ಕರ್ನಾಟಕ

karnataka

ETV Bharat / entertainment

ನಾಲ್ಕೇ ದಿನಗಳಲ್ಲಿ 400 ಕೋಟಿ ಕಲೆಕ್ಷನ್​: ದಾಖಲೆ ನಿರ್ಮಿಸಿದ ಪಠಾಣ್​​ - Pathaan movie

ಜಗತ್ತಿನಾದ್ಯಂತ ತೆರೆ ಕಂಡಿರುವ ಪಠಾಣ್​ ಸಿನಿಮಾ ನಾಲ್ಕೇ ದಿನಗಳಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕರಾದ ರಮೇಶ್​ ಬಾಲಾ ಮತ್ತು ತರಣ್​ ಆದರ್ಶ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Pathaan movie collection
ಪಠಾಣ್​ ಕಲೆಕ್ಷನ್

By

Published : Jan 29, 2023, 5:50 PM IST

Updated : Jan 29, 2023, 7:18 PM IST

ಪಠಾಣ್​ ಚಿತ್ರದ ಮೂಲಕ ಬಾಲಿವುಡ್​ ಮತ್ತೆ ಯಶಸ್ಸಿನ ಮಾರ್ಗಕ್ಕೆ ಬಂದಿದೆ. ಬಾಯ್ಕಾಟ್​ನಿಂದ ತತ್ತರಿಸಿದ್ದ ಹಿಂದಿ ಚಿತ್ರರಂಗಕ್ಕೆ ಕಿಂಗ್​ ಖಾನ್​ ಸಿನಿಮಾ ಬೂಸ್ಟರ್​ ಡೋಸ್​ನಂತೆ ಕೆಲಸ ಮಾಟಿದೆ. ಸಿನಿಮಾ ಜನವರಿ 25ರಂದು ತೆರೆಕಂಡು ಭಾರತ ಸೇರಿದಂತೆ ಜಗತ್ತಿನ 100 ದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ತೆರೆ ಕಂಡು ನಾಲ್ಕೇ ದಿನಗಳಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಪಠಾಣ್​ ಕಲೆಕ್ಷನ್​​: ಪಠಾಣ್​ ಸಿನಿಮಾ ಬಿಡುಗಡೆ ಕಂಡು ಕೇವಲ ನಾಲ್ಕೇ ದಿನಗಳಲ್ಲಿ 429 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಸಿನಿಮಾ ವ್ಯವಹಾರಗಳ ವಿಶ್ಲೇಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್​ ಬಾಲಾ ಮಾಹಿತಿ ಪ್ರಕಾರ, ಪಠಾಣ್​ 429 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೋರ್ವ ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್​ ಆದರ್ಶ್ ಟ್ವೀಟ್ ಮಾಡಿದ್ದು, ಚಿತ್ರ ಜಗತ್ತಿನಾದ್ಯಂತ ಒಟ್ಟು 429 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ಚಿತ್ರ ನಿರ್ಮಿಸಿರುವ ಯಶ್​ ರಾಜ್​ ಫಿಲ್ಮ್ಸ್ ಸಹ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.

429 ಕೋಟಿ ರೂಪಾಯಿ ಸಂಗ್ರಹ:ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ನಾಲ್ಕು ವರ್ಷಗಳ ಬ್ರೇಕ್​ ನಂತರ ಮನೋರಂಜನಾ ಕ್ಷೇತ್ರಕ್ಕೆ ಮರಳಿದ್ದಾರೆ. ಪಠಾಣ್​ ಚಿತ್ರದಲ್ಲಿ ಶಾರುಖ್​ ಆ್ಯಕ್ಷನ್​ ಅವತಾರದಲ್ಲಿ ಅಬ್ಬರಿಸಿದ್ದು, ಅವರ ಸಿನಿ ಜರ್ನಿಯಲ್ಲೇ ಈ ಚಿತ್ರ ಹೊಸ ದಾಖಲೆ ಸೃಷ್ಟಿ ಮಾಡಿದೆ. ಪ್ರತಿ ದಿನವೂ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಪಠಾಣ್​ ನಾಲ್ಕೇ ದಿನಗಳಲ್ಲಿ 429 ಕೋಟಿ ರೂಪಾಯಿ ಸಂಗ್ರಹಿಸಿದೆ.

ವಿಶ್ವದಾದ್ಯಂತ ಬಿಡುಗಡೆ ಕಂಡಿರುವ ಪಠಾಣ್​ ಸಿನಿಮಾ ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ.

ವಿವಾದದ ನಡುವೆಯೂ ಯಶಸ್ಸು:ಬೇಶರಂ ರಂಗ್​ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ವೇಷಭೂಷಣ ವಿಚಾರವಾಗಿ ಹಲವರಿಂದ ಸಿನಿಮಾ ಭಾರೀ ಟೀಕೆಗೆ ಒಳಗಾಗಿತ್ತು. ವಿರೋಧದ ನಡುವೆಯೂ ಸಿನಿಮಾ ಜನವರಿ 25 ರಂದು ಬಿಡುಗಡೆಯಾಗಿತ್ತು. ದೇಶದ ಹಲವೆಡೆ ಪ್ರತೀಭಟನೆ ಕೂಡ ನಡೆಯಿತು. ಆದ್ರೆ ಸಿನಿಮಾ ಮಾತ್ರ ಭರ್ಜರಿ ಕಲೆಕ್ಷನ್​ ಮಾಡುತ್ತಿದ್ದು, ಚಿತ್ರ ಪಂಡಿತರ ಹುಬ್ಬೇರುವಂತೆ ಮಾಡಿದೆ. ಇಂದು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಜೊತೆಗೆ, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸೇರಿದಂತೆ ಪ್ರಮುಖರು ಬಣ್ಣ ಹಚ್ಚಿದ್ದಾರೆ.

ಹರ್ಷ ವ್ಯಕ್ತಪಡಿಸಿದ ಕಿಂಗ್​ ಖಾನ್​:ಪಠಾಣ್ ಯಶಸ್ಸನ್ನು ಆಚರಿಸಲು ಪೂರ್ವ ಸಿದ್ಧತೆಯಿಲ್ಲದ AskSRK ಸೆಷನ್ ಅನ್ನು ನಿನ್ನೆ ನಟ ಶಾರುಖ್​ ಖಾನ್​ ನಡೆಸಿದ್ದರು. ಬಾಕ್ಸ್​ ಆಫೀಸ್​ ಕಲೆಕ್ಷನ್​, ಜಗತ್ತಿನೆಲ್ಲೆಡೆ ನಮ್ಮ ಸಿನಿಮಾಗೆ ಸಿನಿಪ್ರಿಯರ ಸ್ಪಂದನೆ ನನಗೆ ಖುಷಿ ಜೊತೆಗೆ ಹೆಮ್ಮೆ ತಂದಿದೆ ಎಂದು ಶಾರುಖ್ ಖಾನ್ ತಿಳಿಸಿದ್ದರು.

ಇದನ್ನೂ ಓದಿ:ಅಬ್ಬಬ್ಬಾ... ಮೂರೇ ದಿನಗಳಲ್ಲಿ 300 ಕೋಟಿ ಕಲೆಕ್ಷನ್​ ಮಾಡಿದ ಪಠಾಣ್​ ಸಿನಿಮಾ

ನಟ ಶಾರುಖ್​ ಖಾನ್​ ತಮ್ಮ ಕುಟುಂಬಕ್ಕಾಗಿ ಪಠಾಣ್​ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಚಿತ್ರದ ಬಗ್ಗೆ ಕುಟುಂಬಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದರು. AskSRK ಸೆಷನ್​ ಅಲ್ಲಿ, ಕಿರಿಯ ಮಗ ಅಬ್ರಾಂನ ಪ್ರತಿಕ್ರಿಯೆಯನ್ನು ತಿಳಿಯಲು ಬಯಸಿದ ಅಭಿಮಾನಿಗಳಿಗೆ ಉತ್ತರಿಸಿದ ಶಾರುಖ್, ''ಅಪ್ಪಾ ಇದು ಎಲ್ಲಾ ಕರ್ಮ ಫಲ'' ಎಂದು ಹೇಳಿದೆ. ಹಾಗಾಗಿ ನಾನು ಅದನ್ನು ನಂಬುತ್ತೇನೆ ಎಂದು ಶಾರುಖ್​ ಖಾನ್​ ಹೇಳಿದರು. ಇನ್ನು, ಯಶ್ ರಾಜ್ ಫಿಲ್ಮ್ಸ್ ತಂಡವು ಸಿನಿಮಾ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಅವಲಂಬಿಸಿದೆ.

ಇದನ್ನೂ ಓದಿ:ಮುಂಬೈ ಚಿತ್ರಮಂದಿರದಲ್ಲಿ ಪಠಾಣ್ ಜೊತೆಗೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಪ್ರದರ್ಶನ

Last Updated : Jan 29, 2023, 7:18 PM IST

ABOUT THE AUTHOR

...view details