ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್ ನಟನೆಯ 'ಬ್ರೋ' ಸಿನಿಮಾ ಭಾರಿ ನಿರೀಕ್ಷೆಗಳ ನಡುವೆ ಜುಲೈ 29ರಂದು ಬಿಡುಗಡೆಯಾಗಿದೆ. ವೀಕೆಂಡ್ ಟ್ರೆಂಡ್ ಆಗಿ ಸದ್ದು ಮಾಡುತ್ತಿರುವ ಈ ಚಿತ್ರ ಎಲ್ಲ ಥಿಯೇಟರ್ನಲ್ಲೂ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಪವನ್ ಕಲ್ಯಾಣ್ ಅಭಿಮಾನಿಗಳ ಮನಸೂರೆಗೊಳ್ಳುವ ಮ್ಯಾನರಿಸಂನೊಂದಿಗೆ ಬಂದರೆ, ಸಾಯಿ ಧರಂ ತೇಜ್ ನಟನೆಯೂ ಸಿನಿಮಾದ ಹೈಲೈಟ್ ಆಗಿದೆ. ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ.
ಎರಡನೇ ದಿನದ ಕಲೆಕ್ಷನ್: 'ಬ್ರೋ' ಸಿನಿಮಾಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ಚಿತ್ರ ಸುಮಾರು 30 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡನೇ ದಿನ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಕಲೆಕ್ಷನ್ ಸ್ವಲ್ಪ ಕಡಿಮೆಯಾದಂತಿದೆ. ಆದರೆ ಈ ಚಿತ್ರ ಎರಡು ದಿನದ ಕಲೆಕ್ಷನ್ ಮೂಲಕ ₹50 ಕೋಟಿ ಕ್ಲಬ್ ಸೇರಿದೆ. ವಾರಾಂತ್ಯದ ಕಾರಣ ಭಾನುವಾರದಂದು ಚಿತ್ರದ ಕಲೆಕ್ಷನ್ ವೇಗವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಟ್ರೇಡ್ ಮೂಲಗಳು ತಿಳಿಸಿವೆ.
'ಬ್ರೋ' ತಮಿಳಿನ 'ವಿನೋದಯ ಸೀತಂ' ಚಿತ್ರದ ರಿಮೇಕ್ ಆಗಿದ್ದು, ತಮಿಳು ನಿರ್ದೇಶಕ ಸಮುದ್ರಖನಿ ನಿರ್ದೇಶಿಸಿದ್ದಾರೆ. ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ಅವರಿಗೆ ಸರಿ ಹೊಂದುವಂತೆ ಚಿತ್ರದ ಕಥೆಯನ್ನು ಕೊಂಚ ಬದಲಾವಣೆ ಮಾಡಲಾಗಿದೆ. ಪವನ್ ಬಗ್ಗೆ ಚಿರಪರಿಚಿತರಾಗಿರುವ ತ್ರಿವಿಕ್ರಮ್ ತಮ್ಮದೇ ಬರವಣಿಗೆಯ ಶೈಲಿಯಲ್ಲಿ ಈ ಕಥೆಯನ್ನು ಕೊಂಚ ತಿರುಚಿದ್ದಾರೆ. ಇದು ಅಭಿಮಾನಿಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.