ವಿವಾದಗಳ ನಡುವೆಯೂ ಕಳೆದ ಬುಧವಾರ (ಜನವರಿ 25) ತೆರೆ ಕಂಡಿರುವ ಪಠಾಣ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದೇ ವಾರದಲ್ಲಿ 634 ಕೋಟಿ ರೂಪಾಯಿ ಸಂಗ್ರಹಿಸಿ ಮುನ್ನುಗ್ಗುತ್ತಿದೆ. ರಿಲೀಸ್ ಆಗಿ ಒಂದೇ ವಾರದಲ್ಲಿ ಈ ಮಟ್ಟಿಗೆ ಹಣ ಸಂಗ್ರಹಿಸಿರುವ ಮೊದಲ ಬಾಲಿವುಡ್ ಚಿತ್ರ ಕೂಡ ಹೌದು.
ಪಠಾಣ್ ಸಕ್ಸಸ್:ಬಾಲಿವುಡ್ ಚಿತ್ರರಂಗದ ಬಹುಬೇಡಿಕೆಯ ಕಲಾವಿದರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಈ ಪಠಾಣ್ ಸಿನಿಮಾಗೆ ಬಾಯ್ಕಾಟ್ ಎಚ್ಚರಿಕೆ ಇತ್ತು. ಡಿಸೆಂಬರ್ ಎರಡನೇ ವಾರದಲ್ಲಿ ರಿಲೀಸ್ ಆಗಿದ್ದ ಬೇಶರಂ ರಂಗ್ ಹಾಡಿನಲ್ಲಿನ ನಟಿಯ ವೇಷಭೂಷಣ ಈ ಬೆಳವಣಿಗೆಗೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆ ಆದ ಮೊದಲೆರಡು ದಿನಗಳಂತೂ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಕೂಡ ನಡೆಸಲಾಯಿತು. ಪ್ರತಿಭಟನೆಯ ತಲೆಬಿಸಿ ಒಂದು ಕಡೆ ಇದ್ದರೆ, ಚಿತ್ರಕ್ಕೆ ಸಿಕ್ಕ ಉತ್ತಮ ಸ್ಪಂದನೆ ಕೂಡ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಪಠಾಣ್ ಈ ವರ್ಷ ಉತ್ತಮ ಆರಂಭವನ್ನು ಕೊಟ್ಟಿದೆ.
ಪಠಾಣ್ ಕಲೆಕ್ಷನ್:ಪಠಾಣ್ ಸಿನಿಮಾ ಏಳನೇ ದಿನ ಭಾರತದಲ್ಲಿ 28 ಕೋಟಿ ರೂಪಾಯಿ, ವಿದೇಶಗಳಲ್ಲಿ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈವರೆಗೆ ಅಂದರೆ ಕಳೆದ ಏಳು ದಿನಗಳಲ್ಲಿ ಭಾರತದಲ್ಲಿ 395 ಕೋಟಿ ರೂ., ವಿದೆಶದಲ್ಲಿ 239 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಪಠಾಣ್ ಕಲೆಕ್ಷನ್ - ದಿನನಿತ್ಯದ ಲೆಕ್ಕಾಚಾರ:ಜನವರಿ 23ರಂದು ಭಾರತ ಸೇರಿದಂತೆ ಸುಮಾರು 100 ದೇಶಗಳಲ್ಲಿ ಪಠಾಣ್ ಸಿನಿಮಾ ಬಿಡುಗಡೆ ಆಗಿದೆ. ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಐದನೇ ದಿನ 112 ಕೋಟಿ (ಭಾರತದಲ್ಲಿ 70 ಕೊಟಿ ರೂ. + ವಿದೇಶಗಳಲ್ಲಿ 42 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಆರನೇ ದಿನ 41.5 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಏಳನೇ ದಿನ 43 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:ಪಠಾಣ್ ಯಶಸ್ಸು: ಸೂಪರ್ ಹಿಟ್ 'ಬ್ರಹ್ಮಾಸ್ತ್ರ' ನಟಿ ಆಲಿಯಾ ಭಟ್ ಹೀಗಂದ್ರು ನೋಡಿ!
ಪಠಾಣ್ ಸೀಕ್ವೆಲ್: ಚಿತ್ರದ ಅಸಾಧಾರಣ ಯಶಸ್ಸಿನ ಬಳಿಕ ಮಾಧ್ಯಮದೊಂದಿಗಿನ ಇತ್ತೀಚೆಗೆ ಚಿತ್ರತಂಡ ಸಂವಾದ ನಡೆಸಿ ಸಂತೋಷದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿತ್ತು. ಆ ಸಂದರ್ಭ ಎಸ್‌ಆರ್‌ಕೆ ಮತ್ತು ಸಿದ್ಧಾರ್ಥ್ ಆನಂದ್ ಪಠಾಣ್ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ. ಪಠಾಣ್ 2ರಲ್ಲಿ "ದೊಡ್ಡ ಮತ್ತು ಉತ್ತಮ" ಎಂದು ಶಾರುಖ್ ಖಾನ್ ಹೇಳಿದರೆ, ಸಿದ್ಧಾರ್ಥ್ ಆನಂದ್ ಮತ್ತೆ ಸೂಪರ್ ಸ್ಟಾರ್ ಚಿತ್ರವನ್ನು ನಿರ್ದೇಶಿಸುವುದು ಗೌರವಕರ ವಿಷಯ ಎಂದು ಹೇಳಿದರು.