ್ಯಾಣ್ ಅವರ ರೋಷಾಗ್ನಿ ನೋಡಲಿದ್ದೀರಿ, ಅವರು ನಟನನ್ನು ಒಜಿ ಎಂದು ಕರೆಯಲಿದ್ದಾರೆ'' ಎಂದು ಬರೆದುಕೊಂಡಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್ ಅಭಿಮಾನಿಗಳು ತಮ್ಮ ಮೆಚ್ಚನ ನಟನ ಬಗ್ಗೆ ಹೊಗಳುತ್ತಿದ್ದಾರೆ. ಡಿವಿವಿ ಮೂವೀಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು "ಅಣ್ಣನ ನೋಟ ನಾರ್ಮಲ್ ಆಗುವುದಿಲ್ಲ, ಅಣ್ಣನ ಈ ಫೋಟೋ ಸಾಕು, ಅವರು ಸಿನಿಮಾ ಹಿಟ್ ಮಾಡುತ್ತಾನೆ, ಚಿತ್ರ ಯಶಸ್ವಿಯಾದರೆ ಸಾಕು, ನಮ್ಮ ಹೃದಯ ಕಲ್ಯಾಣ್​​ ಅಣ್ಣನ ಒಜಿಗಾಗಿ ಕಾಯುತ್ತಿದೆ" ಎಂದು ಹೇಳಿದ್ದಾರೆ. 'ಕಲ್ಯಾಣ್ ಆನ್ ಫೈರ್' ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಮುಂಬೈ ಶೆಡ್ಯೂಲ್ ನಿಗದಿತ ಸಮಯಕ್ಕೂ ಮುನ್ನವೇ ಪೂರ್ಣಗೊಂಡಿದೆ. ಮುಂದಿನ ಚಿತ್ರೀಕರಣ ಪುಣೆಯಲ್ಲಿ ನಡೆಯಲಿದೆ. 'ಒರಿಜಿನಲ್ ಗ್ಯಾಂಗ್‌ಸ್ಟರ್' ಚಿತ್ರಕ್ಕೆ ಮುಂಬೈ ಹಿನ್ನೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ಭಯಭೀತ ಮಾಫಿಯಾ ವ್ಯಕ್ತಿ ಪಾತ್ರದಲ್ಲಿ ಪವನ್ ಕಲ್ಯಾಣ್ ತೆರೆ ಮೇಲೆ ಬರಲಿದ್ದಾರೆ. ಜಪಾನ್‌ನಲ್ಲಿಯೂ ಚಿತ್ರೀಕರಣಗೊಳ್ಳಲಿರುವ ಒಜಿ ವೀಕ್ಷಕರಿಗಾಗಿ ಕೆಲ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳನ್ನು ಸಹ ಹೊಂದಿರುತ್ತದೆ.

ಇದನ್ನೂ ಓದಿ:ನೈಸರ್ಗಿಕ ಸೌಂದರ್ಯ ಆನಂದಿಸುತ್ತಿರುವ ನಾಗಿನ್​ ನಟಿ: ಬ್ಯಾಕ್​​ಲೆಸ್ ವೈಟ್​​ ಡ್ರೆಸ್​ನಲ್ಲಿ ಮನಸೆಳೆದ ಮೌನಿ

ಡಿವಿವಿ ದಾನಯ್ಯ ಒಜಿ ಚಿತ್ರದ ನಿರ್ಮಾಪಕರು. 5 ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಎಸ್ ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪವನ್ ಕಲ್ಯಾಣ್ 'ಒರಿಜಿನಲ್ ಗ್ಯಾಂಗ್‌ಸ್ಟರ್' ಜೊತೆಗೆ 'ಹರಿಹರ ವೀರ ಮಲ್ಲು' ಚಿತ್ರ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಕ್ರಿಶ್ ಜಗರ್ಲಮುಡಿ ನಿರ್ದೇಶನದ ಈ ಚಿತ್ರವು ವೀರ ಮಲ್ಲು ಎಂಬ ಕಾನೂನುಬಾಹಿರ ಬಂಡಾಯಗಾರನ ಕುರಿತಾಗಿದೆ. ಹದಿನೇಳನೇ ಶತಮಾನದ ಮೊಘಲ್ ಸಾಮ್ರಾಜ್ಯಕ್ಕೆ ತಕ್ಕಂತೆ ಕಥೆ ಹೆಣೆಯಲಾಗಿದೆ.

ಇದನ್ನೂ ಓದಿ:'ಟಾರ್ಚರ್​ ಟೈಮ್​': 'ಸಿಟಾಡೆಲ್'​ ಶೂಟಿಂಗ್​ ವೇಳೆ ಸಮಂತಾ ಹೀಗಂದ್ರು!

ಪವನ್ ಕಲ್ಯಾಣ್ ಜೊತೆಗೆ ನಿಧಿ ಅಗರ್ವಾಲ್ ಮತ್ತು ಬಾಬಿ ಡಿಯೋಲ್ ಮಹತ್ವದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರವು ಹಲವು ಪರಿಷ್ಕರಣೆಗಳಿಗೆ ಒಳಗಾಗಿದೆ. ಅರ್ಜುನ್ ರಾಂಪಾಲ್ ಚಕ್ರವರ್ತಿ ಔರಂಗಜೇಬ್ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ,ಬಾಬಿ ಡಿಯೋಲ್ ಈ ಪಾತ್ರ ಪಡೆದುಕೊಂಡಿದ್ದಾರೆ. ರೋಶನಾರಾ ಬೇಗಂ ಪಾತ್ರಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಬದಲಿಗೆ ನರ್ಗಿಸ್ ಫಕ್ರಿ ಆಯ್ಕೆಯಾಗಿದ್ದಾರೆ. 150 ರಿಂದ 200 ಕೋಟಿ ರೂಪಾಯಿ ಈ ಚಿತ್ರದ ಬಜೆಟ್​ ಎಂಬ ವರದಿ ಇದೆ.

ABOUT THE AUTHOR

...view details